ಹೆಸರಿಗಷ್ಟೇ ಇದು ಜಿಲ್ಲಾಸ್ಪತ್ರೆ.. ಇಲ್ಲಿನ ಅವ್ಯವ್ಯಸ್ಥೆ ಬಗ್ಗೆ ಗೊತ್ತಾ?
ಚಿಕಿತ್ಸೆ ಪಡೀಬೇಕು ಅಂದ್ರೆ ಮನೆಯಿಂದ ಫ್ಯಾನ್ ತರ್ಲೇಬೇಕು..!
ರೋಗಿಗಳು ಫ್ಯಾನ್ ಇಲ್ಲದೇ ಪರದಾಡುತ್ತಿದ್ದಾರೆ
ಹೆಸರಿಗಷ್ಟೇ ಜಿಲ್ಲಾಸ್ಪತ್ರೆ. ವ್ಯವಸ್ಥೆಗಳು ಅಂತಾ ಬಂದಾಗ ಅದು ಸಮಸ್ಯೆಗಳ ಆಗರದ ಆಸ್ಪತ್ರೆ.. ಹೌದು, ಚಾಮರಾಜನಗರ ಜಿಲ್ಲೆಯ ಆಸ್ಪತ್ರೆ ಮತ್ತೊಮ್ಮೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾರಣ ಇಷ್ಟೇ, ರೋಗಿಗಳಿಗೆ ಒಂದು ಫ್ಯಾನ್ ವ್ಯವಸ್ಥೆ ಕೂಡ ಮಾಡಲಾಗದಷ್ಟು ಬಡವಾಗಿ ನಿಂತಿದೆ ಈ ಜಿಲ್ಲಾಸ್ಪತ್ರೆ..!
ಸೋಶಿಯಲ್ ಮೀಡಿಯಾದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿಡಿಯೋ ಒಂದು ವೈರಲ್ ಆಗ್ತಿದೆ. ವಿಡಿಯೋದಲ್ಲಿ ಆಸ್ಪತ್ರೆಯ ವಾರ್ಡ್ನಲ್ಲಿದ್ದ ರೋಗಿಗಳು ಫ್ಯಾನ್ ಇಲ್ಲದೇ ಪರದಾಡುತ್ತಿದ್ದಾರೆ. ಸೆಕೆಯ ಆರ್ಭಟ ತಾಳಲಾರದೇ ರೋಗಿಗಳು ಸ್ವಂತ ಹಣದಿಂದ ಫ್ಯಾನ್ಗಳನ್ನು ತಂದು ದಗೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಯನೀಯ ಸ್ಥಿತಿ ಕಂಡು ಬಂದಿದೆ.
ವಾರ್ಡ್ ಮಾತ್ರವಲ್ಲ, ಆಸ್ಪತ್ರೆಯ ಮೆಟ್ಟಲುಗಳು, ರಿಸೆಪ್ಷನ್ನಲ್ಲಿ ಪ್ಯಾನ್ ಹಾಕಿ ಕೂತಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದೆ. ಈ ಬಗ್ಗೆ ರೋಗಿಗಳು ಆಸ್ಪತ್ರೆ ಅಧಿಕಾರಿಗಳನ್ನು ಕೇಳಿದ್ರೆ ಅಸಹಾಯಕರಾಗಿ ಕೈಕಟ್ಟಿ ಕೂತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆರೋಗ್ಯ ಸಚಿವರು ಹೇಳಿದ್ದೇನು..?
ಈ ಬಗ್ಗೆ ಪ್ರತಿಕ್ರಿಯಿಸಿರುವ ನೂತನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಾಳೆ ಇಲಾಖಾಧಿಕಾರಿಗಳ ಸಭೆ ಕರೆದಿದ್ದೇನೆ. ಹಿಂದೆ ಏನೇನಾಗಿದೆ, ಮುಂದೆ ಏನಾಗಬೇಕು ಎಂದು ಅರಿಯಲು ಸಭೆ ಕರೆದಿದ್ದೇನೆ. ಚಾಮರಾಜನಗರ ವಿಚಾರದ ಬಗ್ಗೆಯೂ ಮಾಹಿತಿ ಪಡೆಯುತ್ತೇನೆ. ಇಂಥ ವ್ಯವಸ್ಥೆ ನೀಡುವುದು ಸರಿಯಲ್ಲ. ಈ ಬಗ್ಗೆ ಕ್ರಮಕೈಗೊಳ್ಳಲು ಸೂಚನೆ ನೀಡುತ್ತೇನೆ. ಆರೋಗ್ಯ ಇಲಾಖೆಯ ಕೆಲಸದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಇತ್ತು. ಬಹಳಷ್ಟು ಅವ್ಯವಸ್ಥೆ ಇತ್ತು. ಆರೋಗ್ಯ ಸೇವೆ ಸರಿಯಾದ ರೀತಿ ಮಾಡಬೇಕಿದೆ. ಉತ್ತಮಗೊಳಿಸುವ ಸುಧಾರಣೆ ಮಾಡಬೇಕಾಗಿದೆ. ಮಹತ್ತರ ಜವಾಬ್ದಾರಿ ನನಗೆ ವಹಿಸಿದ್ದಾರೆ. ಈ ಬಗ್ಗೆ ಗಮನಹರಿಸುತ್ತೇನೆ ಎಂದರು.
ಹೆಸರಿಗಷ್ಟೇ ಇದು ಜಿಲ್ಲಾಸ್ಪತ್ರೆ.. ಚಿಕಿತ್ಸೆ ಪಡೀಬೇಕು ಅಂದ್ರೆ ಮನೆಯಿಂದ ಫ್ಯಾನ್ ತರ್ಲೇಬೇಕು..! https://t.co/WsCcIQ9xId @siddaramaiah @DKShivakumar @dineshgrao pic.twitter.com/afIogMT7yh
— NewsFirst Kannada (@NewsFirstKan) May 29, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ