newsfirstkannada.com

ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ; ಇಬ್ಬರನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು

Share :

21-08-2023

    ಮೈಸೂರಿನ ಸರಸ್ವತಿಪುರಂನಿಂದ ನಕಲಿ ಪತ್ರ ಪೋಸ್ಟ್

    ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ ಬರೆದಿದ್ದೇಕೆ?

    ಹಲವು ಆಯಾಮಗಳಲ್ಲಿ ಸಿಐಡಿ ಅಧಿಕಾರಿಗಳ ತನಿಖೆ

ಚಲುವರಾಯಸ್ವಾಮಿಗೆ ಭ್ರಷ್ಟಾಚಾರದ ಆರೋಪ ಹೆಗಲೇರಿತ್ತು. ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸ್ತಿದ್ದಂತೆ ಕೋಟಿ ಕೋಟಿ ಲೂಟಿ ಹೊಡೆದಿರೋ ಭೂತ ಬೆನ್ನುಬಿದ್ದಿತ್ತು. ಅನಾಮಧೇಯ ಹೆಸರಿನಲ್ಲಿ ಪತ್ರವೊಂದು ಎಲ್ಲೆಡೆ ಹರಿದಾಡಿತ್ತು. ಆದರೆ ಈ ಪತ್ರ ಅಸಲಿಯೋ? ನಕಲಿಯೋ ಎಂಬ ಸಂಶಯ ವ್ಯಕ್ತವಾಗಿತ್ತು. ಇದೀಗ ಅನಾಮಧೇಯ ಪತ್ರದ ಹಿಂದೆ ಬಿದ್ದಿದ್ದ ಸಿಐಡಿ ಕೈಗೆ ಪತ್ರದ ರೂವಾರಿಗಳು ಸಿಕ್ಕಿಬಿದ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ಹನಿಮೂನ್ ಪಿರಿಯಡ್‌ನಲ್ಲಿದ್ದಾಗಲೇ ಸಾಲು ಸಾಲು ಹಗರಣ ಭೂತಗಳು ಸಚಿವರ ಬೆನ್ನೇರಿದ್ದವು. ಅಕ್ರಮದ ಬಲೆಯೊಳಗೆ ಮೊದಲು ಸಿಲುಕಿ ಚಲವರಾಯಸ್ವಾಮಿ ವಿಲವಿಲ ಒದ್ದಾಡಿ ಬಿಟ್ಟಿದ್ದರು. ಸಚಿವರ ವಿರುದ್ಧ ಬರೆದ ಅನಾಮಧೇಯ ಪತ್ರ ಕೃಷಿ ಇಲಾಖೆಯಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಕೃಷಿ ಸಚಿವರಿಗೆ ಕಂಟಕವನ್ನೂ ತಂದಿಟ್ಟಿತ್ತು. ಇದೀಗ ರಾಜ್ಯಪಾಲರಿಗೆ ದೂರು ಕೊಟ್ಟ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಕೊನೆಗೂ ಸಿಐಡಿ ಖೆಡ್ಡಾಕ್ಕೆ ಬಿದ್ದ ಕೃಷಿ ಅಧಿಕಾರಿಗಳು

ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಬರೆಯಲಾಗಿದ್ದ ಪತ್ರ ಎಲ್ಲಿಂದ ಬಂತು? ಯಾರು ಬರೆದವರು ಅಂತಾ ತನಿಖೆ ನಡೆಸಲು ಪ್ರಕರಣವನ್ನ ಸರ್ಕಾರ ಸಿಐಡಿ ಹೆಗಲಿಗೆ ವಹಿಸಿತ್ತು. ಅಂದಿನಿಂದ ಮಂಡ್ಯ, ಮೈಸೂರಿನಲ್ಲಿ ಪತ್ರದ ಹಿಂದಿನ ಕಾರಣ ಕೈಗಳಿಗಾಗಿ ತನಿಖಾಧಿಕಾರಿಗಳು ಹುಡುಕಾಟ ನಡೆಸ್ತಿದ್ರು. ಕೃಷಿ ಇಲಾಖೆಯ ಹಲವು ಅಧಿಕಾರಿಗಳನ್ನ ವಿಚಾರಣೆಗೂ ಒಳಪಡಿಸಿದ್ರು. ಇದೀಗ ಕೃಷಿ ಸಚಿವರ ವಿರುದ್ಧ ಮಂಡ್ಯದ 7 ಸಹಾಯಕರ ಹೆಸರಿನಲ್ಲಿ ಪತ್ರ ಬರೆದಿದ್ದವರು ಸಿಐಡಿ ಬಲೆಗೆ ಬಿದ್ದಿದ್ದಾರೆ. ಮೈಸೂರಿನ ಕೆ.ಆರ್.ನಗರ ಮೂಲದ ಇಬ್ಬರು ಅಧಿಕಾರಿಗಳನ್ನ ಸಿಐಡಿ ಅಧಿಕಾರಿಗಲು ವಶಕ್ಕೆ ಪಡೆದಿದ್ದಾರೆ.

ಚಲುವರಾಯಸ್ವಾಮಿ ವಿರುದ್ದ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಅಧಿಕಾರಿಗಳನ್ನ ಸಿಐಡಿ ವಶಕ್ಕೆ ಪಡೆದಿದೆ. ಕೃಷಿ ನಿರ್ದೇಶಕ ಗುರುಪ್ರಸಾದ್, ಕೃಷಿ ಅಧಿಕಾರಿ ಸುದರ್ಶನ್‌ನ ಪತ್ರ ಬರೆದ ಆರೋಪದಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಸಹಾಯಕ ಕೃಷಿ ನಿರ್ದೇಶಕ ಹಾಗೂ ಕೃಷಿ ಅಧಿಕಾರಿಯನ್ನ ಪತ್ರ ಬರೆಯಲು ಕಾರಣವೇನು ಎಂಬ ಬಗ್ಗೆ ವಿಚಾರಣೆಗೆ ಒಳಪಡಿಸಲಾಗಿದೆ. ಜೊತೆಗೆ ಮೈಸೂರಿನ ಸರಸ್ವತಿಪುರಂನಿಂದ ರಾಜ್ಯಪಾಲರಿಗೆ ಪತ್ರ ಪೋಸ್ಟ್ ಮಾಡಲಾಗಿತ್ತು ಅನ್ನೋದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. ಅಲ್ಲದೇ ಮೈಸೂರಲ್ಲೇ ಕುಳಿತು ನಕಲಿ ಸಹಿ ಮಾಡಿ ದೂರಿನ ಪತ್ರ ಬರೆದ್ರಾ? ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ ಬರೆದಿದ್ದೇಕೆ? ಸಿಐಡಿ ವಶದಲ್ಲಿರುವ ಎಡಿ, ಎಓಗೆ ಲಂಚದ ಒತ್ತಡ ಇತ್ತಾ!? ಬೇರೆಯವರ ಕುಮ್ಮಕ್ಕಿನಿಂದ ಕೃಷಿ ಸಚಿವರ ವಿರುದ್ಧ ಪತ್ರ ಬರೆದ್ರಾ ಹೀಗೆ ವಿವಿಧ ಆಯಾಮಗಳಲ್ಲಿ ಸಿಐಡಿ ಅಧಿಕಾರಿಗಳು ಇಬ್ಬರೂ ಕೃಷಿ ಇಲಾಖೆ ಅಧಿಕಾರಿಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೂ ಅಜ್ಞಾತ ಸ್ಥಳದಲ್ಲಿ ಇಬ್ಬರು ಅಧಿಕಾರಿಗಳ ವಿಚಾರಣೆ ನಡೆಯುತ್ತಿದ್ದು, ನಕಲಿ ದೂರಿನ ಹಿಂದೆ ರಾಜಕೀಯ ಷಡ್ಯಂತ್ರವಿದ್ಯಾ ಎಂಬ ಶಂಕೆ ಮೂಡಿದೆ. ಅಲ್ಲದೇ ಪತ್ರ ಪ್ರಕರಣದಲ್ಲಿ ಇಬ್ಬರೂ ಕೃಷಿ ಅಧಿಕಾರಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.

‘ನನ್ನ ಮೇಲೆ ಕೆಲವರು ಬೇಕು ಅಂತಾ ತೀಟೆ ಮಾಡುತ್ತಿದ್ದಾರೆ’

ಇಬ್ಬರು ಅಧಿಕಾರಿಗಳನ್ನ ವಶಕ್ಕೆ ಪಡೆದಿರೋ ಬಗ್ಗೆ ಮಾತನಾಡಿರೋ ಕೃಷಿ ಸಚಿವ ಚಲವರಾಯ ಸ್ವಾಮಿ, ನನ್ನ ಮೇಲೆ ಕೆಲವರು ಬೇಕು ಅಂತಾ ತೀಟೆ ನಿಂತಿದ್ದಾರೆ. ಅವರು ಒಪ್ಪಬೇಕೆಂದು ನಮ್ಮ ಕಡೆಯಿಂದ ಒತ್ತಾಯ ಮಾಡುತ್ತಿಲ್ಲ. ಮಂಡ್ಯದವರ ಹೆಸರು ಬಳಸಿಕೊಂಡು ಮೈಸೂರಿನವರು ಯಾಕೆ ಪತ್ರ ಬರೆದ್ರು ಅಂತಾ ಗೊತ್ತಾಗಬೇಕಿದೆ. ಅಲ್ಲದೇ ಪತ್ರದ ಹಿಂದೆ ಜೆಡಿಎಸ್‌ ಪ್ರಚೋದನೆ ಇದ್ಯಾ ಎಂದು ಗೊತ್ತಿಲ್ಲ. ಆದರೆ ಚಲುವರಾಯಸ್ವಾಮಿ ಇನ್ನೊಬ್ಬರ ದ್ವೇಷಕ್ಕಾಗಿ ರಾಜಕಾರಣ ಮಾಡುವವನಲ್ಲ.

-ಕೃಷಿ ಸಚಿವ ಚಲವರಾಯ ಸ್ವಾಮಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ; ಇಬ್ಬರನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು

https://newsfirstlive.com/wp-content/uploads/2023/07/Chaluvaraya-Swamy.jpg

Load More