newsfirstkannada.com

ISRO: ಇಂದು ರವಿಮಾಮನತ್ತ ಜಿಗಿಯಲಿದ್ದಾನೆ ಆದಿತ್ಯ L-1; ಇಸ್ರೋ ಸೂರ್ಯ ಶಿಕಾರಿಗೆ ಆಲ್‌ ದಿ ಬೆಸ್ಟ್‌!

Share :

02-09-2023

    ಚಂದ್ರನಲ್ಲಿ ಮುಂದುವರಿದ ವಿಕ್ರಮನ ಸತ್ಯಶೋಧನೆ

    ಭೂಮಿಯ ಭೂಕಂಪನದಂತೆ ಚಂದ್ರನಲ್ಲೂ ಕಂಪನ

    ನೈಸರ್ಗಿಕ ಮಾಹಿತಿ ಆಧರಿಸಿ ಇಸ್ರೋ ಅಧ್ಯಯನ ಶುರು

ಸೂರ್ಯನ ಅಧ್ಯಯನಕ್ಕೆ ಇಂದು ಆದಿತ್ಯ ಎಲ್‌ 1 ಉಡಾವಣೆಯಾಗ್ತಿದೆ. ಇದರ ನಡುವೆ ಚಂದ್ರಯಾನ ಕೈಗೊಂಡಿರೋ ವಿಕ್ರಮ್‌ ಮತ್ತು ಪ್ರಗ್ಯಾನ್‌ ದಕ್ಷಿಣ ಧ್ರುವದಲ್ಲಿ ಅಡಗಿರುವ ಒಂದೊಂದು ರಹಸ್ಯಗಳನ್ನ ಬೆಳಕಿಗೆ ತರುತ್ತಿವೆ. ಭಾರತದ ಚಂದ್ರಯಾನ-3 ಯೋಜನೆ ಭರ್ಜರಿ ಯಶಸ್ಸನ್ನು ಕಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್​ ಲ್ಯಾಂಡರ್​ ಕಾಲಿಟ್ಟು, ವೈಜ್ಞಾನಿಕ ಅಧ್ಯಯನ ನಡೆಸುತ್ತಿದೆ. 14 ದಿನಗಳ ಈ ಆಪರೇಷನ್​ ಮೂನ್​ನಲ್ಲಿ ಈಗಾಗಲೇ 9 ದಿನಗಳು ಕಳೆದು ಹೋಗಿದೆ.

ಪ್ರತಿ ನಿತ್ಯವೂ ತಿಂಗಳನ ಅಂಗಳದಲ್ಲಿ ಅಡಗಿರುವ ರಹಸ್ಯಗಳು ಒಂದೊಂದಾಗೇ ಬಯಲಾಗುತ್ತಿವೆ. ಚಂದಮಾಮನ ಅಂಗಳದಲ್ಲಿ ಸಂಚರಿಸುತ್ತಿರುವ ಪ್ರಗ್ಯಾನ್ ರೋವರ್‌, ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಹಲವು ಖನಿಜಾಂಶಗಳು ಇರುವುದನ್ನು ಪತ್ತೆ ಹಚ್ಚಿದೆ. ಇದೀಗ ಭೂಮಿಯಂತೆ ಚಂದ್ರನಲ್ಲೂ ಕಂಪನ ಸಂಭವಿಸುತ್ತೆ ಅನ್ನೋ ರೋಚಕ ಮತ್ತು ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ.

ಭೂಮಿಯ ಭೂಕಂಪನದಂತೆ ಚಂದ್ರನಲ್ಲೂ ಕಂಪನ
ನೈಸರ್ಗಿಕ ಮಾಹಿತಿ ಆಧರಿಸಿ ಇಸ್ರೋ ಅಧ್ಯಯನ

ಚಂದ್ರನ ಮೇಲೆ ಉಂಟಾಗುವ ಕಂಪಗಳನ್ನು ಅರಿಯಲು ವಿಕ್ರಮ್​ ಲ್ಯಾಂಡರ್‌ನಲ್ಲಿ ಉಪಕರಣ ಅಳವಡಿಸಲಾಗಿದೆ. ಈ ಉಪಕರಣವು ತಾನಿಳಿದ ಪ್ರದೇಶದಲ್ಲಿ ಸಹಜವಾಗಿ ಉಂಟಾಗಿರುವ ಕೆಲವು ಚಲನೆಗಳನ್ನು ದಾಖಲಿಸಿದೆ. ಇಲ್ಸಾ ಅಂದ್ರೆ ಇನ್‌ಸ್ಟ್ರುಮೆಂಟ್‌ ಫಾರ್‌ ದ ಲೂನಾರ್‌ ಸೆಸ್ಮಿಕ್‌ ಆಕ್ಟಿವಿಟಿ ಪೇಲೋಡ್‌ ಮೊದಲ ಬಾರಿ ರೋವರ್‌ನ ಓಡಾಟದ ಕಂಪನವನ್ನು ಪತ್ತೆ ಮಾಡಿದೆ. ಅಲ್ಲದೇ ಮತ್ತೊಂದು ನೈಸರ್ಗಿಕ ಮಾಹಿತಿಯನ್ನು ರವಾನಿಸಿದ್ದು, ಇದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಇಸ್ರೋ ಮಾಹಿತಿ ಹಂಚಿಕೆ ಕೊಂಡಿದೆ.

ಬಾಹ್ಯಾಕಾಶ ವಲಯದ 13 ಕಂಪನಿಗಳ ಷೇರಿಗೆ ಡಿಮ್ಯಾಂಡ್​

ಚಂದ್ರಯಾನ-3 ಯೋಜನೆ ಅಂದುಕೊಂಡಂತೆ ಯಶಸ್ವಿ ಆಗಿದೆ. ಇದರ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ 13 ಬಾಹ್ಯಾಕಾಶ ವಲಯದ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಳವಾಗಿದೆ. ಭಾರತ್​ ಹೆವಿ ಎಲೆಕ್ಟ್ರಿಕಲ್ಸ್​ ಲಿಮಿಟೆಡ್​ ಚಂದ್ರಯಾನ-3ಕ್ಕೆ ಬೇಕಾದ ಬ್ಯಾಟರಿ ಪೂರೈಕೆ ಮಾಡಿತ್ತು. ಇನ್ನು ಸೆಂಟಮ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ ಚಂದ್ರಯಾನ -3ರ ಸಿಸ್ಟಮ್‌ಗಳ ಡಿಸೈನ್‌, ತಯಾರಿಕೆಯಲ್ಲಿ ಪ್ರಮುಖ ಪಾತ್ರ. ಅದೇ ರೀತಿ ಗೋದ್ರೇಜ್ ಏರೋಸ್ಪೇಸ್ ಕಂಪನಿಯು. ಚಂದ್ರಯಾನ-3 ಯೋಜನೆಯ ಪ್ರಮುಖ ಎಂಜಿನ್‌, ಥ್ರಸ್ಟರ್‌ಗಳನ್ನು ತಯಾರಿಸಿತ್ತು. ಇನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ವಿಕ್ರಮ್ ಲ್ಯಾಂಡರ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಎಲ್ & ಟಿ ಕಂಪನಿ ಚಂದ್ರಯಾನ-3 ಉಡಾವಣೆಯ ವಾಹಕಕ್ಕೆ ಬೇಕಾದ ಭಾಗಗಳ ಪೂರೈಕೆ ಮಾಡಿತ್ತು. ಇವಷ್ಟೇ ಅಲ್ಲ. ಚಂದ್ರಯಾನ-3 ಯೋಜನೆಗೆ ಬಾಹ್ಯಾಕಾಶ ವಲಯದ 13 ಕಂಪನಿಗಳು ಶ್ರಮಿಸಿವೆ. ಯೋಜನೆ ಯಶಸ್ಸಿನ ಬೆನ್ನಲ್ಲೇ, ಈ ಎಲ್ಲ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಳವಾಗಿದೆ.

ಇಂದು ರವಿಮಾಮನತ್ತ ಜಿಗಿಯಲಿದ್ದಾನೆ ಆದಿತ್ಯ ಎಲ್​-1
ಇಸ್ರೋ ವಿಜ್ಞಾನಿಗಳಿಗೆ ವಿಪಕ್ಷಗಳ ‘ಇಂಡಿಯಾ’ ವಿಶ್

ಚಂದ್ರಯಾನ-3 ಯೋಜನೆ ಯಶಸ್ವಿಯಾದ ಬೆನ್ನಲ್ಲೇ ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಗೆ ನೇರ ಬೆಂಗಳೂರಿಗೆ ಆಗಮಿಸಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ರು. ಇದಕ್ಕೆ ತಿರುಗೇಟು ಎಂಬಂತೆ ವಿಪಕ್ಷಗಳ ಮೈತ್ರಿ ಕೂಟ ಇಸ್ರೋದ ಚಂದ್ರಯಾನ-3 ಯಶಸ್ಸಿನ ಬಗ್ಗೆ ನಿರ್ಣಯ ಕೈಗೊಂಡಿದೆ. ಇಸ್ರೋ ವಿಜ್ಞಾನಿಗಳ ಸಾಧನೆಯಿಂದ ಇಡೀ ದೇಶಕ್ಕೆ ಹೆಮ್ಮೆ ಪಡುವಂತಾಗಿದೆ. ಚಂದ್ರಯಾನ-3 ಯೋಜನೆ ಇಡೀ ವಿಶ್ವವನ್ನೇ ರೋಮಾಚನಗೊಳಿಸಿದೆ. ಇಂದು ಆದಿತ್ಯ ಎಲ್​-1 ಉಡಾವಣೆಗಾಗಿ ಕಾತುರದಿಂದ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ಒಟ್ಟಾರೆಯಾ್ಇ ಚಂದ್ರಯಾನ-3 ಯೋಜನೆ ಯಶಸ್ಸಿನಿಂದ ಭಾರತ ಸಾಧನೆ ಜಗದಗಲಕ್ಕೂ ಹಬ್ಬಿದೆ. ಯಶಸ್ಸಿನ ಅಲೆಯಲ್ಲೇ ಸೂರ್ಯನ ಅಧ್ಯಯನಕ್ಕೆ ಸಜ್ಜಾಗಿರುವ ಇಸ್ರೋಗೆ ಹಾಲ್​ ದಿ ಬೆಸ್ಟ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ISRO: ಇಂದು ರವಿಮಾಮನತ್ತ ಜಿಗಿಯಲಿದ್ದಾನೆ ಆದಿತ್ಯ L-1; ಇಸ್ರೋ ಸೂರ್ಯ ಶಿಕಾರಿಗೆ ಆಲ್‌ ದಿ ಬೆಸ್ಟ್‌!

https://newsfirstlive.com/wp-content/uploads/2023/09/aditya.jpg

Load More