newsfirstkannada.com

‘ಮದುವೆ ಆಗಲೇಬಾರದಿತ್ತು..’- ಡಿವೋರ್ಸ್​​ ಬಳಿಕ ಬೇಸರ ಹೊರಹಾಕಿದ ಚಂದನ್​ ಶೆಟ್ಟಿ!

Share :

Published June 20, 2024 at 11:13pm

  ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದಿದ್ದ ಚಂದನ್-ನಿವೇದಿತಾ

  ಬಿಗ್ ​ಬಾಸ್​ ಮೂಲಕ ಫ್ಯಾನ್ಸ್​ ಗಳಿಸಿಕೊಂಡಿದ್ದ ಗಾಯಕ ಚಂದನ್​

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಗಾಯಕನ ಹೇಳಿಕೆ

ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಬದುಕು ಅಂತ್ಯ ಕಂಡಿದೆ. ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು. ಡಿವೋರ್ಸ್‌ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಚಂದನ್ ಶೆಟ್ಟಿ ಅವರು ಮದುವೆಯ ಬಗ್ಗೆ ಪಶ್ಚಾತ್ತಾಪದ ಮಾತನಾಡಿದ್ದಾರೆ.

ಇದನ್ನೂ ಓದಿ: ಡಿವೋರ್ಸ್‌ ಬೆನ್ನಲ್ಲೇ ಚಂದನ್​ ಶೆಟ್ಟಿ ಮಾಜಿ ಪತ್ನಿ ಪ್ರತ್ಯಕ್ಷ; ನಿವೇದಿತಾ ಗೌಡ ವಿಡಿಯೋ ವೈರಲ್!

ಹೌದು, ಕಳೆದ ವಾರವಷ್ಟೇ ನಿವೇದಿತಾ ಗೌಡ ಮತ್ತು ಗಾಯಕ ಚಂದನ್‌ ಶೆಟ್ಟಿ ಡಿವೋರ್ಸ್ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಈ ಇಬ್ಬರೂ ಕೋರ್ಟ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಶಾಕ್‌ ಮೂಡಿಸಿದ್ದರು. ಕೊನೆಗೆ ಡಿವೋರ್ಸ್ ಬಳಿಕ ನಿವೇದಿತಾ ಗೌಡ ಮತ್ತು ಗಾಯಕ ಚಂದನ್‌ ಶೆಟ್ಟಿ ಬಂದು ಪತ್ರಿಕಾಗೋಷ್ಠಿ ನಡೆಸಿ ಅಧಿಕೃತವಾಗಿ ನಾವು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡುತ್ತಿದ್ದೇವೆ ಅಂತ ಹೇಳಿದ್ದರು.

ಇದೀಗ ಡಿವೋರ್ಸ್ ಪಡೆದ ಬಂದು ವಾರದ ಬಳಿಕ ಗಾಯಕ, ನಟ ಚಂದನ್​ ಶೆಟ್ಟಿ ಅವರು ಱಪಿಡ್​ ರಶ್ಮಿ ಅವರ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ತಾವು ಜೀವನದಲ್ಲಿ ಕಂಡ ಏರುಪೇರುಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಇನ್ನೂ ಅದರಲ್ಲೂ ತಮ್ಮ ಮದುವೆ ಬಗ್ಗೆ ಮಾತಾಡಿದ ಚಂದನ್ ಶೆಟ್ಟಿ, ನಾನು ಸ್ವಲ್ಪ ಖರ್ಚು ಮಾಡುವುದು ಜಾಸ್ತಿ. ಅದು ಇದು ಅಂತ ಸುಖಾ ಸುಮ್ಮನೆ ಖರ್ಚು ಮಾಡ್ತಾ ಇದ್ದೇ. ಕೋವಿಡ್​ ಬಳಿಕವೇ ನಾನು ಪಾಠ ಕಲಿತುಕೊಂಡೆ. ಯಾವತ್ತು ಅತಿಯಾಗಿ ಖರ್ಚು ಮಾಡಬಾರದು ಅಂತ. ನನಗೆ ದುಡ್ಡಿನ ಸಮಸ್ಯೆ ಬಂದಿದ್ದೇ ಮದುವೆಯಾದ ಬಳಿಕ. ಲಾಕ್​ಡೌನ್​ನಲ್ಲಿ ನನಗೆ ಮದುವೆ ಆಯ್ತು. ಅದರ ಹಿಂದಿನ ವಾರ ಸರಿಸುಮಾರು 50 ರಿಂದ 60 ಲಕ್ಷದ ವರೆಗೂ ಮದುವೆಗೆ ಅಂತ ಖರ್ಚು ಮಾಡಿದೆ. ಆವಾಗ ನನಗೆ ಫುಲ್​ ಕಾನ್ಫಿಡೆನ್ಸ್ ಇತ್ತು. ಒಂದು ಅಥವಾ ಎರಡು ತಿಂಗಳಿನಲ್ಲಿ ಆ ಹಣವನ್ನು ಮತ್ತೆ ದುಡಿಯುತ್ತೇನೆ ಅಂದುಕೊಂಡಿದೆ. ಆದರೆ ಲಾಕ್​ ಡೌನ್​ನಿಂದ ದುಡ್ಡು ಬರಲೇ ಇಲ್ಲ. ಅದಕ್ಕೆ ನನಗೆ ಅದೆಲ್ಲಾ ಬೇಕಿತ್ತಾ ನನಗೆ ಅಂತ ಅನಿಸಿ ಬಿಡ್ತು. ಆದರೆ ಕೋವಿಡ್‌ ಬಳಿಕ ಹಣವನ್ನು ಹೇಗೆ ಖರ್ಚು ಮಾಡುವುದು ಎಂದು ಕಲಿತೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮದುವೆ ಆಗಲೇಬಾರದಿತ್ತು..’- ಡಿವೋರ್ಸ್​​ ಬಳಿಕ ಬೇಸರ ಹೊರಹಾಕಿದ ಚಂದನ್​ ಶೆಟ್ಟಿ!

https://newsfirstlive.com/wp-content/uploads/2024/06/Chandan-Shetty-Nivedita-Gowda-2.jpg

Load More