newsfirstkannada.com

ಸಾವಿರಾರು ಕೋಟಿಗಳ ಅವ್ಯವಹಾರ ಕೇಸ್​​.. ನಾಯ್ಡು ಮೇಲೆ ಸೇಡು ತೀರಿಸಿಕೊಂಡ್ರಾ ಸಿಎಂ ಜಗನ್​​?

Share :

10-09-2023

  ಚಂದ್ರಬಾಬು ನಾಯ್ಡು ಮೇಲೆ ಸೇಡು ತೀರಿಸಿಕೊಂಡ್ರಾ ಜಗನ್‌?

  ಚಂದ್ರಬಾಬು ನಾಯ್ಡು ಪಾತ್ರವೇನು? ಜಗನ್‌ ಧ್ವನಿ ಎತ್ತಿದ್ದೇಕೆ?

  ಸಿಐಡಿ ತನಿಖೆಗೆ ವಹಿಸಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ..!

ಆಂಧ್ರಪ್ರದೇಶ ರಾಜಕೀಯದ ಪ್ಲೇವರೇ ಬೇರೇ. 360 ಡಿಗ್ರಿಯಿಂದಲೂ ಪಾಲಿಟಿಕ್ಸ್ ಮಾಡಲಾಗುತ್ತೆ. ಅಲ್ಲಿನ ರಾಜಕಾರಣಿಗಳ ಉರುಳಿಸೋ ದಾಳಗಳು ಚಿತ್ರ-ವಿಚಿತ್ರ. ಯಾವಾಗ ಏನ್ ಆಗುತ್ತೆ ಅನ್ನೋದು ಗೊತ್ತೇ ಆಗಲ್ಲ. ಸದ್ಯ ಆಂಧ್ರದಲ್ಲಿ ದೊಡ್ಡ ರಾಜಕೀಯ ಸಂಚಲನ ನಡೆದುಬಿಟ್ಟಿದೆ. ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಬಂಧನ ಚಂದ್ರಬಾಬು ನಾಯ್ಡು ಮತ್ತು ಜಗನ್‌ ನಡುವಿನ ರಾಜಕೀಯ ಸಮರ ತಾರಕ್ಕೇರಿದೆ.

ಅರೆಸ್ಟ್ ಮಾಡಲು ನಡೆಯಿತು ಹೈಡ್ರಾಮಾ!
ಅರೆಸ್ಟ್ ಆದ ನಂತರ ಆರೋಪ-ಪ್ರತ್ಯಾರೋಪ!

ಚಂದ್ರಬಾಬು ನಾಯ್ಡು ಅರೆಸ್ಟ್ ಮಾಡಲು ಸಿಐಡಿ ಪೊಲೀಸರು ಮಧ್ಯರಾತ್ರಿಯೇ ವಿಜಯವಾಡದಿಂದ 300 ಕಿಲೋ ಮೀಟರ್ ದೂರವಿರೋ, ನಂದ್ಯಾಲ್​ ಆರ್​.ಕೆ. ಫಂಕ್ಷನ್​ ಹಾಲ್​ಗೆ ಹಾಜರ್ ಆದರು. ಪೊಲೀಸರು ಅರೆಸ್ಟ್ ಮಾಡಲು ಬರ್ತಾರೆಂಬ ಸುದ್ದಿಯಿದ್ದ ಕಾರಣ, ಚಂದ್ರಬಾಬು ನಾಯ್ಡು ಅಲರ್ಟ್ ಆಗಿದ್ದರು. ಸಿಐಡಿ ಪೊಲೀಸರು ನಿಮ್ಮನ್ನ ನಾವು ಅರೆಸ್ಟ್ ಮಾಡ್ತಿದ್ದೀವಿ ಅಂತಾ ಹೇಳಿದಾಗ, ಚಂದ್ರಬಾಬು ನಾಯ್ಡು ಹೋಗೋಣ ಬನ್ನಿ ಅಂತೇನೂ ಬರಲಿಲ್ಲ. ಗಂಟೆಗಟ್ಟಲೇ ಚರ್ಚೆ ನಡೆಸಿದರು. ಕಾನೂನು ನೋಟಿಸ್‌ನ ಪರಿಶೀಲನೆ ನಡೆಸಿದರು.

ಅರೆಸ್ಟ್ ಮಾಡಲು ಬಂದ ಪೊಲೀಸರಿಗೆ ಟಿಡಿಪಿ ಕಾರ್ಯಕರ್ತರ ಪ್ರತಿಭಟನೆಯ ಬಿಸಿ ಕೂಡ ತಟ್ಟುತ್ತಿತ್ತು. ಕೊನೆಗೂ ಬೆಳಗ್ಗೆ 6 ಗಂಟೆಗೆ, ಚಂದ್ರಬಾಬು ನಾಯ್ಡು ಅವರ ಅರೆಸ್ಟ್ ಆಯ್ತು. ಸಾಕಷ್ಟು ಹೈಡ್ರಾಮಾದ ನಂತರ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪೊಲೀಸರ ಜೊತೆ ಹೋಗಲು ಒಪ್ಪಿಕೊಂಡರು. ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ, ಚಂದ್ರಬಾಬು ನಾಯ್ಡು ಅವರನ್ನ ವಿಜಯವಾಡಕ್ಕೆ ಕರೆದುಕೊಂಡು ಹೋಗಲಾಯ್ತು. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಚಂದ್ರಬಾಬು ನಾಯ್ಡು, ತಪ್ಪೇ ಮಾಡದವರನ್ನ ಅರೆಸ್ಟ್ ಮಾಡಿದ್ದಾರೆ ಅಂತಾ ಹೇಳಿದರು. ಯಾವಾಗ ಚಂದ್ರಬಾಬು ನಾಯ್ಡು ಅವರ ಅರೆಸ್ಟ್ ಆಗಿರೋ ವಿಚಾರ ವೈರಲ್ ಆಯ್ತೋ, ಆಂಧ್ರಪ್ರದೇಶ ದಾದ್ಯಂತ ಟಿಡಿಪಿ ಕಾರ್ಯಕರ್ತರು ರೊಚ್ಚಿಗೆದ್ದರು. ಚಂದ್ರಬಾಬು ನಾಯ್ಡು ಅವರ ಅರೆಸ್ಟ್ ಹಿಂದೆ ಜಗನ್ ಅವರ ಸರ್ಕಾರದ ಕೈವಾಡವಿದೆ ಅಂತಾ ಆರೋಪಿಸಿದರು.

ಚಂದ್ರಬಾಬು ನಾಯ್ಡು ಅರೆಸ್ಟ್ ಆದ ನಂತರ, ಅಮರಾವತಿಯಲ್ಲಿ ಸಿಐಡಿ ಎಡಿಜಿಪಿ ಎನ್‌. ಸಂಜಯ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಆಂಧ್ರಪ್ರದೇಶ ಕೌಶಲಾಭಿವೃದ್ಧಿ ನಿಗಮದಲ್ಲಿ ನಡೆದಿರುವ 550 ಕೋಟಿ ರೂಪಾಯಿ ಅವ್ಯವಹಾರ ಪ್ರಕರಣದ ಎ1 ಆರೋಪಿ ಚಂದ್ರಬಾಬು ನಾಯ್ಡು ಅವರೇ ಆಗಿದ್ದಾರೆ. ನಾಯ್ಡು ಸಿಎಂ ಆಗಿದ್ದಾಗ, ಆಂಧ್ರಪ್ರದೇಶದಲ್ಲಿ ಕೌಶಲ ಕೇಂದ್ರಗಳನ್ನ ತೆರೆಯುವಲ್ಲಿ ನಿಗಮಕ್ಕೆ ಬಿಡುಗಡೆಯಾಗಿದ್ದ ಸುಮಾರು 3,300 ಕೋಟಿ ಹಣದಲ್ಲಿ ಅವರಿಂದ ಸರ್ಕಾರಕ್ಕೆ 370 ಕೋಟಿ ವಂಚನೆ ಆಗಿದೆ ಎಂದು ತಿಳಿಸಿದರು. ಕೇಂದ್ರಗಳನ್ನ ತೆರೆಯುವಲ್ಲಿ ಮತ್ತು ಸಾಮಾಗ್ರಿಗಳನ್ನ ಖರೀದಿಸುವಲ್ಲಿ ನಕಲಿ ಕಂಪನಿಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನ ಸೃಷ್ಟಿಸಿ ವಂಚನೆ ಮಾಡಲಾಗಿದೆ ಅಂತಾ ತಿಳಿಸಿದರು. ಚಂದ್ರಬಾಬು ನಾಯ್ಡು ಅರೆಸ್ಟ್ ನಂತರ ಆಂಧ್ರಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಟಿಡಿಪಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದು, ನಾಯ್ಡು ಅವರ ಬಂಧನ ಕಾನೂನಿಗೆ ವಿರುದ್ಧವಾದದ್ದು. ಕೂಡಲೇ ನೀವು ಮಧ್ಯಪ್ರವೇಶ ಮಾಡ್ಬೇಕು ಅಂತಾ ಆಗ್ರಹಿಸಿದ್ದಾರೆ.

ಅಷ್ಟಕ್ಕೂ ಏನಿದು ಪ್ರಕರಣ?
ಜಗನ್ ಈ ಬಗ್ಗೆ ಧ್ವನಿ ಎತ್ತಿದ್ದು ಯಾವಾಗ?

2014ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾದ ಕೆಲವೇ ಕೆಲವು ತಿಂಗಳ ಬಳಿಕ ಚಂದ್ರಬಾಬು ನಾಯ್ಡು ಒಂದು ಮಹತ್ವಾಕಾಂಕ್ಷಿ ಯೋಜನೆ ಘೋಷಿಸುತ್ತಾರೆ. ಆ ಯೋಜನೆಯ ಉದ್ದೇಶ, ನಿರುದ್ಯೋಗಿಗಳಲ್ಲಿ ಕೌಶಲ್ಯ ಅಭಿವೃದ್ಧಿಪಡಿಸೋದು. ಇದಕ್ಕಾಗಿ ಚಂದ್ರಬಾಬು ನಾಯ್ಡು ಕೌಶಲಭಿವೃದ್ಧಿ ನಿಗಮವನ್ನ ಸ್ಥಾಪಿಸಿದರು. ಆರಂಭದಲ್ಲಿ ಚಂದ್ರಬಾಬು ನಾಯ್ಡು ಸೀಮನ್‌ ಇಂಡಿಯಾ ಕಂಪನಿಯ ಜೊತೆ ಎಂಓಯು ಮಾಡಿಕೊಂಡಿತು. ಈ ಪ್ರಾಜೆಕ್ಟ್‌ನ ಸೀಮೆನ್ಸ್‌ ಇಂಡಸ್ಟ್ರಿ ಸಾಫ್ಟ್‌ವೇರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತು ಡಿಸೈನ್ ಟೆಕ್‌ ಸಿಸ್ಟಮ್ ಪ್ರೈವೇಟ್‌ ಲಿಮಿಟೆಡ್‌ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸೋದಾಗಿ ಹೇಳಿದ ಚಂದ್ರಬಾಬು ನಾಯ್ಡು, ರಾಜ್ಯಾದ್ಯಂತ ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಹೇಳಿದ್ದರು.

ಎಂಓಯು ಪ್ರಕಾರ, ಯೋಜನೆಯ ಒಟ್ಟು ವೆಚ್ಚ, 3,356 ಕೋಟಿ ರೂಪಾಯಿ. ಈ ಪೈಕಿ ಶೇ.10ರಷ್ಟನ್ನ ರಾಜ್ಯ ಸರ್ಕಾರ ಭರಿಸೋದು, ಉಳಿದ ಹಣವನ್ನ ಸೀಮೆನ್ಸ್ ಕಂಪನಿ ಬಂಡವಾಳ ಹೂಡಬೇಕಿತ್ತು. ಎಲ್ಲ ಅಂದುಕೊಂಡಂತೆ ನಡೆಯಿತು. 2015, ಜನವರಿ 19ರಂದು, ಚಂದ್ರಬಾಬು ನಾಯ್ಡು ವರ್ಚುವಲಿ, 17 ಸ್ಕಿಲ್‌ ಡೆವಲಪ್‌ಮೆಂಟ್‌ ಕೇಂದ್ರಗಳನ್ನ ಉದ್ಘಾಟಿಸಿದರು. ಇದಾದ ನಂತರ ಚಂದ್ರಬಾಬು ನಾಯ್ಡು ಸರ್ಕಾರ ಪತನವಾಗಿ , ಜಗನ್‌ ಸರ್ಕಾರ ಅಸ್ತಿತ್ವಕ್ಕೆ ಬಂತು. ಮಾರ್ಚ್‌ 2021ರಂದು ಅಸೆಂಬ್ಲಿಯಲ್ಲಿ ಮುಖ್ಯಮಂತ್ರಿ ಜಗನ್‌ ಸ್ಕಿಲ್ ಡೆವಲಪ್‌ಮೆಂಟ್‌ ಯೋಜನೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಈ ಭ್ರಷ್ಟಾಚಾರ ರೂವಾರಿಯೇ ಚಂದ್ರಬಾಬು ನಾಯ್ಡು ಅಂತಾ ಆರೋಪಿಸಿದರು. ಪ್ರಾಥಮಿಕ ತನಿಖೆಯ ನಂತರ, ಆಂಧ್ರಪ್ರದೇಶದ ಸಿಐಡಿ ಡಿಸೆಂಬರ್‌ 9, 2021ರಲ್ಲಿ ಎಫ್‌ಐಆರ್‌ ದಾಖಲಿಸಿತು. ಅಲ್ಲಿಂದ ಆಟ ಶುರುವಾಯ್ತು.

ಜಗನ್‌ ಅವರ ಮುಖ್ಯ ಆರೋಪ ಏನಂದ್ರೆ, ಯೋಜನೆ ಜಾರಿಯಾದ ಕೇವಲ ಮೂರೇ ತಿಂಗಳಲ್ಲಿ ಚಂದ್ರಬಾಬು ನಾಯ್ಡು ಅವರು 371 ಕೋಟಿ ರೂಪಾಯಿಯನ್ನ ಅವಸರವಾಗಿ ಬಿಡುಗಡೆ ಮಾಡಿದರು. ಆಗ ಸೀಮನ್‌ ಕಂಪನಿ ಬಂಡವಾಳ ಹೂಡಿಕೆ ಮಾಡೋ ಮುನ್ನವೇ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿತ್ತು ಆರೋಪಿಸಿದೆ. ಬಿಡುಗಡೆಯಾದ ಹಣಕ್ಕೆ ಕಂಪನಿಗಳು ಕಂಪ್ಯೂಟರ್‌ ಸೇರಿದಂತೆ ಇತರೆ ಸಾಮಾಗ್ರಿಗಳನ್ನ ನೀಡಬೇಕಿತ್ತು. ಆದ್ರೆ, ನಕಲಿ ಬಿಲ್ ಸೃಷ್ಟಿಸಿಕೊಂಡು ಹಣ ಕೊಳ್ಳೆ ಹೊಡೆಯಲಾಗಿದೆ ಅನ್ನೋದು ಚಂದ್ರಬಾಬು ನಾಯ್ಡು ಅವರ ಮೇಲಿರೋ ಆರೋಪ.

ಇಡೀ ಪ್ರಕರಣ ರೂವಾರಿಯೇ ಚಂದ್ರಬಾಬು ನಾಯ್ಡು ಅಂತಾ ಸಿಐಡಿ ಹೇಳ್ತಿದೆ. ಚಂದ್ರಬಾಬು ನಾಯ್ಡು ಅರೆಸ್ಟ್‌ಗೂ ಮುನ್ನ, ಸೀಮನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್‌ ಪ್ರೈವೇಟ್‌ ಲಿಮಿಟೆಡ್‌ನ ಮಾಜಿ ಎಂಡಿ ಸೇರಿದಂತೆ ನಾಲ್ವರನ್ನ ಅರೆಸ್ಟ್ ಮಾಡಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದುಕೊಂಡಿದ್ದು, ಚುನಾವಣಾ ಪೂರ್ವದಲ್ಲಿ ಜಗನ್‌ ಸೇಡು ತೀರಿಸಿಕೊಂಡರು ಅಂತಾ ಹೇಳಲಾಗ್ತಿದೆ. ಆದ್ರೆ, ಅರೆಸ್ಟ್‌ನ ಲಾಭ ಪಡೆಯಲು ಟಿಡಿಪಿ ಪ್ಲಾನ್ ಮಾಡ್ತಿದ್ದು, ರಾಜಕೀಯ ಲಾಭಕ್ಕಾಗಿ ಸಮರವಂತೂ ನಡೆಯುತ್ತಿರೋದು ಕಣ್ಣಿಗೆ ರಾಚುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿರಾರು ಕೋಟಿಗಳ ಅವ್ಯವಹಾರ ಕೇಸ್​​.. ನಾಯ್ಡು ಮೇಲೆ ಸೇಡು ತೀರಿಸಿಕೊಂಡ್ರಾ ಸಿಎಂ ಜಗನ್​​?

https://newsfirstlive.com/wp-content/uploads/2023/09/chandra-babau_-7.jpg

Load More