newsfirstkannada.com

ಚೈತ್ರಾ ಕುಂದಾಪುರ ವಂಚನೆ ಆರೋಪ ಕೇಸ್​ಗೆ ಆಡಿಯೋ ಟ್ವಿಸ್ಟ್‌; ಸ್ಫೋಟಕ ಸಂಭಾಷಣೆಯಲ್ಲಿ ಅಂಥದ್ದೇನಿದೆ..?

Share :

16-09-2023

    ಪ್ರಸಾದ್-ಚೈತ್ರಾ ಮಾತುಕತೆ ಎನ್ನಲಾಗಿರುವ ಆಡಿಯೋ ಲಭ್ಯ

    ಹಣ ಕೊಟ್ಟು ಗೋವಿಂದ ಬಾಬು ಪೂಜಾರಿ ಆಪ್ತ ಪ್ರಸಾದ್ ಕರೆ

    ತನಗೇನೂ ಗೊತ್ತಿಲ್ಲದಂತೆ ಮಾತನಾಡಿರುವ ಚೈತ್ರಾ ಕುಂದಾಪುರ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸ್ತೀನಿ ಎಂದು ನಂಬಿಸಿ ಐದು ಕೋಟಿ ವಂಚಿಸಿದ ಆರೋಪ ಪ್ರಕರಣದಲ್ಲಿ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಜೈಲು ಸೇರಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದ್ದು ಎನ್ನಲಾಗಿರುವ ಆಡಿಯೋ ಒಂದು ಲಭ್ಯವಾಗಿದೆ.

5 ಕೋಟಿ ರೂಪಾಯಿ ಹಣವನ್ನ ಪಡೆದಿರುವ ಬಗ್ಗೆ ಆಡಿಯೋ ಲಭ್ಯವಾಗಿದೆ. ಆರೋಪಿ ಚೈತ್ರಾ ಕುಂದಾಪುರ ಗ್ಯಾಂಗ್​ಗೆ ಹಣ ನೀಡಿದ ಬಳಿಕ ಗೋವಿಂದ ಬಾಬು ಪೂಜಾರಿ ಅವರ ಆಪ್ತ ಪ್ರಸಾದ್ ಮಾತನಾಡಿದ್ದು ಎನ್ನಲಾಗುತ್ತಿರುವ ಆಡಿಯೋ ಇದಾಗಿದೆ.

ಇದನ್ನೂ ಓದಿ:ಚೈತ್ರಾ ಕುಂದಾಪುರ 5 ಕೋಟಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್; ಸಂಧಾನ ಸಭೆಯಲ್ಲಿ ನಡೆದ ಹೈಡ್ರಾಮಾ ಹಲ್​ಚಲ್​..!

ಚೈತ್ರಾ-ಪ್ರಸಾದ್ ಎನ್ನಲಾಗಿರುವ ಆಡಿಯೋದಲ್ಲಿ ಏನಿದೆ..?

ಪ್ರಸಾದ್‌: ಹರಿ ಓಂ
ಚೈತ್ರಾ ಕುಂದಾಪುರ: ಹಾ ಪ್ರಸಾದ್‌
ಪ್ರಸಾದ್‌: ಮುಟ್ಟಿಸಿದೆ
ಚೈತ್ರಾ ಕುಂದಾಪುರ: ಓ ಆಯ್ತಾ?
ಪ್ರಸಾದ್‌: ಹಾ
ಚೈತ್ರಾ ಕುಂದಾಪುರ: ಇಷ್ಟು ಬೇಗ ಓ.. 6-22 ಆಗಿ ಹೋಯ್ತಲ್ಲಾ
ಪ್ರಸಾದ್‌: ಹೌದೌದು
ಚೈತ್ರಾ ಕುಂದಾಪುರ: ಗೊತ್ತೇ ಇಲ್ಲ. ಬೇಗ ಹೋಗಿದ್ರಾ?
ಪ್ರಸಾದ್‌: ಬೇಗ ಇಲ್ಲ ಲೇಟ್‌ ಆಗಿತ್ತು.
ಚೈತ್ರಾ ಕುಂದಾಪುರ: ಹೌದಾ.. ಓಹೋ..
ಪ್ರಸಾದ್‌: ಅಂದ್ರೆ 6 ಗಂಟೆ ಹೇಳಿದ್ರಲ್ಲ. 6 ಕಾಲ್ ಆಯ್ತು. ಈಗ ಜಸ್ಟ್ ಮುಟ್ಟಿಸಿದ್ದಷ್ಟೇ.
ಚೈತ್ರಾ ಕುಂದಾಪುರ: ಹೌದಾ.. ಹಾ ಸರಿ ಸರಿ. ಅವರಿಗೆ ಫೋನ್ ಮಾಡಿ ಹೇಳಬೇಕಿತ್ತು. ಅವರಿಗೆಲ್ಲಾ ಹೇಳ್ಬೇಕಿತ್ತು.
ಪ್ರಸಾದ್‌: ಗಗನ್‌ಗೆ ಹೇಳಿದೆ.
ಚೈತ್ರಾ ಕುಂದಾಪುರ: ಹೌದಾ ಸರಿಸರಿ
ಪ್ರಸಾದ್‌: ಗಗನ್‌ಗೆ ಮಾಡಿ ನಿಮಗೆ ಮಾಡಿದೆ ನಾರ್ಮಲ್ ಸಂಘಟನೆಯ ಇಬ್ರು ಹುಡುಗರು ಇದ್ರಷ್ಟೇ
ಚೈತ್ರಾ ಕುಂದಾಪುರ: ಹೌದಾ.. ಎಲ್ಲಿ ಇದ್ದಿದ್ದು?
ಪ್ರಸಾದ್‌: ಯಾವ್ದದು. ಕಾರ್ಕಳ ರೋಡ್ ಒಳಗೆ
ಚೈತ್ರಾ ಕುಂದಾಪುರ: ಹೌದಾ ಮೋಸ್ಟೀ ಸುನೀಲ್‌ಕುಮಾರ್ ಕಾರ್ಕಳ ಮನೆಗೆ ಹೋಗ್ತಾರೆನೋ?
ಪ್ರಸಾದ್‌: ಸುನಿಲ್ ಕುಮಾರ್‌ ಮನೇಗಾ
ಚೈತ್ರಾ ಕುಂದಾಪುರ: ಮೇಬಿ.. ಇಲ್ಲ ಅಲ್ಲೇಕೆ ಬರ್ತಾರೆ.
ಪ್ರಸಾದ್‌: ಹೌದೌದು
ಚೈತ್ರಾ ಕುಂದಾಪುರ: ಹುಂ ನೋಡೋಣ
ಪ್ರಸಾದ್‌: ಹಾ ಸರಿಸರಿ.. ಅವರಿಗೊಂದು ಹೇಳಿಬಿಡಿ ಆಮೇಲೆ.
ಚೈತ್ರಾ ಕುಂದಾಪುರ: ಯಾರಿಗೆ?
ಪ್ರಸಾದ್‌: ನಾನೇ ಮಾಡಿದ್ದೇನೆ ನೀವು ಆಮೇಲೆ ಒಂದ್ ಫೋನ್ ಮಾಡಿ
ಚೈತ್ರಾ ಕುಂದಾಪುರ: ನಾನೇ ಒಂದ್ಸಲ ಕಾಲ್ ಮಾಡ್ತೇನೆ
ಪ್ರಸಾದ್‌: ಸರಿ ಸರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ ವಂಚನೆ ಆರೋಪ ಕೇಸ್​ಗೆ ಆಡಿಯೋ ಟ್ವಿಸ್ಟ್‌; ಸ್ಫೋಟಕ ಸಂಭಾಷಣೆಯಲ್ಲಿ ಅಂಥದ್ದೇನಿದೆ..?

https://newsfirstlive.com/wp-content/uploads/2023/09/CHIATRA-1.jpg

Load More