newsfirstkannada.com

ಚಂದಿರನ ಊರಿನಲ್ಲಿ ವಿಕ್ರಮ! ಸ್ಪರ್ಶಕ್ಕೆ ಕೆಲವೇ ಗಂಟೆಗಳು ಬಾಕಿ; ಕ್ಲೈಮ್ಯಾಕ್ಸ್‌ನ ಕ್ಷಣ ಕ್ಷಣದ ಲೆಕ್ಕಾಚಾರ ಹೀಗಿದೆ

Share :

23-08-2023

    ಹೆಚ್ಚುತ್ತಿದೆ ಭಾರತೀಯರ ಹೃದಯ ಬಡಿತ

    ಸವಾಲುಗಳ ಲೆಕ್ಕಚಾರ ಹಾಕಿಕೊಂಡಿರುವ ಹೆಮ್ಮೆಯ ಇಸ್ರೋ

    ವಿಕ್ರಮ ಚಂದಿರನ ಅಂಗಳಕ್ಕೆ ಇಳಿಯಲು ಇನ್ನು 7 ಗಂಟೆಗಳಷ್ಟೇ ಬಾಕಿ.

ಭಾರತದ ಕನಸಿನ ನೌಕೆ ಚಂದ್ರಯಾನ-3 ಯಶಸ್ವಿಗೆ ಕೆಲವೇ ಗಂಟೆಗಳು ಬಾಕಿ. ಅದಕ್ಕೂ ಮುನ್ನ ಕೆಲವು ಚಾಲೆಂಜ್​ಗಳನ್ನು ಎದುರಿಸಬೇಕಿದೆ. ಚಂದ್ರನನ್ನು ಸ್ಪರ್ಶಿಸಲು ಲ್ಯಾಂಡರ್​ನ ವೇಗ, ಸಮಯ ಪ್ರಶ್ನೆ, ಸರಿಯಾದ ಸ್ಥಳ ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಇಸ್ರೋ ಕೆಲಸ ಮಾಡುತ್ತಿದೆ. ಅಂದಹಾಗೆಯೇ ಇಂದಿನ ಚಂದ್ರಯಾನದ ಯಶಸ್ವಿ ಹಂತಕ್ಕೂ ಮುನ್ನ ಇಸ್ರೋ ಹಾಕಿಕೊಂಡ ಲೆಕ್ಕಾಚಾರ ಹೀಗಿದೆ..

ಇಸ್ರೋಗೆ ಕೊನೆಯ 15 ನಿಮಿಷಗಳು ಸವಾಲಾಗಿದೆ. ಆ ಸವಾಲುಗಳ ಲೆಕ್ಕಚಾರವನ್ನು ಈಗಾಗಲೇ ಹಾಕಿಕೊಂಡಿದೆ. ಲ್ಯಾಂಡರ್​ ಇಳಿಸುವ ಪ್ರಕ್ರಿಯೆಗೋಸ್ಕರ ವಿಜ್ಞಾನಿಗಳು ನಿರಂತರ ಕೆಲಸದಲ್ಲಿ ತೊಡಗಿದ್ದಾರೆ. ಇಡೀ ವಿಶ್ವವೇ ಈ ಯಶಸ್ಸನ್ನು ಕಾಣಲು ಕಾದು ಕುಳಿತ್ತಿದ್ದು, ಇನ್ನು 7 ಗಂಟೆಗಳಷ್ಟೇ ಬಾಕಿ ಉಳಿದಿದೆ.

ಸಂಜೆ 5.47– 30 ಕಿ.ಮೀ ಎತ್ತರದಿಂದ ವೇಗ ತಗ್ಗಿಸಿ ಲ್ಯಾಂಡರ್​ ಇಳಿಸುವ ಪ್ರಕ್ರಿಯೆ
ಸಂಜೆ : 5.58– 11 ನಿಮಿಷದಲ್ಲಿ ಚಂದ್ರನಿಂದ 7.4 ಕಿ.ಮೀ. ಎತ್ತರಕ್ಕೆ ಇಳಿಯಲಿದೆ
ಸಂಜೆ 5.59- ಅಡ್ಡಲಾಗಿ ಸಾಗುತ್ತಿದ್ದ ಲ್ಯಾಂಡರ್​ನ್ನ ನೇರವಾಗಿಸುವ ಪ್ರಕ್ರಿಯೆ
ಸಂಜೆ 6.02- ನೇರಗೊಂಡ ಲ್ಯಾಂಡರ್​ ಅನ್ನು 800 ಮೀ. ಇಳಿಸಲಾಗುವುದು
ಸಂಜೆ 6.03– 150 ಮೀ.ನಷ್ಟು ಸನಿಹಕ್ಕೆ ಬಂದು ಲ್ಯಾಂಡಿಂಗ್​ ಸ್ಥಳ ಪರಿಶೀಲನೆ
ಸಂಜೆ 6.04- ಎಲ್ಲವೂ ಸರಿಯಿದ್ದರೆ ಗರಿಷ್ಟ 3 ಮೀ. ವೇಗದಲ್ಲಿ ಲ್ಯಾಂಡಿಂಗ್​​

ಜುಲೈ 12ರಂದು ಭೂಲೋಕದಿಂದ ಚಂದ್ರಲೋಕದ ದಾರಿ ಹಿಡಿದು ಪಯಣ ಆರಂಭಿಸಿದ ಈ ಚಂದ್ರಯಾನ 3 ಒಂದಲ್ಲ, ಎರಡಲ್ಲ ಬರೋಬ್ಬರಿ 41 ದಿನಗಳ ಸುದೀರ್ಘ ಪಯಣವನ್ನ ನಡೆಸಿದೆ. ಸದ್ಯ ಈ ಪ್ರಯಾಣಕ್ಕೆ ಪೂರ್ಣ ವಿರಾಮ ಬೀಳುವ ಸುಮುಹೂರ್ತ ಸನಿಹವಾಗಿದೆ. ಇಂದು ಶಶಿಯ ಸ್ಪರ್ಶಿಸಲು ಸಜ್ಜಾಗಿರೋ ಚಂದ್ರಯಾನ 3ಯನ್ನ ವೀಕ್ಷಿಸಲು ಇಡೀ ವಿಶ್ವವೇ ಕಾತುರತೆಯಿಂದ ಕಾದುಕುಳಿತಿದೆ.

ಇಂದು ಸಂಜೆ 6 ಗಂಟೆ ಬಳಿಕ ಶಶಿಯ ಮೇಲೆ ಚಂದ್ರಯಾನ 3 ಬಾಹ್ಯಾಕಾಶ ನೌಕೆಯ ವಿಕ್ರಮ್​ ಲ್ಯಾಂಡಿಂಗ್​​ ಆಗುತ್ತೆ. ಆದ್ರೆ ಈ ಲ್ಯಾಂಡಿಂಗ್​ ಅಷ್ಟು ಸುಲಭದ ಮಾತಲ್ಲ. ಲ್ಯಾಂಡಿಂಗ್​ ವೇಳೆ ಇಸ್ರೋ ಸ್ವಲ್ಪ ಎಚ್ಚರ ತಪ್ಪಿದ್ರೂ ಸಮಸ್ಯೆ ಎದುರಿಸಬೇಕಾಗುತ್ತೆ. ಅಲ್ಲದೇ ಲ್ಯಾಂಡಿಂಗ್​ ವೇಳೆ ಅಂದುಕೊಂಡ ಪರಿಸ್ಥಿತಿ ಇದ್ರೆ ಮಾತ್ರ ಸಾಫ್ಟ್​​ ಲ್ಯಾಂಡಿಂಗ್​ ಸಕ್ಸಸ್​ ಆಗುತ್ತೆ. ಒಂದು ವೇಳೆ ಇಂದು ಲ್ಯಾಂಡಿಂಗ್​​ ಸಾಧ್ಯವಾಗದಿದ್ರೆ ಮುಂದೇನು? ಹೀಗೊಂದು ದೊಡ್ಡ ಸವಾಲು ಇಸ್ರೋ ವಿಜ್ಞಾನಿಗಳ ಮುಂದೆಯೂ ಇದೆ.

ಪೋಸ್ಟ್​ಪೋನ್​ ಆಗುತ್ತಾ?

ಇಂದು ವಿಕ್ರಮ್ ಲ್ಯಾಂಡಿಂಗ್​​ ಆಗುವ ವೇಳೆ ಚಂದ್ರನ ಮೇಲ್ಮೈನ ವಾತಾವರಣ ಹಾಗೂ ಲ್ಯಾಂಡರ್​ನ ಸ್ಥಿತಿಗತಿಯ ಬಗ್ಗೆ ಇಸ್ರೋ ಪರಿಶೀಲನೆ ನಡೆಸುತ್ತೆ. ಲ್ಯಾಂಡಿಂಗ್​ ಸೇಫ್​ ಅನ್ನೋ ವಾತಾವರಣ ಇದ್ರೆ ಮಾತ್ರ ಲ್ಯಾಂಡರ್​ ಚಂದಿರನಂಗಳವನ್ನ ಸ್ಪರ್ಶಿಸಲು ಸಾಧ್ಯವಾಗುತ್ತೆ. ಇಲ್ಲದೇ ಹೋದರೆ​ ಲ್ಯಾಂಡಿಂಗ್​ ಸಮಯವನ್ನ ಮುಂದೂಡಿಕೆ ಮಾಡಲು ಇಸ್ರೋ ತೀರ್ಮಾನಿಸಿದೆ. ಇಂದು ಸಂಜೆ ​ವಿಕ್ರಮ್ ಲ್ಯಾಂಡಿಂಗ್​ ಆಗುವ 2 ಗಂಟೆಮುನ್ನ ಇಸ್ರೋ ವಿಜ್ಜಾನಿಗಳು ಈ ಬಗ್ಗೆ ನಿರ್ಧಾರವನ್ನ ಕೈಗೊಳ್ಳಲಿದ್ದಾರೆ. ಒಂದು ವೇಳೆ ಪರಿಸ್ಥಿತಿ ಸೂಕ್ತವಲ್ಲದಿದ್ರೆ ಆಗಸ್ಟ್​ 27ರಂದು ಲ್ಯಾಂಡಿಂಗ್​ ಮಾಡುವ ಪ್ರಕ್ರಿಯೆಯನ್ನ ಮುಂದೂಡಲಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದಿರನ ಊರಿನಲ್ಲಿ ವಿಕ್ರಮ! ಸ್ಪರ್ಶಕ್ಕೆ ಕೆಲವೇ ಗಂಟೆಗಳು ಬಾಕಿ; ಕ್ಲೈಮ್ಯಾಕ್ಸ್‌ನ ಕ್ಷಣ ಕ್ಷಣದ ಲೆಕ್ಕಾಚಾರ ಹೀಗಿದೆ

https://newsfirstlive.com/wp-content/uploads/2023/08/Rover.jpg

Load More