ವಂಚನೆ ಆರೋಪ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರಾ
ಆಸ್ಪತ್ರೆಯಲ್ಲಿ ಚೈತ್ರಾಗೆ ಚಿಕಿತ್ಸೆ, CCB ಪೊಲೀಸ್ರು ಹೇಳಿದ್ದೇನು?
ಕಳೆದ 3 ದಿನದಿಂದ ಸರಿಯಾದ ನಿದ್ದೆ, ಊಟ ಮಾಡಿರಲಿಲ್ಲ
ಬೆಂಗಳೂರು: ವಂಚನೆ ಆರೋಪದ ಪ್ರಕರಣದಲ್ಲಿ ಸದ್ಯ ಸಿಸಿಬಿ ವಶದಲ್ಲಿರುವ ಹಿಂದೂಪರ ನಾಯಕಿ ಚೈತ್ರಾ ಕುಂದಾಪುರ ಅನಾರೋಗ್ಯದಿಂದ ಮೂರ್ಛೆ ಹೋಗಿದ್ದಾರೆ. ಕಳೆದ 3 ದಿನದಿಂದ ಸರಿಯಾದ ಊಟ, ನಿದ್ದೆ ಮಾಡಿರಲಿಲ್ಲ, ಅಲ್ಲದೇ ಮಾತ್ರೆ ಕೂಡ ಸೇವಿಸಿಲ್ಲದ ಕಾರಣ ಇಂದು ಮೂರ್ಛೆ (ಪಿಡ್ಸ್) ರೋಗದಿಂದ ಹೋಗಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಮಹಿಳಾ ಸಾಂತ್ವನ ಕೇಂದ್ರದಿಂದ ಪೊಲೀಸರು ಕರೆತಂದು ಅರ್ಧ ಗಂಟೆಯಲ್ಲಿ ಚೈತ್ರಾ ಪ್ರಜ್ಞೆ ತಪ್ಪಿದ್ದಾರೆ. ಸದ್ಯ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಅಧಿಕಾರಿಗಳು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸಿಸಿಬಿ ಕಚೇರಿಗೆ ಬಂದ 10 ನಿಮಿಷದಲ್ಲಿ ಚೈತ್ರಾ ಅಸ್ವಸ್ಥರಾಗಿದ್ದರು. ಆಗ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ 2 ದಿನ ಕೂಡ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೂ ತುಂಬಾ ಆಯಾಸದಿಂದ ಬಳಲಿ ಪ್ರಜ್ಞೆ ತಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿ: ಚೈತ್ರಾ ಕುಂದಾಪುರ ವಿರುದ್ಧದ ವಂಚನೆ ಆರೋಪ ಕೇಸ್; ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಅಭಿನವ ಶ್ರೀ
ಇನ್ನು ಚೈತ್ರಾ ಕುಂದಾಪುರ ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಅವರ ಸಂಬಂಧಿಕರನ್ನ ಸಂಪರ್ಕ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅವರಿಗೆ ಏನಾದರೂ ಆರೋಗ್ಯ ಸಮಸ್ಯೆ ಇತ್ತ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ