newsfirstkannada.com

ಒಂದೇ ವೇದಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್-ಕಿಚ್ಚ ಸುದೀಪ್.. ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ

Share :

Published August 27, 2023 at 9:24am

Update August 27, 2023 at 9:48am

    2 ಶಕ್ತಿಗಳು ಒಂದಾಗಬೇಕೆನ್ನುವುದು ಕೋಟಿ ಹೃದಯಗಳ ಬಡಿತ

    ಕಿಚ್ಚ-ದರ್ಶನ್ ಅಭಿಮಾನಿಗಳಲ್ಲಿ ಉತ್ಸಾಹ ದುಪ್ಪಟ್ಟುಗೊಂಡಿದೆ

    ಒಂದಾದ್ರೆ, ಕೋಟಿ, ಕೋಟಿ ಅಭಿಮಾನಿಗಳಿಂದ ದೀಪಾವಳಿನೇ!

ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಯಾಂಡಲ್​ವುಡ್​ನ ಬಿಗ್​ ಸ್ಟಾರ್ಸ್​ ಬಗ್ಗೆ ಸದ್ಯ ಗುಸುಗುಸು ಕೇಳಿ ಬರುತ್ತಿದೆ. ಕನ್ನಡ ಇಂಡಸ್ಟ್ರಿಯಲ್ಲಿ ಈ ಇಬ್ಬರು ಮತ್ತೆ ಒಂದಾದ್ರೆ ದೊಡ್ಡ ಕಿಚ್ಚಿನ ಕ್ರಾಂತಿನೇ ಆಗಿ ಬಿಡುತ್ತೆ. ಆ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಹವಾ ಇದೆ. ಈ ಎರಡು ಶಕ್ತಿಗಳು ಒಂದಾಗಬೇಕು ಎನ್ನುವುದು ಕೋಟಿ, ಕೋಟಿ ಹೃದಯಗಳ ಬಡಿತವಾಗಿದೆ. ಆ ಕಾಲ ತೀರ ಸನಿಹಕ್ಕೆ ಬಂದಿದೆ. ಏಕೆಂದರೆ ಕೆಲವು ವರ್ಷಗಳ ನಂತರ ಬಿಗ್​ ಸ್ಟಾರ್ಸ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಉತ್ಸಾಹ ದುಪ್ಪಟ್ಟುಗೊಳಿಸಿದೆ.

ನಟ ದರ್ಶನ್, ಸುದೀಪ್​

ಹುಟ್ಟುಹಬ್ಬ ರಾಜ್ಯಕ್ಕೆ ಬೇರೆಯದ್ದೇ ಮೆಸೇಜ್ ಕೊಟ್ಟಿದೆ..!

ಕುಚುಕು ಗೆಳೆಯರಾದ ಡಿ-ಬಾಸ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಬೇರೆ ಸ್ಯಾಂಡಲ್​ವುಡ್​ನ ನಟಿ, ಸಂಸದೆಯಾದ ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ. ಈ ಹುಟ್ಟುಹಬ್ಬ ಸದ್ಯ ರಾಜ್ಯಕ್ಕೆ ಬೇರೆಯದ್ದೇ ಮೆಸೇಜ್ ಕೊಟ್ಟಂತಾಗಿದೆ. 6 ವರ್ಷದಿಂದ ನಾನೊಂದು ತೀರ, ನೀನೊಂದು ತೀರ ಎನ್ನುವಂತೆ ಇದ್ದ ಕುಚುಕು ಗೆಳೆಯರ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ನಿರೀಕ್ಷೆಯನ್ನು ಆದಷ್ಟು ಬೇಗ ಯಶಸ್ಸು ಕಾಣುತ್ತೆ ಎನ್ನುವುದು ಸಮಾರಂಭದಲ್ಲಿನ ಈ ದಿಗ್ಗಜರ ನಸು ನಗುವೇ ಹೇಳುತ್ತದೆ.

ಕೋಟಿ, ಕೋಟಿ ಅಭಿಮಾನಿಗಳಿಂದ ದೀಪಾವಳಿನೇ..!

ಬಿಗ್ ಡೈ ಹಾರ್ಡ್​ ಫ್ಯಾನ್ಸ್​ ಫಾಲೋಯಿಂಗ್ ಅನ್ನು ಕಿಚ್ಚ-ದಚ್ಚು​ ಹೊಂದಿದ್ದಾರೆ. ಅದು ಹೇಗೆಂದರೆ​ ಸಿನಿಮಾ ಕಾರ್ಯಕ್ರಮ, ಱಲಿ ಇಂತದೇನಾದರೂ ಮಾಡಿದರೆ ಸಾಕು ಲಕ್ಷಾಂತರ ಅಭಿಮಾನಿಗಳು ಸೇರುತ್ತಿರುತ್ತಾರೆ. ಅದೇ ಈಗ ಈ ಇಬ್ಬರು ಒಂದಾಗಿ ಒಟ್ಟಿಗೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೇ ಅಷ್ಟೇ ಕೋಟಿ, ಕೋಟಿ ಅಭಿಮಾನಿಗಳಿಂದ ದೀಪಾವಳಿನೇ ಗ್ಯಾರಂಟಿ.

ನಟ ಸುದೀಪ್, ಸುಮಲತಾ ಅಂಬರೀಶ್ ಮತ್ತು ದರ್ಶನ್

ಸ್ಯಾಂಡಲ್​ವುಡ್​ನ ಈ ದಿಗ್ಗಜ ಸ್ಟಾರ್ಸ್​ ಒಂದಾಗುತ್ತಾರೆಂದು ಕಿಚ್ಚ, ದಚ್ಚುವಿನ ಫ್ಯಾನ್ಸ್​ಗಳಲ್ಲಿ ಕುತೂಹಲ ಮೂಡಿಸಿದೆ. ಇಬ್ಬರು ನಟರ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಮೂಡಿದ್ದು ಆ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕೆ ದರ್ಶನ್​-ಸುದೀಪ್​ ಗ್ರೀನ್​ ಸಿಗ್ನಲ್​ ಕೊಡಬೇಕು. ಅದಕ್ಕೆ ಕಾಲ ಸನೀಹವಾಗಿದ್ದು ಸದ್ಯದಲ್ಲೇ ಇಬ್ಬರು ಒಂದಾಗಲಿ ಎಂದು ಅಭಿಮಾನಿಗಳು ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ವೇದಿಕೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್-ಕಿಚ್ಚ ಸುದೀಪ್.. ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ

https://newsfirstlive.com/wp-content/uploads/2023/08/SUDEP_DARSHAN.jpg

Load More