8 ವರ್ಷಗಳ ಹಿಂದೆ ಮದುವೆಯಾಗಿದ್ದರು, ಅಂದಿನಿಂದ ಕಿರುಕುಳ
ಮನೆಯಲ್ಲಿ ಮೂವರ ಶವಗಳು ಮಲಗಿರುವ ಪರಿಸ್ಥಿತಿಯಲ್ಲಿ ಪತ್ತೆ
ಮದುವೆಯಾದ ದಿನದಿಂದ ಹೆಂಡತಿಗೆ ಚಿತ್ರಹಿಂಸೆ ಕೊಡುತ್ತಿದ್ದ ಗಂಡ
ಚಾಮರಾಜನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನೇ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೊಮ್ಮನಹಳ್ಳಿ ಗ್ರಾಮದ ಮೇಘಾ (24), ಪುನ್ವಿತಾ (6), ಮನ್ವಿತಾ (3) ಕೊಲೆಯಾದವರು. ಅಭಿ ಎಂಬಾತನು ಕೃತ್ಯ ಎಸಗಿದ್ದು ಸದ್ಯ ತನ್ನ ತಂದೆ, ತಾಯಿ ಜೊತೆ ನಾಪತ್ತೆಯಾಗಿದ್ದಾನೆ. ಅಭಿ ಮತ್ತು ಮೇಘಾ 8 ವರ್ಷದ ಹಿಂದೆ ಮದುವೆಯಾಗಿದ್ದರು. ಮದುವೆಯಾದಗಿನಿಂದ ಪತ್ನಿಗೆ ಕಿರುಕುಳ ನೀಡುತ್ತಿದ್ದನು ಎಂದು ಆಕೆಯ ತವರು ಮನೆಯವರು ಆರೋಪ ಮಾಡಿದ್ದಾರೆ.
ನಿನ್ನೆ ಪತ್ನಿ ಜೊತೆ ಗಲಾಟೆ ಮಾಡಿದ ಆರೋಪಿ ಮಕ್ಕಳನ್ನು ಸೇರಿದಂತೆ ಪತ್ನಿಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎಂದು ಮೇಘಾಳ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಮೂವರ ಶವಗಳು ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸದ್ಯ ಕೊಲೆ ಮಾಡಿರುವ ಆರೋಪಿ ತನ್ನ ತಂದೆ ಹಾಗೂ ತಾಯಿ ಜೊತೆ ನಾಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ತೆರಕಣಾಂಬಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ