newsfirstkannada.com

5 ಕೋಟಿ ಡೀಲ್​ ಕೇಸ್​​.. ಚೈತ್ರಾ ಕುಂದಾಪುರ ಮತ್ತೊಂದು ನಾಟಕ ಬಯಲು

Share :

18-09-2023

  5 ಕೋಟಿ ಡೀಲ್​​ನಲ್ಲಿ ಸಿಕ್ಕಿಬಿದ್ದ ಚೈತ್ರಾ ಕುಂದಾಪುರ

  ತಪ್ಪಿಸಿಕೊಳ್ಳಲು ಮಾಡಿದ್ದ ಚೈತ್ರಾ ನಾಟಕ ಬಯಲು

  ಚೈತ್ರಾ ಕುಂದಾಪುರ ಮಾಡಿದ್ದ ಬೃಹತ್​ ನಾಟಕವೇನು?

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕೋಟಿಗಟ್ಟಲೇ ವಂಚನೆ ಮಾಡಿರೋ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರೋ ಆರೋಪಿ ಚೈತ್ರಾ ಕುಂದಾಪುರ ಈಗ ಮತ್ತೊಂದು ನಾಟಕ ಆಡುತ್ತಿದ್ದಾರೆ ಎನ್ನಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆದ ಬೆನ್ನಲ್ಲೇ ಈ ನಾಟಕದ ವಿಚಾರ ಬೆಳಕಿಗೆ ಬಂದಿದೆ.

ಹೌದು, ಚೈತ್ರಾ ಕುಂದಾಪುರ ಬೃಹನ್ನಾಟಕದ ಸೆಕೆಂಡ್ ಪಾರ್ಟ್ ಬಯಲಾಗಿದೆ. ಡೀಲ್ ಕೇಸ್​​ನಿಂದ ತಪ್ಪಿಸಿಕೊಳ್ಳಲು ಚೈತ್ರಾ ಉದ್ಯಮಿ ಗೋವಿಂದ ಪೂಜಾರಿ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದಾಳೆ. ಈ ಮೂಲಕ ಗೋವಿಂದ ಪೂಜಾರಿ ಅಕ್ರಮ ಹಣದ ವ್ಯವಹಾರ ಎಂದು ಬಿಂಬಿಸಲು ಚೈತ್ರಾ ಯತ್ನಿಸೋಕೆ ಮಾಸ್ಟರ್ ಪ್ಲಾನ್ ಮಾಡಿದ್ದಳು ಅನ್ನೊದು ಗೊತ್ತಾಗಿದೆ.

ರಹಸ್ಯ ವರದಿ ಮಾಡುವ ಮೂಲಕ ಅವ್ಯವಹಾರ ಬಯಲಿಗೆಳೆಯುತ್ತಿದ್ದೇನೆ ಎಂದು ಬಿಂಬಿಸುವ ಚೈತ್ರಾ ಮಾಡಿದ್ದರು. ಅದು ಪ್ರಕರಣ ದಾಖಲಾಗಿ ತಲೆಮರೆಸಿಕೊಂಡಿದ್ದ ಸಂದರ್ಭದಲ್ಲಿ ಹುಟ್ಟುಹಾಕಿದ ನಾಟಕ ಈಗ ಬಯಲಾಗಿದೆ. ತಾನು ಮಾತ್ರ ಸಾಚಾ ಉಳಿದವರೆಲ್ಲ ಲೂಟಿಕೋರರು ಎಂದು ಬಿಂಬಿಸಲು ಯತ್ನ ಮಾಡಿದ್ದರು ಎನ್ನಲಾಗಿದೆ.

ಗೋವಿಂದ ಪೂಜಾರಿಗೆ ಮೋಸಗಾರ ಪಟ್ಟ

ಬಿಜೆಪಿ ಟಿಕೆಟ್ ಪಡೆಯಲು ಏನೆಲ್ಲಾ ಕಸರತ್ತು ಮಾಡಿದ್ದಾರೆ ಎಂದು ವಿವರಿಸಿರುವ ಪತ್ರ ಇದಾಗಿತ್ತು. ಕಥಾನಕದಿಂದ ಹೊರಗೆ ನಿಂತು ವಿವರಿಸಿದ ಮಾದರಿಯಲ್ಲಿರುವ ಪತ್ರ ಬಹಿರಂಗವಾಗಿದೆ. ಆದಾಯ ತೆರಿಗೆ ಇಲಾಖೆಗೆ ಪತ್ರ ಪೋಸ್ಟ್ ಆಗಿರುವ ಸಾಧ್ಯತೆ ಇದೆ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಮಾಡಿರುವ ಪ್ಲ್ಯಾನ್ ಇದಾಗಿದ್ದು, ಗೋವಿಂದ ಪೂಜಾರಿ ಮತ್ತು ಟೀಂ ಮೇಲೆ ಮೋಸಗಾರರ ಪಟ್ಟ ಹೊರಿಸಲು ಯತ್ನಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5 ಕೋಟಿ ಡೀಲ್​ ಕೇಸ್​​.. ಚೈತ್ರಾ ಕುಂದಾಪುರ ಮತ್ತೊಂದು ನಾಟಕ ಬಯಲು

https://newsfirstlive.com/wp-content/uploads/2023/09/Chaitra-Kundapura.jpg

Load More