newsfirstkannada.com

Chandrayaan-3: ವಿಕ್ರಂ ಲ್ಯಾಂಡರ್​​​ನ ವೇಗ ತಗ್ಗಿಸುವ ಕೊನೆಯ ಪ್ರಕ್ರಿಯೆ ಯಶಸ್ವಿ.. ರಷ್ಯಾದ ಲೂನಾ 25ನಲ್ಲಿ ತಾಂತ್ರಿಕ ದೋಷ..!

Share :

20-08-2023

    ಚಂದ್ರನಿಗೆ ಮತ್ತಷ್ಟು ಸಮೀಪ ಸಾಗಿದ ವಿಕ್ರಮ್​ ಲ್ಯಾಂಡರ್

    ನಾಳೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಆಗುತ್ತಾ ಲೂನಾ-25?

    ಆಗಸ್ಟ್​ 23ರ ಸಂಜೆ ವಿಕ್ರಮ್ ಲ್ಯಾಂಡರ್​​ ಸೇಫ್​ ಲ್ಯಾಂಡ್​

ಇಡೀ ವಿಶ್ವದ ಕಣ್ಣೇ ಇದೀಗ ಭಾರತ ಮತ್ತು ರಷ್ಯಾದ ಮೇಲೆ ನೆಟ್ಟಿವೆ. ಭಾರತ ಮತ್ತು ರಷ್ಯಾ ಎರಡೂ ದೇಶಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿವೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಎರಡೂ ದೇಶಗಳು ಕಣ್ಣಿಟ್ಟು, ಚಂದ್ರನ ಅಂಗಳಕ್ಕೆ ಕಾಲಿಡಲು ಸಜ್ಜಾಗಿವೆ. ಅದರಲ್ಲೂ ಭಾರತ ಚಂದಿರನಿಗೆ ಮತ್ತಷ್ಟು ಹತ್ತಿರವಾಗಿದೆ.

ಚಂದ್ರನಿಗೆ ಮತ್ತಷ್ಟು ಸಮೀಪ ಸಾಗಿದ ವಿಕ್ರಮ್​ ಲ್ಯಾಂಡರ್​

ಇಡೀ ದೇಶವಾಸಿಗಳಿಗೆ ಇದು ಮುಂಜಾನೆಯ ಶುಭಸುದ್ದಿ. ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲು ವಿಕ್ರಮ್​ ಲ್ಯಾಂಡರ್​ ಮತ್ತಷ್ಟು ಹತ್ತಿರವಾಗಿದೆ. ಚಂದ್ರಯಾನ 3 ನೌಕೆಯಿಂದ ಪ್ರತ್ಯೇಕಗೊಂಡಿರುವ ಲ್ಯಾಂಡರ್​ನ ವೇಗ ತಗ್ಗಿಸುವ ಕೊನೆ ಹಂತದ ಪ್ರಕ್ರಿಯೆ ಮಧ್ಯರಾತ್ರಿ 2 ಗಂಟೆಗೆ ಯಶಸ್ವಿಯಾಗಿದೆ. ವಿಕ್ರಮ್​ ಲ್ಯಾಂಡರ್​ನ ವೇಗವನ್ನು ಇಳಿಸಲಾಗಿದೆ. ಇದರಿಂದ ಲ್ಯಾಂಡರ್​ ಘಟಕವೂ ಚಂದ್ರನ ಮೇಲ್ಮೈಗೆ ಬಹಳ ಹತ್ತಿರವಿರುವ ಕಕ್ಷೆಯನ್ನು ಸೇರಲಿದ್ದು, ಆಗಸ್ಟ್​ 23ರ ಸಂಜೆ 5.30ರಿಂದ 6.30ರ ಸಮಯದಲ್ಲಿ ವಿಕ್ರಮ್ ಲ್ಯಾಂಡರ್​​ ಸೇಫ್​ ಆಗಿ ಲ್ಯಾಂಡ್​ ಆಗುವ ನಿರೀಕ್ಷೆ ಇದೆ ಎಂದು ಇಸ್ರೋ ತಿಳಿಸಿದೆ. ವಿಕ್ರಮ್​ ಲ್ಯಾಂಡರ್​ನ ಕೊನೆಯ ಹಂತದ ಡೀಬೂಸ್ಟಿಂಗ್​ ಪ್ರಕ್ರಿಯೆ ಯಶ್ವಸಿಯಾದ ಸುದ್ದಿ ಕೇಳಿ, ಇಡೀ ದೇಶವೇ ಸಂತಸಗೊಂಡಿದೆ. ಹಾಗೂ ಇಸ್ರೋ ಸಂಸ್ಥೆಗೆ ಆಲ್ ದಿ ಬೆಸ್ಟ್​ ಹೇಳಿದ್ದಾರೆ.

ರಷ್ಯಾದ ಲೂನಾ 25ನಲ್ಲಿ ತಾಂತ್ರಿಕ ದೋಷ ಪತ್ತೆ

ಇನ್ನು ಚಂದ್ರನ ಅಂಗಳಕ್ಕೆ ರಷ್ಯಾ ಕಳುಹಿಸಿರುವ ಲೂನಾ-25ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮಾಸ್ ಮಾಹಿತಿ ಹಂಚಿಕೊಂಡಿದೆ. ಲೂನಾ-25 ಪೂರ್ವ ಲ್ಯಾಂಡಿಂಗ್ ಕಕ್ಷೆಗೆ ಪ್ರವೇಶಿಸುವ ಪ್ರಯತ್ನದ ವೇಳೆ ತಾಂತ್ರಿಕ ದೋಷ ಕಂಡುಬಂದಿದೆ. ಹಾಗೂ ತಜ್ಞರು ಸಮಸ್ಯೆಯನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಇನ್ನು ಸಮಸ್ಯೆ ಕಂಡು ಬಂದಿದ್ದರೂ ನಾಳೆ ಅಂದ್ರೆ ಆಗಸ್ಟ್​ 21ರಂದು ರಷ್ಯಾದ ಲೂನಾ-25 ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಆಗಲಿದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ರಷ್ಯಾ ಬಾಹ್ಯಾಕಾಶ ಸಂಸ್ಥೆ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ನಮ್ಮ ವಿಜ್ಞಾನಿಗಳು ಸಮಸ್ಯೆ ಸರಿಪಡಿಸುವ ಕೆಲಸ ಮಾಡ್ತಿದ್ದಾರೆ ಎಂಬ ಮಾಹಿತಿಯನ್ನು ಮಾತ್ರ ಹಂಚಿಕೊಂಡಿದೆ.

ಒಟ್ಟಾರೆ ರಹಸ್ಯವಾಗಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಏನಿದೆ ಅನ್ನೋದನ್ನ ಪತ್ತೆ ಹಚ್ಚಲು ಭಾರತ ಮತ್ತು ರಷ್ಯಾ ಮುಂದಾಗಿವೆ. ಭಾರತಕ್ಕಿಂತ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ರಷ್ಯಾ ಇತಿಹಾಸ ಸೃಷ್ಟಿಸುತ್ತಾ.. ಇಲ್ವಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: ವಿಕ್ರಂ ಲ್ಯಾಂಡರ್​​​ನ ವೇಗ ತಗ್ಗಿಸುವ ಕೊನೆಯ ಪ್ರಕ್ರಿಯೆ ಯಶಸ್ವಿ.. ರಷ್ಯಾದ ಲೂನಾ 25ನಲ್ಲಿ ತಾಂತ್ರಿಕ ದೋಷ..!

https://newsfirstlive.com/wp-content/uploads/2023/08/CHANDRAYAANA.jpg

Load More