newsfirstkannada.com

ಚೈತ್ರಾ ಕುಂದಾಪುರ ಬಳಸುತ್ತಿದ್ದ ಕಿಯಾ ಕಾರು ಮತ್ತು ಆಸ್ತಿ ಜಪ್ತಿ; ಎಷ್ಟು ಕೋಟಿ ಸಿಕ್ತು ಗೊತ್ತಾ?

Share :

17-09-2023

    ಕೋಟಿ ರೂಪಾಯಿ ಫಿಕ್ಸೆಡ್ ಡೆಪೋಸಿಟ್ ಇಟ್ಟಿದ್ದ ಚೈತ್ರಾ ಕುಂದಾಪುರ

    65 ಲಕ್ಷ ರುಪಾಯಿ ಮೊತ್ತದ ಚಿನ್ನಾಭರಣ ಜಪ್ತಿ ಮಾಡಿದ ಸಿಸಿಬಿ ಪೊಲೀಸರು

    ಚೈತ್ರಾ ಕುಂದಾಪುರ ಬಳಸುತ್ತಿದ್ದ ಕಿಯಾ ಕಾರು ಕೂಡ ಸಿಸಿಬಿ ವಶಕ್ಕೆ

ಬಹುಕೋಟಿ ವಂಚನೆ ಆರೋಪ ಮೇರೆಗೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರಳನ್ನು ಸಿಸಿಬಿ ಪೊಲಿಸರು ಅರೆಸ್ಟ್​ ಮಾಡಿದ್ದಾರೆ. ಇದೀಗ ಆಕೆಯ ಆಸ್ತಿಯನ್ನು ಸಹ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಚೈತ್ರಾ ಕುಂದಾಪುರ ಉಪ್ಪೂರು ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಇರಿಸಿದ್ದ ಆಸ್ತಿಯನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ವಿಡಿಯೋ ಚಿತ್ರೀಕರಣ ಮಾಡಿ ಸಾಕ್ಷಿಗಳ ಸಮ್ಮುಖದಲ್ಲಿ ಆಸ್ತಿ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಸಿಸಿಬಿ ಪೊಲೀಸರು ಸುಮಾರು 1 ಕೋಟಿ 8 ಲಕ್ಷ ರೂಪಾಯಿ ಫಿಕ್ಸೆಡ್ ಡೆಪೋಸಿಟ್ ಜಪ್ತಿ ಮಾಡಿದ್ದು, ಸೊಸೈಟಿ ಯಲ್ಲಿ 40 ಲಕ್ಷ ರುಪಾಯಿ ನಗದು ರಿಕವರಿ ಮಾಡಿದ್ದಾರೆ. ಸುಮಾರು 320 ಗ್ರಾಂ ಚಿನ್ನದ ಒಡವೆಗಳನ್ನು ಸಿಸಿಬಿ ವಶದಲ್ಲಿರಿಸಿಕೊಂಡಿದ್ದಾರೆ ಮತ್ತು 65 ಲಕ್ಷ ರುಪಾಯಿ ಮೊತ್ತದ ಚಿನ್ನಾಭರಣ ಸಿಸಿಬಿ ಜಪ್ತಿ ಮಾಡಿದ್ದಾರೆ. ಚೈತ್ರಾ ಮತ್ತು ಶ್ರೀಕಾಂತ ನಾಯಕ್ ಅವರ ಹೆಸರಲ್ಲಿ ಇರುವ ಜಂಟಿ ಖಾತೆಗಳು ಫ್ರೀಜ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಚೈತ್ರಾ ಕುಂದಾಪುರ ಕಾರು ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರಿಂದ ಚೈತ್ರಾ ಕುಂದಾಪುರ ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಆಕೆ ಬಳಸುತ್ತಿದ್ದ ಕಿಯಾ ಕಾರು ಮುಧೋಳದಲ್ಲಿ ಪತ್ತೆಯಾಗಿದೆ.

ಕಿರಣ್ ಗನಪ್ಪಗೋಳ ಬಳಿ ಚೈತ್ರಾ ಕುಂದಾಪುರ ಅವರ ಕಾರು ಇತ್ತು. ಸೊಲ್ಲಾಪುರದಿಂದ ಕಾರು ತರುವಂತೆ ಚೈತ್ರಾ ಕಿರಣ್​ಗೆ ತಿಳಿಸಿದ್ದರು.

ಕಿರಣ್ ಗನಪ್ಪಗೋಳ ಸ್ವಂತ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದು, ಸೊಲ್ಲಾಪುರದಿಂದ ಮುಧೋಳಕ್ಕೆ ಕಾರು ತಂದಿರಿಸಿದ್ದ.

ಇಂದು ಚೈತ್ರಾ ಓಡಾಡುತ್ತಿದ್ದ ಕಿಯಾ ಕಾರನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ಪಾತ್ರ ಇದೆಯಾ? ಎಂಬ ಬಗ್ಗೆ ತನಿಖೆ ನಡೆಯಲಿದೆ. ಕಿರಣ್​ನನ್ನು ಬಾಗಲಕೋಟೆ ಜಿಲ್ಲೆಯ ಮುಧೋಳ ಠಾಣೆಯಲ್ಲಿ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ ಬಳಸುತ್ತಿದ್ದ ಕಿಯಾ ಕಾರು ಮತ್ತು ಆಸ್ತಿ ಜಪ್ತಿ; ಎಷ್ಟು ಕೋಟಿ ಸಿಕ್ತು ಗೊತ್ತಾ?

https://newsfirstlive.com/wp-content/uploads/2023/09/Chaitra-Kundapur-1.jpg

Load More