newsfirstkannada.com

ಹೆಚ್​​ಡಿಕೆಗೆ ವಾರ್ನಿಂಗ್​ ಕೊಟ್ಟ ಚಲುವರಾಯಸ್ವಾಮಿ; ಕಾಂಗ್ರೆಸ್​ ಶಾಸಕರಿಂದ ಗವರ್ನರ್​ ಭೇಟಿ!

Share :

09-08-2023

    ಕೃಷಿ ಸಚಿವರ ವಿರುದ್ಧದ ರಾಜ್ಯಪಾಲರಿಗೆ ಪತ್ರ ಪ್ರಕರಣ

    ರಾಜ್ಯಪಾಲರನ್ನ ಭೇಟಿಯಾದ ಚಲುವರಾಯಸ್ವಾಮಿ

    ಹೆಚ್​ಡಿಕೆ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ!

ಬೆಂಗಳೂರು: ಚಲುವರಾಯಸ್ವಾಮಿ ವಿರುದ್ಧ ಕೇಳಿ ಬಂದಿರುವ ಲಂಚ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇನ್ನು ಕೃಷಿ ಸಚಿವ ರಾಜ್ಯಪಾಲರನ್ನು ಭೇಟಿಯಾಗಿ, ಅನಾಮಧೇಯ ಪತ್ರದ ಬಗ್ಗೆ ವಿವರಣೆ ನೀಡಿದ್ದಾರೆ. ಇನ್ನು ಸಿಐಡಿ ಕೂಡ ಮಂಡ್ಯ ಜಿಲ್ಲೆಗೆ ತೆರಳಿ ಕೃಷಿ ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಂಡಿದೆ.

ರಾಜ್ಯಪಾಲರನ್ನ ಭೇಟಿಯಾದ ಚಲುವರಾಯಸ್ವಾಮಿ

ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಕೇಳಿ ಬಂದಿರುವ ಲಂಚದ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್​ ಪಡೆದುಕೊಳ್ತಿದೆ. ಕೃಷಿ ಸಚಿವ ಚಲುವರಾಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.

ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯದ ಕಾಂಗ್ರೆಸ್ ನಾಯಕರ​ ನಿಯೋಗ ರಾಜಭವನಕ್ಕೆ ತೆರಳಿ, ಥಾವರ್​ಚಂದ್​ ಗೆಹ್ಲೋಟ್​ರನ್ನು ಭೇಟಿ ಮಾಡಿದ್ರು. ಈ ವೇಳೆ ಕೃಷಿ ಅಧಿಕಾರಿಗಳು ಬರೆದಿದ್ದರು ಎನ್ನಲಾದ ಪತ್ರದ ಬಗ್ಗೆ ವಿವರಿಸಿದರು. ಈ ಸಂಬಂಧ ಈಗಾಗಲೇ ಸರ್ಕಾರ ಪ್ರಕಣವನ್ನು ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದರು.

ಹೆಚ್​ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಚೆಲುವರಾಯಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಎರಡು ಬಾರಿ ಸಿಎಂ ಆದವರು ಇಂಥ ಕೆಳಮಟ್ಟಕ್ಕೆ ಇಳಿಯೋದು ಸಂಸ್ಕಾರ ಅಲ್ಲ. ಇದನ್ನೇ ಮುಂದುವರೆಸಿದ್ರೆ ನಮ್ಮ ಕೆಲಸ ನಾವು ಮಾಡಬೇಕಾಗುತ್ತೆ ಎಂದು ವಾರ್ನಿಂಗ್​ ಮಾಡಿದ್ದಾರೆ.

ಮಂಡ್ಯದಲ್ಲಿ ಸಿಐಡಿ ಅಧಿಕಾರಿಗಳಿಂದ ಮುಂದುವರಿದ ತನಿಖೆ

ಮತ್ತೊಂದೆಡೆ ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್ ನೇತೃತ್ವದ ತಂಡ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ, ವಿಚಾರಣೆ ಆರಂಭಿಸಿದೆ. ಜಂಟಿ ಕೃಷಿ ನಿರ್ದೇಶಕರು, ಸಹಾಯಕ ನಿರ್ದೇಶಕರ ಬಳಿ ಹೇಳಿಕೆ ದಾಖಲಿಸಿಕೊಂಡಿದೆ. ಇನ್ನು ಮೈಸೂರಿನಿಂದ ರಾಜಭವನಕ್ಕೆ ಪತ್ರ ಪೋಸ್ಟ್​ ಆಗಿರುವ ಕಾರಣ, ಮೈಸೂರಿಗೂ ಕೂಡ ಸಿಐಡಿ ತನಿಖಾ ತಂಡ ತೆರಳಿದೆ.

ಚಲುವರಾಯಸ್ವಾಮಿ‌ ವಿರುದ್ಧ ಪೇ ಸಿಎಸ್ ಅಭಿಯಾನ

ಕೃಷಿ ಸಚಿವರ ವಿರುದ್ಧ ಲಂಚದ ಆರೋಪ ಕೇಳಿ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೇಸಿಎಸ್​ ಪೋಸ್ಟ್​ ಹರಿದಾಡಿವೆ. ನಮ್ಮಲ್ಲಿ ಪೇಟಿಎಂ ಕೂಡ ಲಭ್ಯವಿದೆ. ದಾರಾಳವಾಗಿ ಸ್ಕ್ಯಾನ್ ಮಾಡಿ, ಲಂಚ ಪಾವತಿ ಮಾಡಿ ಧನ್ಯವಾದಗಳು. ಇಂತಿ ನಿಮ್ಮ ಭ್ರಷ್ಟ ಚೆಲುವರಾಯಸ್ವಾಮಿ. ಅಲಿಯಾಸ್ ಲಂಚ ಸ್ವಾಮಿ ಎಂದು ಟ್ಯಾಗ್ ಲೈನ್​ನಡಿ ಬಿಜೆಪಿ ಕರ್ನಾಟಕ ಸಪೋರ್ಟರ್ಸ್ ಗ್ರೂಪ್ ಸ್ಟೇಟಸ್​ ಹಾಕಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್​​ಡಿಕೆಗೆ ವಾರ್ನಿಂಗ್​ ಕೊಟ್ಟ ಚಲುವರಾಯಸ್ವಾಮಿ; ಕಾಂಗ್ರೆಸ್​ ಶಾಸಕರಿಂದ ಗವರ್ನರ್​ ಭೇಟಿ!

https://newsfirstlive.com/wp-content/uploads/2023/07/Chaluvanarayana-Swamy.jpg

Load More