newsfirstkannada.com

ಇದು ನಮ್ಮ ಬಾಹ್ಯಾಕಾಶದ ಹೆಮ್ಮೆಯ ‘ಬಾಹುಬಲಿ’; ಫೇಲ್ ಆದ ದಾಖಲೆಯೇ ಇಲ್ಲ.. ಚಂದ್ರಯಾನ ನೌಕೆ ಹೊತ್ತೊಯ್ಯಲಿರುವ LVM-3 ನಿಮಗೆಷ್ಟು ಗೊತ್ತು?

Share :

14-07-2023

    ಚಂದ್ರಯಾನ-3 ಎಷ್ಟು ಲಕ್ಷ ಕಿಲೋ ಮೀಟರ್​ ದೂರ ಪ್ರಯಾಣಿಸಲಿದೆ?

    LVM-3 ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಬಲಶಾಲಿ ವಾಹನ

    LVM-3 ಒಮ್ಮೆ ಆಕಾಶದತ್ತ ಉಡಾವಣೆ ಮಾಡಿದೆ ಎಷ್ಟು ಖರ್ಚು ಆಗುತ್ತದೆ?

ಚಂದ್ರಯಾನ- 3 ರಾಕೆಟ್​ ಲಾಂಚಿಂಗ್​ ವೆಹಿಕಲ್ LVM-3 (Launch Vehicle Mark-III) ಇದುವೇ ನಮ್ಮ ಬಾಹ್ಯಾಕಾಶ ಸಂಸ್ಥೆಯ ಬಾಹುಬಲಿ. ಈ ಮೊದಲು ಇದನ್ನು ಬಾಹುಬಲಿ ಎಂದೇ ಕರೆಯಲಾಗುತ್ತಿತ್ತು. ಆದರೆ ಈ ಚಂದ್ರಯಾನ- 3ಕ್ಕೆ ಇದರ ಹೆಸರನ್ನು LVM-3 ಎಂದು ಮೂಲ ಹೆಸರಿನಿಂದಲೇ ಕರೆಯಲಾಗುತ್ತಿದೆ. ISRO ಚಂದ್ರಯಾನ- 3 ಉಪಗ್ರಹ ಉಡಾವಣೆಗೆ ತಯಾರಾಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಚಂದ್ರಯಾನ- 3 ಉಪಗ್ರಹ ಭೂಮಿ ಬಿಟ್ಟು ಹೋಗಬೇಕಾಂದರೆ LVM-3 ವಾಹನದ ಕಾರ್ಯವೇ ಅತೀ ಮುಖ್ಯವಾಗಿದೆ. LVM-3 ರಾಕೆಟ್​ ಲಾಂಚಿಂಗ್​ ವಾಹನದ ಸಾಮರ್ಥ್ಯ ಏನು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಶಕ್ತಿಶಾಲಿ ರಾಕೆಟ್​ ಲಾಂಚಿಂಗ್​ ವಾಹನ.. ಎಲ್ಲವೂ ಸಕ್ಸಸ್​

ಇಲ್ಲಿಯವರೆಗೆ ಇಸ್ರೋ ಲಾಂಚ್ ಮಾಡಿದ ಎಲ್ಲಾ ವಾಹನಗಳಿಗಿಂತ LVM-3 ಅತೀ ಹೆಚ್ಚು ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇದು ಅತ್ಯಂತ ಶಕ್ತಿಶಾಲಿ ರಾಕೆಟ್​ ಲಾಂಚಿಂಗ್​ ವಾಹನವಾಗಿದ್ದು 3 ಹಂತದ ಸಾಮರ್ಥ್ಯವನ್ನು ಹೊಂದಿದೆ. ಇದು 2 ಘನ -ಇಂಧನ ಬೂಸ್ಟರ್‌ಗಳನ್ನು ಒಳಗೊಂಡಿದೆ. ದ್ರವ-ಇಂಧನ ಕೋರ್ ಹಂತವು ರಾಕೆಟ್ ಅನ್ನು ಕಕ್ಷೆಗೆ ಮುಂದೂಡುವಲ್ಲಿ ಒತ್ತಡ ಹಾಕುತ್ತದೆ. ಈ ಮೂಲಕ ಇಲ್ಲಿಯವರೆಗೆ 6 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು ಆ 6 ಕೂಡ ಯಶಸ್ವಿಯಾಗಿವೆ. ಹೀಗಾಗಿ ಇದರ ಮೇಲೆ ಇಸ್ರೋ ಅಧಿಕಾರಿಗಳಿಗೆ ತುಂಬಾ ನಂಬಿಕೆ ಇದ್ದು ಚಂದ್ರಯಾನ- 3 ಯಶಸ್ಸು ಸಿಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.

ಈ ರಾಕೆಟ್ ಘನ ಸ್ಟ್ರಾಪ್-ಆನ್ ಮೋಟಾರ್‌ಗಳು (S200) ಮತ್ತೊಂದು ಲಿಕ್ವಿಡ್ ಕೋರ್ ಸ್ಟೇಜ್ (L110) 28 ಟನ್‌ಗಳ ಲೋಡಿಂಗ್​‌ನೊಂದಿಗೆ ಚಾಲನೆ ಆಗಲಿದೆ. LVM-3 ವಾಹನ 640 ಟನ್‌ಗಳ ಲಿಫ್ಟ್-ಆಫ್ ದ್ರವ್ಯರಾಶಿ ಹೊಂದಿದೆ. ಇದು 4,000 ಕಿಲೋಗ್ರಾಂಗಳಷ್ಟು ಪೇಲೋಡ್ ಅನ್ನು ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್ (GTO) ಅನ್ನು ನಭಕ್ಕೆ ಜಿಗಿಸುವ ಸಾಮರ್ಥ್ಯ ಹೊಂದಿದೆ. ಈ ಮೊದಲು GSAT-19, ಖಗೋಳ ಉಪಗ್ರಹ ಮತ್ತು ಚಂದ್ರಯಾನ ಕಾರ್ಯಾಚರಣೆಯಲ್ಲಿ LVM-3 ಅನ್ನು ಬಳಕೆ ಮಾಡಲಾಗಿತ್ತು. ಮುಂಬರುವ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇದೇ ವಾಹನವನ್ನು ಬಳಸಲು ನಿರ್ಧರಿಸಲಾಗಿದೆ.

LVM-3 ರಾಕೆಟ್​ ಲಾಂಚಿಂಗ್​ನ ಸಾಮರ್ಥ್ಯ ಏನೇನು..?

  • ಚಂದ್ರಯಾನ- 3 ಉಪಗ್ರಹ ಯಂತ್ರವು ಒಟ್ಟು 3,921 ಕೆ.ಜಿ ತೂಕವಿದೆ
  • ಚಂದ್ರಯಾನ- 3 ಅನ್ನು ನಭಕ್ಕೆ ಚಿಮ್ಮಲಿರುವ LVM-3 ರಾಕೆಟ್​ ಲಾಂಚಿಂಗ್
  • ಬಾಹುಬಲಿಯ ಮತ್ತೊಂದು ಹೆಸರೇ LVM-3 ರಾಕೆಟ್​ ಲಾಂಚಿಂಗ್​
  • ರಾಕೆಟ್​ ಲಾಂಚಿಂಗ್ ವೆಹಿಕಲ್​ ಮಾರ್ಕ್​- 3 ಒಟ್ಟು ತೂಕ 642 ಟನ್
  • 642 ಟನ್ ಅಂದರೆ 6,40,000 ಕೆ.ಜಿಯಷ್ಟು ತೂಕ
  • LVM-3 ಒಟ್ಟು ತೂಕವು ಏಷ್ಯಾದ 130 ಆನೆಗಳ ತೂಕಕ್ಕೆ ಸಮ ​
  • ಇದು 43.5 ಮೀಟರ್ ಎತ್ತರವಾಗಿದ್ದು ಭಾರತದ ಬೃಹತ್ ರಾಕೆಟ್ ಆಗಿದೆ
  • ಈ ವಾಹನದಿಂದ ಒಮ್ಮೆ ಉಡಾವಣೆ ಮಾಡಿದರೆ ₹500 ಕೋಟಿ ವೆಚ್ಚ
  • LVM-3 ಬರೋಬ್ಬರಿ 4 ಸಾವಿರ ಕೆ.ಜಿ ಎತ್ತಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ
  • 3,921 ಕೆ.ಜಿ ತೂಕದ ಚಂದ್ರಯಾನ-3 ಉಪಗ್ರಹದ ಭಾರ ಹೊರಲಿರುವ LVM-3
  • ಇದರ ಮೂಲಕ ಇಲ್ಲಿಯವರೆಗೆ 6 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು ಆ 6 ಕೂಡ ಯಶಸ್ವಿಯಾಗಿ ಆಕಾಶಕ್ಕೆ ತಲುಪಿವೆ.

ಚಂದ್ರಯಾನ-3 ಚಂದ್ರನತ್ತ ಸಾಗುತ್ತಿರುವ ಭಾರತದ 3ನೇ ಮಿಷನ್ ಆಗಿದೆ. ಇದು 3,921 ಕೆ.ಜಿ ತೂಕದ ಉಪಗ್ರಹವಾಗಿದೆ. ಸುಮಾರು 4 ಲಕ್ಷ ಕಿಲೋಮೀಟರ್ ದೂರದ ಪ್ರಯಾಣ ಮಾಡಲಿದೆ. ಇಂಡಿಯನ್​ ಸ್ಪೇಸ್​ ರೀಸರ್ಚ್​ ಆರ್ಗನೇಜೇಶನ್ (ISRO) ಬಾಹ್ಯಾಕಾಶದ ಬಗ್ಗೆ ಸಂಶೋಧನೆ ಮಾಡುವ ಸಂಸ್ಥೆ. ಇದು 1969 ಆಗಸ್ಟ್​ 15 ರಂದು ಸ್ಥಾಪನೆಯಾಗಿದ್ದು, ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದೆ. ಹಾಗೇ ತಿರುವನಂತಪುರ, ಅಹಮದಾಬಾದ್, ಮಹೇಂದ್ರಗಿರಿ, ಹಾಸನ ಮತ್ತು ಶ್ರೀಹರಿಕೋಟದಲ್ಲಿ ಇತರೆ ಕಚೇರಿಗಳನ್ನು ಹೊಂದಿದೆ.

ವಿಶೇಷ ವರದಿ: ಭೀಮಣ್ಣ, ಡಿಜಿಟಲ್ ಡೆಸ್ಕ್​ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ನಮ್ಮ ಬಾಹ್ಯಾಕಾಶದ ಹೆಮ್ಮೆಯ ‘ಬಾಹುಬಲಿ’; ಫೇಲ್ ಆದ ದಾಖಲೆಯೇ ಇಲ್ಲ.. ಚಂದ್ರಯಾನ ನೌಕೆ ಹೊತ್ತೊಯ್ಯಲಿರುವ LVM-3 ನಿಮಗೆಷ್ಟು ಗೊತ್ತು?

https://newsfirstlive.com/wp-content/uploads/2023/07/ISRO_LVM_3.jpg

Load More