newsfirstkannada.com

ಇನ್ನೂ ನಿಲ್ಲದ ಸುದೀಪ್, ಕುಮಾರ್​​​​ ಜಗಳ; ಸೂರಪ್ಪ ಬಾಬು ವಿರುದ್ಧ ಚಂದ್ರಚೂಡ್​ ಮತ್ತೆ ಕಿಡಿ

Share :

24-07-2023

    ಸೂರಪ್ಪ ಬಾಬು ವಿರುದ್ಧ ಚಂದ್ರಚೂಡ್​​​ ಪ್ರೆಸ್​ ಮೀಟ್​!​

    ಸುದೀಪ್​​ ವಿರುದ್ಧ ಕುಮಾರ್​​ ಅವರನ್ನು ಎತ್ತಿ ಕಟ್ಟಿದ್ಯಾರು?

    ಚಕ್ರವರ್ತಿ ಚಂದ್ರಚೂಡ್​​ ಅವರಿಂದ ಸೂರಪ್ಪಗೆ ಪ್ರಶ್ನೆ..!

ಬೆಂಗಳೂರು: ಸ್ಯಾಂಡಲ್​ವುಡ್​​ ಸೂಪರ್​ ಸ್ಟಾರ್​​ ನಟ ಕಿಚ್ಚ ಸುದೀಪ್, ನಿರ್ಮಾಪಕ ಎಂ.ಎನ್​​ ಕುಮಾರ್​ ನಡುವಿನ ಬೀದಿ ಕಾಳಗ ಇನ್ನೂ ನಿಂತಿಲ್ಲ. ಸುದೀಪ್​​ ವಿರುದ್ಧ ಎಂ.ಎನ್​ ಕುಮಾರ್​​ ಅವರನ್ನು ಎತ್ತಿ ಕಟ್ಟಿದ್ದು, ನಿರ್ಮಾಪಕ ಸೂರಪ್ಪ ಬಾಬು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸುದೀಪ್​​​ ಆಪ್ತರಾದ ಬಿಗ್​​ ಬಾಸ್​ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ವಿಡಿಯೋ ಮಾಡಿ ಸೂರಪ್ಪ ಬಾಬು ವಿರುದ್ಧ ಕಿಡಿಕಾರಿದ್ದರು. ಈ ಬೆನ್ನಲ್ಲೇ ತನ್ನ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಚಂದ್ರಚೂಡ್​​ಗೆ ಸೂರಪ್ಪ ಬಾಬು ವಾರ್ನಿಂಗ್​ ಕೂಡ ಕೊಟ್ಟಿದ್ದರು.

ಸದ್ಯ ಸೂರಪ್ಪ ಬಾಬು, ಚಕ್ರವರ್ತಿ ಚಂದ್ರಚೂಡ್ ಮಧ್ಯೆ ಗಲಾಟೆ ತಾರಕಕ್ಕೇರಿದೆ. ನಾನು ಸೂರಪ್ಪ ಬಾಬು ವಿರುದ್ಧ ಮಾಡಿರೋ ಆರೋಪಕ್ಕೆ ಬದ್ಧ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಚಂದ್ರಚೂಡ್​​, ಸೂರಪ್ಪ ಬಾಬು ಸುದೀಪ್​ ಜೊತೆ 2 ಸಿನಿಮಾ ಮಾಡಿದ್ದಾರೆ. ಸುದೀಪ್​​ ಕಾಲ್​ಶೀಟ್​ ತೆಗೆದುಕೊಂಡರೆ 50 ಕೋಟಿ ಬ್ಯುಸಿನೆಸ್​ ಆಗುತ್ತೆ ಎಂಬುದು ಅವರ ಪ್ಲಾನ್​. ಹಾಗಾಗಿಯೇ ಕೋಟಿಗೊಬ್ಬ 3 ಸಿನಿಮಾಗೆ ಸುದೀಪ್​ ಕಾಲ್​ ಶೀಟ್​ ತೆಗೆದುಕೊಂಡಿದ್ದು. ಈ ಸಿನಿಮಾ ರಿಲೀಸ್​ ಆಗೋಕೆ ಕಾರಣವೇ ಸುದೀಪ್​​ ಅವರು. ಸುದೀಪ್​ ಅವರಿಂದಲೇ ಸಹಾಯ ಪಡೆದು ಮೋಸ ಮಾಡಿದ್ರೆ ಶಿಖಂಡಿ ಎನ್ನದೆ ಇನ್ನೂ ಏನಂತಾ ಕರೆಯಬೇಕು ಎಂದರು.

ಪತ್ರಕರ್ತರಿಗೆ ಲಂಚದ ಆಮಿಷ ಒಡ್ಡಿದ್ದು ನಿಜ

ಸೂರಪ್ಪ ಬಾಬು ಪತ್ರಕರ್ತರಿಗೆ ಲಂಚದ ಆಮಿಷ ಒಡ್ಡಿದ್ದು ನಿಜ. ಕೋಟಿಗೊಬ್ಬ ಸಿನಿಮಾಗೆ ಡೇಟ್​ ಹೇಗೆ ಸಿಕ್ಕಿದು ಸೂರಪ್ಪ ಬಾಬು ಹೇಳಲಿ. ನಾನು ಯಾರು ಎಂದು ಗೊತ್ತೇ ಇಲ್ಲ ಎಂದಿದ್ದಾರೆ ಸೂರಪ್ಪ. ಅವರು ಕಾರ್ಮಿಕರಿಗೆ ಎಷ್ಟು ಕೋಟಿ ಮೋಸ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ಕುಡಿದಾಗ ಸೂರಪ್ಪ ಸ್ಟಾರ್​ ನಟರೊಬ್ಬರ ಬಗ್ಗೆ ಮಾತಾಡಿದ್ದರು. ಅಂದು ಇದೇ ಪತ್ರಕರ್ತ ಸಹಾಯ ಮಾಡಿದ್ದು ಎಂದರು.

ಸುದೀಪ್​​ ಅವರೊಂದಿಗೆ ತಾಕತ್​ ಇದ್ದಿದ್ರೆ ನೇರವಾಗಿ ಮಾತಾಡಬೇಕಿತ್ತು. ಅದರ ಬದಲಿಗೆ ಕುಮಾರ್​​ ಅವರನ್ನು ಎತ್ತಿ ಕಟ್ಟಿದ್ದು ಯಾಕೆ? ಸುದೀಪ್​​ ಅವರು ಕೋರ್ಟ್​ಗೆ ಹೋಗುವಾಗ ಬಹಳ ನೊಂದಿದ್ದರು. ಕೊನೆಗೂ ಸಮಸ್ಯೆ ಬಗೆಹರಿಸಲು ಶಿವಣ್ಣ, ರವಿಚಂದ್ರನ್​ ಅವರು ಎಂಟ್ರಿ ಕೊಡಬೇಕಾಯ್ತು. ಸುದೀಪ್​ ಅವರು ಬಿಟ್ಟರೂ, ನಾನು ಬಿಡೋ ಮಗ ಅಲ್ಲ ಎಂದು ಕಿಡಿಕಾರಿದರು ಸುದೀಪ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ ನಿಲ್ಲದ ಸುದೀಪ್, ಕುಮಾರ್​​​​ ಜಗಳ; ಸೂರಪ್ಪ ಬಾಬು ವಿರುದ್ಧ ಚಂದ್ರಚೂಡ್​ ಮತ್ತೆ ಕಿಡಿ

https://newsfirstlive.com/wp-content/uploads/2023/07/Chakravarthi-Chandrachud.jpg

Load More