newsfirstkannada.com

ಅಪ್ಪನ ರೆಕಾರ್ಡ್‌ ಬ್ರೇಕ್ ಮಾಡಿ ಗೆದ್ದ ಚಾಂಡಿ ಉಮ್ಮನ್; 6 ರಾಜ್ಯಗಳ ಚುನಾವಣೆಯಲ್ಲಿ BJP ಗೆದ್ದಿದ್ದು ಎಷ್ಟು?

Share :

08-09-2023

    6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ

    7 ರಲ್ಲಿ ಬಿಜೆಪಿ 3, ವಿರೋಧ ಪಕ್ಷಗಳ ಇಂಡಿಯಾ ಕೂಟಕ್ಕೂ 3

    36 ಸಾವಿರ ಮತಗಳ ಅಂತರದಿಂದ ಉಮ್ಮನ್ ಚಾಂಡಿ ಜಯ

ದೇಶದ 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. 7 ರಲ್ಲಿ ಬಿಜೆಪಿ 3, ವಿರೋಧ ಪಕ್ಷಗಳ ಕೂಟ ಇಂಡಿಯಾ ಕೂಡ 3 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಕೇರಳ, ಉತ್ತರಾಖಂಡ, ಜಾರ್ಖಂಡ್, ತ್ರಿಪುರ. ಕೇರಳದಲ್ಲಿ ಉಪಚುನಾವಣೆ ನಡೆದಿದ್ದು, ಮತಎಣಿಕೆಯೂ ಮುಕ್ತಾಯವಾಗಿದೆ.

ಇದನ್ನೂ ಓದಿ: 15 ವರ್ಷದ ಬಳಿಕ ಮತ್ತೆ ಮೈತ್ರಿ; ಮೋದಿ ಜೊತೆ ದೋಸ್ತಿಗೆ ಮುಂದಾಗಿದ್ದೇಕೆ ದೇವೇಗೌಡ್ರು? JDS ಪಕ್ಕಾ ಪ್ಲಾನ್ ಏನು?

6 ರಾಜ್ಯಗಳ ಉಪಚುನಾವಣೆಯಲ್ಲಿ ಪ್ರಮುಖವಾಗಿ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಅವರ ಕ್ಷೇತ್ರ ಕುತೂಹಲ ಕೆರಳಿಸಿತ್ತು. ಪುತ್ತುಪ್ಪಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಾಂಡಿ ಉಮ್ಮನ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಉಮ್ಮನ್ ಚಾಂಡಿ ಅವರು 33,255 ಮತಗಳ ಅಂತರದಲ್ಲಿ ಗೆದ್ದಿದ್ದರು. ಅವರ ಮಗ ಕೂಡ 36 ಸಾವಿರ ಮತಗಳ ಅಂತರದಿಂದ ಗೆದ್ದು ಅಪ್ಪನ ದಾಖಲೆಯನ್ನೇ ಮುರಿದಿದ್ದಾರೆ. ಈ ಗೆಲುವಿನ ಬಳಿಕ ಮಾತನಾಡಿರುವ ಚಾಂಡಿ ಉಮ್ಮನ್ ಅವರು ನಾನು ನನ್ನ ತಂದೆಯಂತೆ ಜನರಿಗಾಗಿ ಸೇವೆ ಮಾಡುತ್ತೇನೆ. ನಾನು ತಂದೆಯ ಕೆಲಸವನ್ನು ಹತ್ತಿರದಿಂದ ನೋಡಿದ್ದೇನೆ. ನನ್ನ ತಂದೆ ಆರಂಭಿಸಿದ ಕೆಲಸವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನೂ ಬಾಕಿ 3 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ. ಜಾರ್ಖಂಡ್ ರಾಜ್ಯದ ದುಮ್ಮರಿ ಕ್ಷೇತ್ರದಲ್ಲಿ ಜೆಎಂಎಂ ಅಭ್ಯರ್ಥಿ ಗೆದ್ದಿದ್ದಾರೆ. ಕೇರಳದ ಪುತ್ತುಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಾಂಡಿ ಉಮ್ಮನ್, ತ್ರಿಪುರದ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಉತ್ತರಾಖಂಡ್ ರಾಜ್ಯದ ಬಾಗೇಶ್ವರ್ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಪಶ್ಚಿಮ ಬಂಗಾಳದ ದುಪ್ಪಗುರಿ ಕ್ಷೇತ್ರದಲ್ಲಿ ಟಿಎಂಸಿ ಗೆಲುವು ಪಡೆದುಕೊಂಡಿದೆ. ಉತ್ತರ ಪ್ರದೇಶದ ಗೋಸಿ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿ ಸುಧಾಕರ್ ಸಿಂಗ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ವಿರುದ್ಧ ವಿರೋಧಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿಕೊಂಡ ಮೇಲೆ ನಡೆದ ಮೊದಲ ಚುನಾವಣೆ ಇದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಪ್ಪನ ರೆಕಾರ್ಡ್‌ ಬ್ರೇಕ್ ಮಾಡಿ ಗೆದ್ದ ಚಾಂಡಿ ಉಮ್ಮನ್; 6 ರಾಜ್ಯಗಳ ಚುನಾವಣೆಯಲ್ಲಿ BJP ಗೆದ್ದಿದ್ದು ಎಷ್ಟು?

https://newsfirstlive.com/wp-content/uploads/2023/09/Chandy-Oomen.jpg

Load More