ನಾಳೆ ಸಂಜೆ 6.04ರತ್ತ ಇಡೀ ದೇಶದ ಜನರ ಚಿತ್ತ
ಚಂದ್ರನ ಅಂಗಳದಲ್ಲಿ ಹೆಜ್ಜೆ ಇಡಲಿರುವ ವಿಕ್ರಮ
ಕಡೆಯ 17 ನಿಮಿಷಗಳೇ ಅತ್ಯಂತ ನಿರ್ಣಾಯಕ
ಶತಕೋಟಿ ಭಾರತೀಯರ ಪ್ರಾರ್ಥನೆ. ಇಡೀ ಜಗತ್ತಿನ ಕಣ್ಣೇ ಈಗ ಚಂದ್ರಯಾನ 3 ಮೇಲೆ ನೆಟ್ಟಿದೆ. ಕ್ಷಣ ಕ್ಷಣಕ್ಕೂ ಚಂದ್ರಯಾನ 3 ನೌಕೆ ಶಶಿಯ ಅಂಗಳಕ್ಕೆ ಹತ್ತಿರವಾಗುತ್ತಿದೆ. ಅಲ್ಲದೇ ಹಿಂದಿನ ಚಂದ್ರಯಾನ 2, ಚಂದ್ರಯಾನ 3ಗೆ ಹಾಯ್ ಗೆಳೆಯ ಎಂದಿದ್ದು ಇಸ್ರೋದ ಆತ್ಮಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯ ಚಂದ್ರಯಾನ 3 ನೌಕೆಯ ವಿಕ್ರಮ್ ಲ್ಯಾಂಡರ್ ಶಶಿಗೆ ಮತ್ತಷ್ಟು ಹತ್ತಿರವಾಗಿದ್ದು ನಾಳೆ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರಮನ ಮೇಲೆ ಇಳಿಯಲಿದೆ. ಆದ್ರೆ ಇದು ಅಂದುಕೊಂಡಷ್ಟು ಸುಲಭವಲ್ಲ.
ಇತಿಹಾಸ ಸೃಷ್ಟಿಸೋಕೆ ಕ್ಷಣಗಣನೆ ಶುರುವಾಗಿದೆ. ಬಲಿಷ್ಠ ರಷ್ಯಾ ಮಾಡಲು ವಿಫಲವಾದ ಸಾಧನೆಯನ್ನು ಚಂದ್ರಮನ ಅಂಗಳಲದಲ್ಲಿ ಮಾಡಿ ತ್ರಿವಿಕ್ರಮ ಮೆರೆಯಲು ಇಸ್ರೋ ಮುಂದಾಗಿದೆ. ಇದು ಶತಕೋಟಿಗೂ ಅಧಿಕ ಭಾರತೀಯರೇ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಎದುರು ನೋಡುವಂತೆ ಮಾಡಿದೆ. ಕ್ಷಣ ಕ್ಷಣಕ್ಕೂ ಭಾರತೀಯರ ಹೃದಯ ಬಡಿತವನ್ನ ಇನ್ನಿಲ್ಲದಂತೆ ಢವ ಢವ ಅನ್ನುವಂತೆ ಮಾಡಿದೆ. ಇನ್ನೇನು ಚಂದ್ರಯಾನ 3 ನೌಕೆಯ ಲ್ಯಾಂಡರ್ ಚಂದ್ರಮನ ಅಂಗಳದಲ್ಲಿ ಲ್ಯಾಂಡ್ ಆಗೋಕೆ ಕ್ಷಣಗಣನೆ ಶುರುವಾಗಿದೆ.
ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್‌ಗೆ ಸಕಲ ಸಿದ್ಧತೆ
ನಾಳೆ ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡಿಂಗ್ ನಿರೀಕ್ಷೆ
ರಷ್ಯಾದ ಲೂನಾ -25 ನೌಕೆ ಚಂದಿರನನ್ನು ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಭಾರತದ ಚಂದ್ರಯಾನ 3 ಮೇಲೆ ಭಾರತ ಮಾತ್ರವಲ್ಲದೇ ಜಗತ್ತಿನ ನಿರೀಕ್ಷೆ ಹೆಚ್ಚಾಗಿದೆ. ಶಶಿಯ ದಕ್ಷಿಣ ಧ್ರುವದಲ್ಲಿ ಚರಿತ್ರೆ ಸೃಷ್ಟಿಸುವ ಭಾರತದ ಚಂದ್ರಯಾನ-3 ಮಿಷನ್ ನಿಗದಿಯಂತೆ ಸಾಗುತ್ತಿದೆ. ಚಂದ್ರಯಾನ ಸಿಸ್ಟಮ್ಸ್ನ್ನು ನಿರಂತರವಾಗಿ ಪರಿಶೀಲನೆ ಮಾಡಲಾಗ್ತಿದೆ.ವಿಕ್ರಂ ಲ್ಯಾಂಡರ್ ಸಾಗುವುದು ಸುಸೂತ್ರವಾಗಿ ಮುಂದುವರಿದಿದ್ದು ಲ್ಯಾಂಡಿಂಗ್‌ಗೆ ಸಕಲ ಸಿದ್ಧತೆ ನಡೆದಿದೆ. ನಾಳೆ ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಂ ಲ್ಯಾಂಡರ್‌ನ್ನು ಸೇಫ್ ಆಗಿ ಲ್ಯಾಂಡ್ ಆಗುವ ನಿರೀಕ್ಷೆ ಇದೆ. ವಿಕ್ರಮ್ ಲ್ಯಾಂಡರ್ 70 ಕಿ.ಮೀ ದೂರದಿಂದ ಚಂದ್ರನ ಮೇಲ್ಮೈ ಫೋಟೋವೊಂದನ್ನು ಸೆರೆ ಹಿಡಿದಿದ್ದು, ಇಸ್ರೋ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಲ್ಯಾಂಡರ್ ಇಳಿಸುವ ಕಾರ್ಯವೇ ಸಾಹಸಮಯ
ಕಡೆಯ 17 ನಿಮಿಷಗಳೇ ಅತ್ಯಂತ ನಿರ್ಣಾಯಕ
ಕ್ಷಣ ಕ್ಷಣಕ್ಕೂ ಚಂದ್ರನಿಗೆ ಹತ್ತಿರವಾಗುತ್ತಿರುವ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್‌ಗೆ ಅತ್ತ ಸಕಲ ಸಿದ್ಧತೆ ನಡೆದಿದ್ರೆ ಇತ್ತ ಲ್ಯಾಂಡಿಂಗ್ ಟೆನ್ಶನ್ ಕೂಡ ಶುರುವಾಗಿದೆ. ಯಾಕಂದ್ರೆ ಲ್ಯಾಂಡರ್‌ನ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಸುವುದೇ ಬಲುದೊಡ್ಡ ಸವಾಲಿನ ಕೆಲಸವಾಗಿದೆ. ನಾಳೆ ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡರ್ ಚಂದಿರನ ಧಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗುವ ನಿರೀಕ್ಷೆ ಇದೆ. ಆದರೆ ಕೊನೆಯ ಎರಡು ಗಂಟೆಯಲ್ಲಿ ಇಸ್ರೋ ವಿಜ್ಞಾನಿಗಳು ಲ್ಯಾಂಡಿಂಗ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ನಾಳೆ ಸಂಜೆ 6 ಗಂಟೆಗೆ ಚಂದ್ರಯಾನ ಲ್ಯಾಂಡಿಂಗ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ಎರಡು ಗಂಟೆ ಮುಂಚಿತವಾಗಿ ನಿರ್ಧಾರ ಕೈಗೊಳ್ಳಲಾಗುತ್ತೆ.
ಲ್ಯಾಂಡರ್ ಮಾಡ್ಯೂಲ್ ಆರೋಗ್ಯ ಪರಿಸ್ಥಿತಿ ಆಧಾರದ ಮೇಲೆ ಲ್ಯಾಂಡಿಂಗ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಸೆಕೆಂಡ್ಗೆ 1.69 ಕಿಲೋ ಮೀಟರ್ ವೇಗದಲ್ಲಿ ಸಾಗುತ್ತಿರುವ ಲ್ಯಾಂಡರ್ ವೇಗವನ್ನ ಸೆಕೆಂಡ್ಗೆ 1 ರಿಂದ 2 ಮೀಟರ್ ಇಳಿಸಬೇಕು. ಈ ಲ್ಯಾಂಡರ್ ವೇಗ ಇಳಿಸುವುದೆ ಇಸ್ರೋ ಪಾಲಿಗೆ ಸವಾಲಿನ ಕೆಲಸ. ಇದರ ಜೊತೆಗೆ ಲ್ಯಾಂಡರ್ ನಾಳೆ ಸಂಜೆ 5.47ರ ಬಳಿಕ ಇಸ್ರೋ ನಿಯಂತ್ರಣದಲ್ಲಿ ಇರಲ್ಲ. ಇನ್ನು ಈಗ ಚಂದ್ರನಿಗೆ ವಿಕ್ರಮ್ ಲ್ಯಾಂಡರ್ ಮತ್ತಷ್ಟು ಹತ್ತಿರವಾಗಿದೆ. 70 ಕಿ.ಮೀ ದೂರದಿಂದ ಚಂದ್ರನ ಮೇಲ್ಮೈ ಫೋಟೋವನ್ನು ವಿಕ್ರಮ್ ಲ್ಯಾಂಡರ್ ಸೆರೆ ಹಿಡಿದಿದೆ. ಈ ಪೋಟೋವನ್ನು ಇಸ್ರೋ ರಿಲೀಸ್ ಮಾಡಿದೆ. ಅಲ್ಲದೇ ಚಂದ್ರಯಾನ-3 ಮಿಷನ್ ನಿಗದಿಯಂತೆ ಸಾಗುತ್ತಿದೆ ಅಂತ ಇಸ್ರೋ ಟ್ವೀಟ್ ಮಾಡಿದೆ.
उनसे कहो कि 23 अगस्त को
18:04 बजे के करीब TV से थोड़ी देर के लिए दूर रहें।वक्र दृष्टि से बचाएं,महादेव।#Chandrayaan3Landing #ISRO pic.twitter.com/U9byMQR9BW
— Surya Pratap Singh IAS Rtd. (@suryapsingh_IAS) August 21, 2023
ಒಟ್ಟಾರೆ ಕೋಟ್ಯಾಂತರ ಭಾರತೀಯರು ಚಂದ್ರನಲ್ಲಿ ವಿಕ್ರಂ ಲ್ಯಾಂಡರ್‌ನ ಸೇಫ್ ಲ್ಯಾಂಡಿಂಗ್‌ಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೋಟ್ಯಂತರ ಭಾರತೀಯರ ಎದೆಯಲ್ಲಿ ಈಗಾಗಲೇ ಢವ ಢವ ಶುರುವಾಗಿದೆ. 2019ರ ಸೆಪ್ಟೆಂಬರ್ 6ರಂದು ಉಂಟಾಗಿದ್ದ ಆಘಾತ, ಸೋಲಿನ ನೋವು ಮತ್ತೆ ಎದುರಾಗದಿರಲಿ ಎನ್ನುವುದು ಜನರ ಪ್ರಾರ್ಥನೆ. ಅದಕ್ಕಾಗಿ ವಿಜ್ಞಾನಿಗಳು ಮಾತ್ರವಲ್ಲ, ಜನಸಾಮಾನ್ಯರೂ ದೇವರ ಮೊರೆ ಹೋಗುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ 4ನೇ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಲಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಯಷ್ಟೇ ಅಲ್ಲ, ಜಗತ್ತಿನಲ್ಲೆಡೆ ಭಾರತದ ಹೆಸರನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ