ನಿರ್ದೇಶಕ ಮಂಜು ಉಮೇಶ್ ಕೊಟ್ಯಾನ್ ರೋಚಕ ಮಾಹಿತಿ
ಪೂಜಾರಿ ಜೊತೆ ಚೈತ್ರಾ ಗ್ಯಾಂಗ್ನಿಂದ ನಡೆದಿತ್ತು ಮತ್ತೊಂದು ಮಾತುಕತೆ
ಅಭಿನವ ಹಾಲಶ್ರೀ ನೇತೃತ್ವದಲ್ಲಿ ನಡೆದಿತ್ತು ಮೆಗಾ ಪ್ಲಾನ್
ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪ್ರಕರಣಕ್ಕೆ ನಿರೀಕ್ಷೆಗೂ ಮೀರಿದ ಟ್ವಿಸ್ಟ್ಗಳು ಸಿಗ್ತಿವೆ. ಇಷ್ಟು ದಿನ ಕೈಗೆ ಸಿಗದೇ ಎಸ್ಕೇಪ್ ಆಗಿದ್ದ ಪ್ರಮುಖ ಆರೋಪಿ ಹಾಲಶ್ರೀ ಸ್ವಾಮೀಜಿಯ ಬಂಧನ ಆಗಿದೆ. ಈ ನಡುವೆ ಈ ಕೇಸ್ನಲ್ಲಿ ಗೋವಿಂದ ಪೂಜಾರಿ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ಭಾರತದ ಓಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿ ಕೊನೆಗೂ ಸಿಸಿಬಿ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಗೋವಿಂದ್ ಪೂಜಾರಿ ಜೀವನಾಧಾರಿತ ಚಿತ್ರಕ್ಕೆ ನಡೆದಿತ್ತಂತೆ ಪ್ಲಾನ್
ಹೌದು, ಚೈತ್ರಾ ಮತ್ತು ಅವರ ತಂಡದ ವಿರುದ್ಧ ಪಂಚಕೋಟಿ ನಾಮ ಆರೋಪ ಮಾಡಿರುವ ಉದ್ಯಮಿ ಗೋವಿಂದ್ ಪೂಜಾರಿಯ ಜೀವನಾಧಾರಿತ ಚಿತ್ರಕ್ಕೆ ಪ್ಲಾನ್ ನಡೆದಿತ್ತು ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾವನ್ನು ಸ್ವತಃ ಈಗ ಬಂಧನವಾಗಿರುವ ಹಾಲಶ್ರೀ ಅನೌನ್ಸ್ ಮಾಡಿದ್ದರು. ಎಲ್ಲವೂ ಸರಿ ಇದ್ದಿದ್ದರೆ ಸಿನಿಮಾಕ್ಕೆ ಹಾಲಶ್ರೀ ಕ್ಲಾಪ್ ಮಾಡಬೇಕಿತ್ತು.
ಸೆಟ್ಟೇರದ ಗೋವಿಂದ ಸಿನಿಮಾ!
ಗೋವಿಂದ ಬಾಬು ಪೂಜಾರಿ ಜೀವನಾಧಾರಿತ ಸಿನಿಮಾದ ಸ್ಕ್ರಿಪ್ಟ್ ವರ್ಕ್ನ್ನ ನಿರ್ದೇಶಕ ಮಂಜು ಕೋಟ್ಯಾನ್ ಸಿದ್ಧಪಡಿಸಿದ್ದರು. ಕಳೆದ ಡಿಸೆಂಬರ್ನಲ್ಲಿ ಚೆಫ್ ಟಾಕ್ 15ನೇ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಅಭಿನವ ಹಾಲಶ್ರೀ ಭಾಗಿಯಾಗಿದ್ದರು. ಗೋವಿಂದ್ ಪೂಜಾರಿ ಒಡೆತನದ ಚೆಫ್ ಟಾಕ್ ಕಚೇರಿಯ ಕಾರ್ಯಕ್ರಮ ಇದಾಗಿತ್ತು. ಈ ಕಂಪೆನಿ ಕಾರ್ಪೊರೇಟ್ ಕಂಪನಿಗಳಿಗೆ ಫುಡ್ ಅಂಡ್ ಹಾಸ್ಪಿಟಾಲಿಟಿ ಒದಗಿಸುವ ಕಂಪನಿಯಾಗಿತ್ತು. ಕಾರ್ಯಕ್ರಮದಲ್ಲಿ ಗೋವಿಂದ್ ಪೂಜಾರಿ ಕುರಿತಾದ ಸಿನಿಮಾ ಬಗ್ಗೆ ಅನೌನ್ಸ್ ಮಾಡಿದ್ದರು. ಆರ್ಎಸ್ಎಸ್ ಸಂಘ ಪರಿವಾರ ಬಗ್ಗೆ ಸಿನಿಮಾ ಮಾಡಲು ಸಿದ್ಧತೆ ಕೂಡ ನಡೆದಿತ್ತು. ಆದ್ರೆ ಅಂತಿಮವಾಗಿ ತನ್ನದೇ ಸ್ಕ್ರೀಪ್ ಪ್ಲೇನಲ್ಲಿ ನಟಿಸಿ ಗೋವಿಂದ್ ಪೂಜಾರಿಗೆ ಹಾಲಶ್ರೀ ವಂಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಖುದ್ದು ಗೋವಿಂದ ಪೂಜಾರಿಯ ಸಿನಿಮಾ ನಿರ್ದೇಶಿಸಬೇಕಿದ್ದ ಮಂಜು ಉಮೇಶ್ ಕೊಟ್ಯಾನ್ ಮಾಹಿತಿ ನೀಡಿದ್ದಾರೆ. ಸಿನಿಮಾಗೆ ಮಾತುಕತೆ ನಡೆದಿತ್ತು. ಈ ವೇಳೆ ಅವರು ಹೇಳಿದ್ದರು, ನನ್ನ ಜೀವನ ಮಾತ್ರ ಸಿನಿಮಾದಲ್ಲಿ ತೋರಿಸೋದು ಬೇಡವಯ್ಯ. ಜೊತೆಗೆ ಹಿಂದೂತ್ವ, ಆರ್ಎಸ್ಎಸ್ ಬಗ್ಗೆಯೂ ತೋರಿಸೋಣ ಎಂದಿದ್ದರು. ಹಾಗೆಯೇ ಅವರು ಮೊದಲು ಮುಂಬೈನಲ್ಲಿದ್ದರು, ಅಲ್ಲಿನ ಅಂಡರ್ವರ್ಲ್ಡ್ ಬಗ್ಗೆಯೂ ತೋರಿಸೋಣ. ಒಂದು ಫುಲ್ ಪ್ಯಾಕೇಜ್ ಚಿತ್ರ ಮಾಡೋಣ ಎಂದಿದ್ದರು ಅಂತಾ ಮಂಜು ಉಮೇಶ್ ಕೊಟ್ಯಾನ್ ಹೇಳಿದ್ದಾರೆ.
ವಿಶೇಷ ಬರದಿ: ಶಿವಕುಮಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ