ಲ್ಯಾಂಡಿಂಗ್ ಸಮಯ ಘೋಷಣೆ ಮಾಡಿದ ಇಸ್ರೋ
ಭಾರತೀಯರ ಕನಸಿನ ನೌಕೆ ಲ್ಯಾಂಡ್ ಆಗಲು 3 ದಿನ ಬಾಕಿ
ಚಂದ್ರಯಾನ-3 ಕನಸು ನನಸಾಗಲು ಕೂಡಿ ಬಂದಿದೆ ಸಮಯ
ಚಂದ್ರಯಾನ-3 ಪ್ರತಿಯೊಬ್ಬ ಭಾರತೀಯನ ಕನಸು. ಇನ್ನೇನು 3 ದಿನಗಳು ಬಾಕಿ ಇದ್ದು, ಯಶಸ್ಸಿಯಾಗಿ ಚಂದ್ರನ ಮೇಲೆ ನೌಕೆ ಲ್ಯಾಂಡ್ ಆಗಲಿದೆ. ಅಚ್ಚರಿಯ ಸಂಗತಿ ಎಂದರೆ ಇಂದು ಬೆಳಿಗ್ಗೆ ಲ್ಯಾಂಡರ್ ವೇಗ ತಗ್ಗಿಸುವ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನು ಚಂದ್ರನ ಮೇಲೆ ಲ್ಯಾಂಡ್ ಆಗೋದೊಂದೆ ಬಾಕಿ ಇದೆ. ಹೀಗಿರುವಾಗ ಇಸ್ರೋ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗುವ ದಿನಾಂಕ ಘೋಷಿಸಿದೆ.
ವಿಕ್ರಂ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ದಕ್ಷಿಣ ದ್ರುವದಲ್ಲಿ ಲ್ಯಾಂಡ್ ಆಗಬೇಕಿದೆ. ಇಸ್ರೋ ಹೇಳಿದಂತೆ ಆಗಸ್ಟ್ 23ರಂದು ಸಂಜೆ 6:04ಕ್ಕೆ ಭಾರತದ ಕನಸಿನ ಚಂದ್ರಯಾನ ಯಶಸ್ವಿಯನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.
ಈಗಾಗಲೇ ನೌಕೆ ಚಂದ್ರನಿಂದ 134 ಕಿ.ಮೀ ಇರುವ ಕಕ್ಷೆಯನ್ನು ತಲುಪಿದೆ. ಆದರೆ 30 ಕಿ.ಮೀ ಬಾಕಿ ಇರುವಾಗ ಕಠಿಣ ಸವಾಲನ್ನು ಸ್ವೀಕರಿಸಲಿದೆ. ಅದಕ್ಕಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ಮುಂದಾಗಿದೆ.
ಖಗೋಳಶಾಸ್ತ್ರಜ್ಞರು ಪ್ರೊ.ಅನ್ನಪೂರ್ಣಿ ಸುಬ್ರಮಣ್ಯಂ ಈ ಬಗ್ಗೆ ಮಾತನಾಡಿದ್ದು, ನೌಕೆ ಬಾಹ್ಯಕಾಶ ಪ್ರವೇಶಿಸಿದಾಗ ಅಲ್ಲಿನ ವಾತಾವರಣ ಮತ್ತು ಗುರುತ್ವಾಕರ್ಷಣೆ ಬದಲಾಗುತ್ತದೆ. ಆದರೆ ಲ್ಯಾಂಡರ್ ಭಾರವಾಗಿರುವ ಕಾರಣ ಚಂದ್ರನ ಮೇಲೆ ಅಡ್ಡಾದಿಡ್ಡಿಯಾಗಿ ಕ್ರಮಿಸಬಹುದು ಮತ್ತು ಅಂಕುಡೊಂಕಾದ ಜಾಗದಲ್ಲಿ ಇಳಿಯಬಹುದು. ಆದರೆ ಏನೇ ಆದರು ಅದು ಕಾರ್ಯನಿರ್ವಹಿಸುತ್ತದೆ. ಇದನ್ನು ನಾವು ಅನೇಕ ಬಾರಿ ಪರೀಕ್ಷೆಗೆ ಒಳಪಡಿಸಿದ್ದೇವೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಲ್ಯಾಂಡರ್ ಸಾಫ್ಟ್ವೇರ್ ಅನ್ನು ಹೊಂದಿದೆ. ಇದು ಡೇಟಾವನ್ನು ಒದಗಿಸುತ್ತದೆ. ಆದರೆ ನೌಕೆ ಕಕ್ಷೆ ಸಮೀಪ ಬಂದಾಗ ನೆಲದಿಂದ ಸರಿಯಾದ ದೂರವನ್ನು ಕಂಡುಹಿಡಿಯಬೇಕು. ವೇಗವನ್ನು ನಿರ್ಧರಿಸಬೇಕು. ಬಳಿಕ ಲ್ಯಾಂಡ್ ಮಾಡಬೇಕು ಎಂದು ಹೇಳಿದ್ದಾರೆ.
ಲ್ಯಾಂಡಿಂಗ್ ಹೇಗೆ?
ಇಸ್ರೋ ಸಿದ್ಧಪಡಿಸಿರುವ ಚಂದ್ರಯಾನ-3 ನೌಕೆ ಆಧುನಿಕ ತಂತ್ರಜ್ನಾನ ಬಳಸಿಕೊಂಡಿದೆ. ಇದಕ್ಕೆ ಲ್ಯಾಂಡರ್ ಪೊಸಿಷನ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು ಹೈ-ಫೈ ಡಿಟೆಕ್ಷನ್ ಕ್ಯಾಮೆರಾ ಆಗಿದೆ. ಇದರಿಂದ ಚಂದ್ರನ ಮೇಲೆ ಲ್ಯಾಂಡ್ ಮಾಡುವ ಮುನ್ನ ಸರಿಯಾದ ಮತ್ತು ಸಮತಟ್ಟಾದ ಸ್ಥಳ ಹುಡುಕಲಿದೆ. ಬಳಿಕ ನಿಧಾನಗತಿಯಲ್ಲಿ ಚಂದ್ರನನ್ನು ಸ್ಪರ್ಶಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ