newsfirstkannada.com

ಆಕ್ಸಿಡೆಂಟ್ ಮಾಡಿ ಎಸ್ಕೇಪ್​​ ಆದ್ರಾ ನಟ ಚಂದ್ರಪ್ರಭಾ? ಮಾನವೀಯತೆಗೂ ಗಾಯಾಳನ್ನು ಆಸ್ಪತ್ರೆಗೆ ಸೇರಿಸಲಿಲ್ಲವೇ? ಏನಿದು ಸ್ಟೋರಿ!

Share :

06-09-2023

  ಅಪಘಾತ ಮಾಡಿ ಚಂದ್ರಪ್ರಭಾ ಹಿಟ್ ಅಂಡ್ ರನ್ ಮಾಡಿಬಿಟ್ರೆ..?

  ಗಾಯಾಳುವನ್ನು ಆಸ್ಪತ್ರೆಗೆ ಸೇರಿಸದೆ ಮಾನವೀಯತೆ ಮರೆತರೇ!

  ಅಷ್ಟಕ್ಕೂ ಆ ಅಪಘಾತ ಪ್ರಕರಣ ಆಗಿರೋದೇನು? ಇಲ್ಲಿದೆ ಸ್ಟೋರಿ!

ಒಮ್ಮೊಮ್ಮೆ ಹೀಗೂ ಆಗಿಬಿಡುತ್ತೆ. ಉದ್ದೇಶಪೂರ್ವಕವಾಗಿರದಿದ್ರೂ ಪರಿಣಾಮ ಜಾಸ್ತಿಯೇ ಇರುತ್ತೆ. ಗಿಚ್ಚಿಗಿಲಿ ಖ್ಯಾತಿಯ ಹಾಸ್ಯನಟ ಚಂದ್ರಪ್ರಭಾ ಪ್ರಕರಣದಲ್ಲೂ ಆಗಿರೋದು ಇದೇ. ಅಪಘಾತ ಪ್ರಕರಣ ಒಂದರಲ್ಲಿ ಚಂದ್ರಪ್ರಭಾ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ದ್ವಿಚಕ್ರವಾಹನಕ್ಕೆ ದಿಕ್ಕಿ ಹೊಡೆದು, ಪರಾರಿ ಆಗಿದ್ದಾರೆ ಅಂತಾ ಆರೋಪಿಸಲಾಗಿದೆ. ಹಾಗಾದ್ರೆ, ಇದು ನಿಜವೇ? ಚಂದ್ರಪ್ರಭಾ ಹಿಟ್ ಅಂಡ್ ರನ್ ಮಾಡಿಬಿಟ್ರೆ? ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಿಲ್ಲವೇ? ಅಷ್ಟಕ್ಕೂ ಆ ಅಪಘಾತ ಪ್ರಕರಣ ಆಗಿರೋದೇನು?

ಚಂದ್ರಪ್ರಭಾ ಅಂದಾಕ್ಷಣ ನೆನಪಾಗೋದೇ ಅವ್ರ ಕಾಮಿಡಿ ಸ್ಕಿಟ್ಸ್‌. ಬಿದ್ದು ಬಿದ್ದು ನಗುವಂತೆ ನಟನೆ ಮಾಡೋ ಚಂದ್ರಪ್ರಭಾ, ಗಿಚ್ಚಿಗಿಲಿಗಿಲಿ ಕಾಮಿಡಿ ಶೋನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು ಅನ್ನೋದು ಸುಳ್ಳು ಅಲ್ಲವೇ ಅಲ್ಲ. ಚಂದ್ರಪ್ರಭಾ ಮತ್ತು ಸೌಮ್ಯ ಅಭಿನಯಿಸಿರೋ ಅದೆಷ್ಟೋ ಸ್ಕಿಟ್‌ಗಳು ಹಿಟ್ ಆಗಿವೆ. ಇವತ್ತಿಗೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ರನ್ನಿಂಗ್ ಆಗ್ತಿವೆ. ಜನರಂತೂ ಸರ್ಚ್ ಮಾಡಿ ನೋಡುವಂತಹ ಕ್ರೇಜ್‌ ಕೂಡ ಇದೆ.

ಇಷ್ಟೆಲ್ಲಾ ಹೆಸರು ಮಾಡಿರೋ ಚಂದ್ರಪ್ರಭಾ ಇವತ್ತೂ ಮಾತ್ರ ಆರೋಪಿತ ಸ್ಥಾನದಲ್ಲಿ ನಿಂತುಕೊಂಡು ಬಿಟ್ಟಿದ್ದಾರೆ. ಇಡೀ ದಿವಸ ಚಂದ್ರಪ್ರಭಾ ಹಂಗ್ ಮಾಡಿಬಿಟ್ರಾ? ಹಿಂಗ್ ಮಾಡಿಬಿಟ್ರಾ? ಅಂತೆಲ್ಲಾ ಚರ್ಚೆಗಳು ಆರಂಭವಾಗಿವೆ. ಅಷ್ಟಕ್ಕೂ ಈ ಪ್ರಕರಣದಲ್ಲಿ ಆಗಿರೋದೇನು?

ಚಂದ್ರಪ್ರಭಾ ಹಿಟ್‌ ಅಂಡ್‌ ರನ್‌ ಕೇಸ್‌!

ಅಂದ್ಹಾಗೇ, ಈ ಅಪಘಾತ ನಡೆದದ್ದು ಸೋಮವಾರ ರಾತ್ರಿ. ಚಿಕ್ಕಮಗಳೂರು ನಗರ ಸರ್ಕಾರಿ ಬಸ್ ನಿಲ್ದಾಣದ ಬಳಿ ಬೈಕಿಗೆ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರ ಕೆಳಗೆ ಬಿದ್ದಿದ್ದಾನೆ. ತಕ್ಷಣವೇ ಅಲ್ಲಿದ್ದ ಪೊಲೀಸರು ಆತನನ್ನ ಮೇಲೆಕ್ಕೆತ್ತಿದ್ದಾರೆ.

ಇದಿಷ್ಟು ಸಿಸಿಟಿವಿ ಫೂಟೇಜ್‌ನಲ್ಲಿ ಕಾಣಿಸ್ತಿದೆ. ಆದ್ರೆ, ಡಿಕ್ಕಿ ಹೊಡೆದ ಕಾರು ನಟ ಚಂದ್ರಪ್ರಭಾಗೆ ಸೇರಿದ್ದು. ಆ ಟೈಮ್‌ನಲ್ಲಿ ಕಾರು ಡ್ರೈವ್ ಮಾಡ್ತಿದ್ದದ್ದು ಸ್ವತಃ ನಾನೇ ಅಂತಾ ಅವ್ರೇ ಒಪ್ಪಿಕೊಂಡಿದ್ದಾರೆ. ಆದ್ರೆ, ಇದಾದ ನಂತರ ಆದ ಘಟನೆಯೇ ಈಗ ಚರ್ಚೆಗೆ ಗ್ರಾಸವಾಗಿರೋದು.

ಅಪಘಾತದ ನಂತರ ಗಾಯಾಳು ಮಾಲ್ತೇಶ್‌ ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ, ಯಾವಾಗ ಗಾಯಾಳು ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಅಂತಾ ಗೊತ್ತಾಯ್ತೋ, ಆ ನಂತರ ಗಾಯಾಳುವನ್ನು ಹಾಸನದ ಸ್ಪರ್ಶ್‌ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಾದ ನಂತರ ನಟ ಚಂದ್ರಪ್ರಭಾ ಇತ್ತು ತಿರುಗಿಯೂ ನೋಡಿಲ್ಲ ಅಂತಾ ಗಾಯಾಳು ಸ್ನೇಹಿತ ಆರೋಪಿಸಿದ್ದಾರೆ.

ಮಾಲ್ತೇಶ್ ಪೋಷಕರಿಗೆ ಇಬ್ಬರು ಮಕ್ಕಳು

ಇನ್ನು, ಗಾಯಾಳು ಮಾಲ್ತೇಶ್‌ ಸಹೋದರಿ ಶಿವಮ್ಮ, ಸಹೋದರನ ಸ್ಥಿತಿ ನೋಡಿ ಭಾವುಕರಾಗಿದ್ದಾರೆ. ಮಾಲ್ತೇಶ್ ಪೋಷಕರಿಗೆ ಇಬ್ಬರು ಮಕ್ಕಳು. ಒಬ್ಬರು ಸಹೋದರಿ. ಅವ್ರಿಗೆ ಮದುವೆಯಾಗಿ, ಗಂಡನ ಮನೆಯಲ್ಲಿದ್ದಾರೆ. ಇಡೀ ಮನೆಗೆ ಮಾಲ್ತೇಶ್‌ವೊಬ್ಬನೇ ಆಧಾರಸ್ತಂಭ. ಕೆಲ್ಸ ಮುಗಿಸಿಕೊಂಡು ಬರ್ತಿದ್ದವನು, ಸದ್ಯ ಆಸ್ಪತ್ರೆಗೆ ದಾಖಲಾಗಿರೋದರಿಂದ ಕುಟುಂಬ ಸದಸ್ಯರು ಆತಂಕ್ಕಿಡಾಗಿದ್ದಾರೆ. ನಮಗೆ ಬೇಕಿರೋದು ಕೇವಲ ನಮ್ಮ ಸಹೋದರನ ಪ್ರಾಣವಷ್ಟೇ. ಮತ್ತೇನೂ ಬೇಡ ಅಂತಾ ಹೇಳ್ತಿದ್ದಾರೆ.
ಇನ್ನು, ಮಗನಿಗೆ ಅಪಘಾತವಾಗಿದೆ ಅನ್ನೋ ಸುದ್ದಿ ಕೇಳಿಯೇ ತಾಯಿ ದಿಗ್ಭ್ರಾಂತರಾಗಿದ್ದಾರೆ. ತಾಯಿಯಂತೂ ಇನ್ನೂ ಆ ಶಾಕ್‌ನಿಂದ ಹೊರಬಂದಿಲ್ಲ.

ಇದಿಷ್ಟು ಗಾಯಾಳು ಮಾಲ್ತೇಶ್ ಅವ್ರ ಕುಟುಂಬದ ಗಂಭೀರ ಆರೋಪ. ಚಂದ್ರಪ್ರಭಾ ಹಿಟ್ ಅಂಡ್ ರನ್ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸದೇ ಅಮಾನವೀಯವಾಗಿ ವರ್ತಿಸಿದ್ದಾರೆ ಅನ್ನೋದು ಇವ್ರ ಆರೋಪ. ಆದ್ರೆ, ಚಂದ್ರಪ್ರಭಾ ಇವರೆಲ್ಲಾ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.

ಕಾರು ಅಪಘಾತವಾದಾಗ ಚಲಾಯಿಸುತ್ತಿದ್ದದ್ದು ನಾನೇ. ಆದ್ರೆ, ಕೂಡಲೇ ನಾನು ಆತನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ. ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ನಾನು ಹೊರಟೆ. ಆದ್ರೆ, ಸವಾರ ಮದ್ಯಪಾನ ಮಾಡಿದ್ದ. ನನ್ನದೇನೂ ತಪ್ಪಿಲ್ಲ. ನಾನು ಸ್ಪಂದಿಸಿದ್ದೇನೆ ಅಂತಾ ಚಂದ್ರಪ್ರಭಾ ಹೇಳಿದ್ದಾರೆ.

ಇನ್ನೊಂದೆಡೆ, ಗಾಯಾಳು ಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬ ಸದಸ್ಯರು ಹೇಳ್ತಿದ್ದಾರೆ. ಸದ್ಯ ಈ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಚಿಕ್ಕಮಗಳೂರು ನಗರ ಟ್ರಾಫಿಕ್ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಚಂದ್ರಪ್ರಭಾ ಅಪಘಾತದ ನಂತರ ಚಿಕಿತ್ಸೆ ಕೊಡಿಸಿದ್ರಾ? ಸ್ಪಂದಿಸದೇ ಹಾಗೇ ಹೊರಟು ಹೋದ್ರಾ? ಅನ್ನೋದನ್ನೆಲ್ಲಾ ಪೊಲೀಸರೇ ತನಿಖೆ ಮೂಲಕ ಪತ್ತೆ ಹಚ್ಚಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಕ್ಸಿಡೆಂಟ್ ಮಾಡಿ ಎಸ್ಕೇಪ್​​ ಆದ್ರಾ ನಟ ಚಂದ್ರಪ್ರಭಾ? ಮಾನವೀಯತೆಗೂ ಗಾಯಾಳನ್ನು ಆಸ್ಪತ್ರೆಗೆ ಸೇರಿಸಲಿಲ್ಲವೇ? ಏನಿದು ಸ್ಟೋರಿ!

https://newsfirstlive.com/wp-content/uploads/2023/09/Chandraprabha.jpg

Load More