ನಾನವಳಲ್ಲ ಎಂದ ಚೈತ್ರಾ ಬಳಿ ಇದ್ಯಂತೆ ಕೋಟಿ ಕೋಟಿ ಹಣ!
ನಿನ್ನೆ ವಿಕ್ಟೋರಿಯಾ ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್
ಯಾರದ್ದೋ ದುಡ್ಡಲ್ಲಿ ಚೈತ್ರಾ ಗ್ಯಾಂಗ್ ಮಾಡಿತ್ತಾ ಜಾತ್ರೆ..?
ಬೆಂಗಳೂರು: ಉದ್ಯಮಿ ಗೋವಿಂದ್ ಬಾಬು ಪೂಜಾರಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ತನಿಖೆಯನ್ನು ಸಿಸಿಬಿ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಬಿಜೆಪಿ ಟಿಕೆಟ್ ಹೆಸರಲ್ಲಿ 5 ಕೋಟಿ ರೂಪಾಯಿ ಪಂಗನಾಮ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ಚೈತ್ರಾ ನಿನ್ನೆ ವಿಕ್ಟೋರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಹೌದು, ಗೋವಿಂದ ಪೂಜಾರಿಗೆ 5 ಕೋಟಿ ರೂಪಾಯಿ ವಂಚನೆ ಕೇಸ್‌ನಲ್ಲಿ ಚೈತ್ರಾ ಕುಂದಾಪುರ ಬಂಧನವಾಗಿತ್ತು. ಮಾತಿನ ಮೂಲಕವೇ ಮರುಳು ಮಾಡೋ ಕಲೆಯನ್ನ ಕರಗತ ಮಾಡಿಕೊಂಡಿದ್ದ ಕಲಾವಿದೆ ಚೈತ್ರಾಳನ್ನ ಕೋರ್ಟ್ ಸಿಸಿಬಿ ಕಸ್ಟಡಿಗೆ ಕೊಟ್ಟಿತ್ತು. ಯಾವಾಗ ಸಿಸಿಬಿ ವಿಚಾರಣೆಗೆ ಕರೆೆತಂತೊ ಚೈತ್ರಾ ಅನಾರೋಗ್ಯಕ್ಕೆ ಒಳಗಾದರು. ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಕಾಲ ಕಳೆದಿದ್ದರು. ಇದರ ಮಧ್ಯೆ ಎದೆನೋವು ಕೂಡ ಕಾಣಿಸಿಕೊಂಡಿದೆ ಎಂದು ವೈದ್ಯರ ಬಳಿ ಚೈತ್ರಾ ಕುಂದಾಪುರ ದೂರು ನೀಡಿದ್ದರು. ನಿನ್ನೆ ತಪಾಸಣೆ ಬಳಿಕ ಚೈತ್ರಾ ಆರೋಗ್ಯ ಚೆನ್ನಾಗಿಯೇ ಇದ್ದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಬಳಿಕ ಸಿಸಿಬಿಯಿಂದ ಚೈತ್ರಾ ವಿಚಾರಣೆ
ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಿದ್ದಂತೆ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ವಿಕ್ಟೋರಿಯಾ ಆಸ್ಪೆತ್ರೆಯಿಂದ ಕರೆದೊಯ್ತು ಸಿಸಿಬಿ ಕಚೇರಿಯಲ್ಲಿ ಚೈತ್ರಾಳನ್ನ ಅಧಿಕಾರಿಗಳು ಎನ್‌ಕ್ವೈರಿ ಮಾಡಿದ್ದಾರೆ. 5 ಕೋಟಿ ರೂಪಾಯಿ ವಂಚನೆ ಕೇಸ್‌ನ ಅಸಲಿಯನ್ನ ಬಯಲು ಮಾಡಲು ಆಕೆಗೆ ಇಂಟ್ರಾಗೇಟ್ ಮಾಡಿದ್ದಾರೆ.
ನಾನವಳಲ್ಲ ಎಂದ ಚೈತ್ರಾ ಬಳಿ ಕೋಟಿ ಕೋಟಿ ಹಣ
ಚೈತ್ರದ ಬೆನ್ನುಬಿದ್ದಿರೋ ಸಿಸಿಬಿಗೆ ಇವತ್ತು ಶಾಕ್ ಎದುರಾಗಿತ್ತು. ನನಗೇನು ಗೊತ್ತಿಲ್ಲ ಅಂತ ಹೇಳ್ತಿರೋ ಚೈತ್ರಾ ಬಳಿ ಕೋಟಿ ಕೋಟಿ ಹಣದ ಖಜಾನೆಯೇ ಇದೆ ಅನ್ನೋದು ರಿವೀಲ್ ಆಗಿದೆ. ಜೊತೆಗೆ ಬ್ಯಾಂಕ್‌ವೊಂದಲ್ಲಿ ಚೈತ್ರಾ ಕುಂದಾಪುರ ಹೆಸರಲ್ಲಿ ಕೋಟಿ ಕೋಟಿ ಎಫ್‌ಡಿ ಇರೋದು ಪತ್ತೆಯಾಗಿದೆ ಎನ್ನಲಾಗಿದೆ. ಅಲ್ಲದೇ ಚೈತ್ರಾ ಸೇರಿ ಇನ್ನಿತರ ಆರೋಪಿಗಳ ಹೆಸರಿನಲ್ಲೂ ಎಫ್‌ಡಿ ಇರೋದನ್ನ ಸಿಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ವಂಚನೆ ಕೇಸ್‌ನಲ್ಲಿ ಬಂಧನಕೊಳಗಾಗಿರೋ ಚೈತ್ರಾ ಕುಂದಾಪುರ ಹೆಸರಲ್ಲಿ 1 ಕೋಟಿ 8 ಲಕ್ಷ ರೂಪಾಯಿ ಎಫ್‌ಡಿ ಇರೋದು ತನಿಖೆಯಲ್ಲಿ ಗೊತ್ತಾಗಿದೆ. ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಚೈತ್ರಾ ಹೆಸರಿನಲ್ಲಿ ಈ ಎಫ್‌ಡಿ ಇದ್ದು, 3 ಲಾಕರ್ನಲ್ಲಿ 40 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕೆಟ್ ಸಿಕ್ಕಿದೆ. ಅಲ್ಲದೇ ಕಾರ್ಕಳದ ಹಿರಿಯಡ್ಕದಲ್ಲಿ ಪ್ರಾಪರ್ಟಿಯೊಂದಕ್ಕೆ 60 ಲಕ್ಷ ರೂಪಾಯಿ ಇನ್ವೆಸ್ಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ವಂಚನೆ ಕೇಸ್‌ನ 2ನೇ ಆರೋಪಿ ಗಗನ್ ಬೆಂಗಳೂರಿನಲ್ಲಿ ಸೈಟ್ ಪರ್ಚೇಸ್ ಮಾಡಿರೋದು ಬೆಳಕಿಗೆ ಬಂದಿದೆ. 7ನೇ ಆರೋಪಿ ಶ್ರೀಕಾಂತ್ 10 ಲಕ್ಷ ಮೌಲ್ಯದ ಒಡವೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೀಗ ಎಲ್ಲಾ ಆರೋಪಿಗಳ ಹಣ, ಚಿನ್ನಾಭರಣವನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟಾರೆ, ಮಾತನ್ನೇ ಬಂಡವಾಳವಾಗಿಸಿಕೊಂಡು ಎಲ್ಲರನ್ನ ಮರುಳು ಮಾಡಿದ್ದ ಚೈತ್ರಾ ಇದೀಗ ಸಿಸಿಬಿ ಸೆರೆವಾಸದಲ್ಲಿದ್ದಾರೆ. ಇದೀಗ ಆಕೆಯನ್ನ ವಿಚಾರಣೆ ಒಳಪಡಿಸಲಾಗಿದ್ದು, ಅಧಿಕಾರಿಗಳ ತನಿಖೆಗೆ ಚೈತ್ರಾ ಸ್ಪಂದಿಸ್ತಾರಾ? ವಂಚನೆ ಕೇಸ್‌ನ ಇಂಚಿಂಚು ಮಾಹಿತಿಯನ್ನ ಸಿಸಿಬಿಗೆ ಒಪ್ಪಿಸ್ತಾರಾ ಅಂತಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ