newsfirstkannada.com

ಚೈತ್ರಾ ಅಂಡ್ ಗ್ಯಾಂಗ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆಗೆ CCB ಸಿದ್ಧತೆ.. ಸದ್ಯ ಆರೋಪಿಗಳು ಇರುವುದು ಎಲ್ಲಿ?

Share :

02-11-2023

    ಎಂಎಲ್ಎ ಟಿಕೆಟ್ ಡೀಲ್ ಬಗ್ಗೆ 68 ಸಾಕ್ಷಿಗಳ ಹೇಳಿಕೆ ಪಡೆದಿರುವ ಸಿಸಿಬಿ

    7 ಮಂದಿ ವಿರುದ್ಧ ಚಾರ್ಜ್ ಶೀಟ್ ಸಿದ್ಧಪಡಿಸಿರುವ ಸಿಸಿಬಿ ಅಧಿಕಾರಿಗಳು

    ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಅಧಿಕಾರಿಗಳು

ಬೆಂಗಳೂರು: ಚೈತ್ರಾ ಆ್ಯಂಡ್ ಗ್ಯಾಂಗ್​ನಿಂದ ಎಂಎಲ್​ಎ ಟಿಕೆಟ್​ ಡೀಲ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಅಧಿಕಾರಿಗಳು ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಗೋವಿಂದ ಬಾಬು ಪೂಜಾರಿ ಎನ್ನುವವರಿಗೆ ಎಂಎಲ್​ಎ ಟಿಕೆಟ್​ ಕೊಡಿಸುವುದಾಗಿ ಕೋಟಿ ಕೋಟಿ ರೂಪಾಯಿಗಳನ್ನು ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 7 ಆರೋಪಿಗಳು ವಂಚನೆ ಮಾಡಿದ್ದರು. ಮುಂದಿನ ವಾರ ಈ ಎಲ್ಲರ ವಿರುದ್ಧ ಕೋರ್ಟ್​​ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಅಧಿಕಾರಿಗಳು ತಯಾರಿ ಮಾಡುತ್ತಿದ್ದಾರೆ. ಈ ಎಲ್ಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಆರೋಪಿ ಚೈತ್ರಾ

ಸಿಸಿಬಿ ಅಧಿಕಾರಿಗಳು ಒಟ್ಟು 68 ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ಎಲ್ಲರಿಂದ ಹೇಳಿಕೆ ಪಡೆಯುವ ಮೂಲಕ ಚಾರ್ಜ್​ಶೀಟ್ ಸಿದ್ಧತೆ ಮಾಡಿಕೊಂಡಿದ್ದಾರೆ. ಆರೋಪಿಗಳಿಂದ ದೊಡ್ಡ ಮಟ್ಟದ ಅಮೌಂಟ್ ಅಂದರೆ 4 ಕೋಟಿ 11 ಲಕ್ಷ ರೂ.ಗಳನ್ನು ರಿಕವರ್ ಮಾಡಲಾಗಿದೆ. ದೂರುದಾರ ಗೋವಿಂದ ಬಾಬು ಪೂಜಾರಿ ಬಳಿ ಪ್ರಕರಣ ಸಂಬಂಧ ಎಲ್ಲ ಆಡಿಯೋ, 10 ವಿಡಿಯೋ, ಮೊಬೈಲ್​ ಡೇಟಾ ಹಾಗೂ ದಾಖಲೆಗಳನ್ನು ಸಿಸಿಬಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಅಂಡ್ ಗ್ಯಾಂಗ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆಗೆ CCB ಸಿದ್ಧತೆ.. ಸದ್ಯ ಆರೋಪಿಗಳು ಇರುವುದು ಎಲ್ಲಿ?

https://newsfirstlive.com/wp-content/uploads/2023/09/CHAITRA_KUNDAPUR-1.jpg

Load More