newsfirstkannada.com

×

ADITYA-L1; ಚಂದ್ರಯಾನ-3 ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಮುಹೂರ್ತ ಫಿಕ್ಸ್; ‘ಆದಿತ್ಯಾ’ ಲ್ಯಾಂಡ್ ಆಗೋದು ಎಲ್ಲಿ?

Share :

Published August 28, 2023 at 3:50pm

Update August 28, 2023 at 4:22pm

    ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಮತ್ತೊಂದು ಮೈಲಿಗಲ್ಲು

    ಸೂರ್ಯ ಶಿಕಾರಿಗೆ ಭರ್ಜರಿ ಪ್ಲಾನ್ ಮಾಡಿದ ಇಸ್ರೋ ವಿಜ್ಞಾನಿಗಳು

    ಶ್ರೀಹರಿಕೋಟಾ ಬಾಹ್ಯಾಕಾಶದಿಂದ ಆದಿತ್ಯಾ L-1 ಉಡಾವಣೆ

ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗಿದೆ. ಸೂರ್ಯ ಶಿಕಾರಿ ಮುಂದಾಗಿರೋ ಇಸ್ರೋ ವಿಜ್ಞಾನಿಗಳು ಆದಿತ್ಯಾ L-1 ಮಿಷನ್ ಉಡಾವಣೆಗೆ ಸಜ್ಜಾಗಿದ್ದಾರೆ. ಆದಿತ್ಯಾ L-1 ಇದೇ ಸೆಪ್ಟೆಂಬರ್ 2ರಂದು ಉಡಾವಣೆ ಮಾಡುವುದಾಗಿ ಇಸ್ರೋ ಅಧಿಕೃತವಾಗಿ ಘೋಷಣೆ ಮಾಡಿದೆ. ಸೆಪ್ಟೆಂಬರ್ 2ರಂದು ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟಾ ಬಾಹ್ಯಾಕಾಶದಿಂದ ಆದಿತ್ಯಾ L-1 ರಾಕೆಟ್ ಉಡಾವಣೆ ಆಗಲಿದೆ.

ಸಾಮಾಜಿಕ ಜಾಲತಾಣ Xನಲ್ಲಿ ಇಸ್ರೋ ಆದಿತ್ಯಾ L-1 ಮಿಷನ್ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಇದೇ ಸೆಪ್ಟಂಬರ್ 2ರಂದು ಬೆಳಗ್ಗೆ 11.50ಕ್ಕೆ ಆದಿತ್ಯಾ L-1 ಮಿಷನ್ ಉಡಾವಣೆ ಮಾಡಲಾಗುವುದು. ಸಾರ್ವಜನಿಕರು ಈ ಐತಿಹಾಸಿಕ, ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಬಹುದು. ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದ ಗ್ಯಾಲರಿಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ. ಹಾಜರಾಗಲು ಇಷ್ಟ ಪಡುವವರು ನಿಗದಿತ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಲು ಇಸ್ರೋ ಅವಕಾಶ ನೀಡಿದೆ.

ಇದನ್ನೂ ಓದಿ: ಚಂದ್ರನ ಮೇಲಿರೋದು ಒಂದಲ್ಲ, ಎರಡು ರೋವರ್‌; ಭಾರತದ ಪ್ರಗ್ಯಾನ್, ಚೀನಾದ ಯುಟು-2 ಮೀಟ್ ಆಗುತ್ತಾ?

ಸೆಪ್ಟೆಂಬರ್ 2 ಅಂದ್ರೆ ಮುಂದಿನ ಶನಿವಾರ ಆದಿತ್ಯ ಎಲ್-1 ಉಡಾವಣೆಗೆ ಇಸ್ರೋ ಸಕಲ ರೀತಿಯಲ್ಲೂ ಸಜ್ಜಾಗಿದೆ. ಚಂದ್ರಯಾನ-3ರ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಭರ್ಜರಿ ತಯಾರಿ ನಡೆಸಿದೆ.

‘ಆದಿತ್ಯಯಾನ’ ಅಧ್ಯಯನ ಹೇಗೆ?

ಸೆ.2ರಂದು ಬೆಳಗ್ಗೆ 11.50ಕ್ಕೆ PSLV-C57 ರಾಕೆಟ್ ಮೂಲಕ ಉಡಾವಣೆ

ಆದಿತ್ಯ L​-1 ನೌಕೆ ಬರೋಬ್ಬರಿ 1,500 ಕೆ.ಜಿ ತೂಕ ಇರಲಿದೆ

ಸೌರ ಚಟುವಟಿಕೆ ಹಾಗೂ ಬಾಹ್ಯಾಕಾಶದಲ್ಲಿನ ವಾತಾವರಣದ ಬಗ್ಗೆ ಅಧ್ಯಯನ

ಭೂಮಿ ಹಾಗೂ ಸೂರ್ಯನ ಮಧ್ಯೆ ಲಾಗ್ರೇಂಜ್ ಪಾಯಿಂಟ್ ಇದೆ

1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್

ಲಾಗ್ರೇಂಜ್ ಪಾಯಿಂಟ್ 1ರ ಕಕ್ಷೆಯಲ್ಲಿ ‘ಆದಿತ್ಯ’ L​-1 ಲ್ಯಾಂಡ್ ಆಗಲಿದೆ

‘ಆದಿತ್ಯ-ಎಲ್ 1’ ಸೂರ್ಯನ ನಿರಂತರವಾಗಿ ಅಧ್ಯಯನ ಮಾಡುತ್ತೆ

‘ಆದಿತ್ಯ-ಎಲ್ 1’ ಕಕ್ಷೆ ತಲುಪಿ ಕಾರ್ಯಾಚರಿಸಲು 3-4 ತಿಂಗಳು ಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ADITYA-L1; ಚಂದ್ರಯಾನ-3 ಬೆನ್ನಲ್ಲೇ ಸೂರ್ಯನ ಅಧ್ಯಯನಕ್ಕೆ ಮುಹೂರ್ತ ಫಿಕ್ಸ್; ‘ಆದಿತ್ಯಾ’ ಲ್ಯಾಂಡ್ ಆಗೋದು ಎಲ್ಲಿ?

https://newsfirstlive.com/wp-content/uploads/2023/08/ISRO-Aditya-L-1.jpg

Load More