newsfirstkannada.com

Chandrayaan-3: ಐತಿಹಾಸಿಕ ಕ್ಷಣಕ್ಕೆ ಕಾದು ಕೂತ ಭಾರತ.. ಬಾನಂಗಳದ ಚಂದಿರನತ್ತ ನಮ್ಮ ಚಿತ್ತ.. ಆಲ್​ ದಿ ಬೆಸ್ಟ್ ಇಸ್ರೋ

Share :

14-07-2023

  ಭಾರತಕ್ಕೆ ಮತ್ತೊಂದು ಗರಿಮೆ, ಯಶಸ್ವಿಯಾದ್ರೆ ದೇಶಕ್ಕೆ 4ನೇ ಸ್ಥಾನ

  ಚಂದ್ರಯಾನ- 2 ವೈಫಲ್ಯ, ಚಂದ್ರಯಾನ-3 ಉಡಾವಣೆಗೆ ಕಾರಣ

  ಲ್ಯಾಂಡರ್, ರೋವರ್ ಚಂದ್ರನ ಮೇಲ್ಮೈ ಕಾರ್ಯ, ಡೇಟಾ ಸಂಗ್ರಹ

ಚಂದಮಾಮ.. ಚಂದಿರನ ಅಂಗಳದಲ್ಲಿ ಏನಿದೆಯೆಂದು ಜಗತ್ತಿಗೆ ತೋರಿಸಬೇಕು ಅಂತ ನಮ್ಮ ವಿಜ್ಞಾನಿಗಳು ಹೊರಟು ನಿಂತಿದ್ದಾರೆ. ಚಂದ್ರಯಾನ- 2 ವೈಫಲ್ಯ ಬಳಿಕ ಇದೀಗ ಚಂದ್ರಯಾನ- 3 ಮೇಲೆ ಭಾರತ ಮಾತ್ರವಲ್ಲ ಇಡೀ ಜಗತ್ತೇ ಎದುರು ನೋಡುತ್ತಿದೆ. ಇದೇ ನಿಟ್ಟಿನಲ್ಲಿ ಯಶಸ್ಸು ಸಾಧಿಸಲು ಇಸ್ರೋ ಸಜ್ಜಾಗಿದ್ದು ಬಾನಂಗಳಕ್ಕೆ ಚಂದ್ರಯಾನ ನೌಕೆ ಚಿಮ್ಮಿಸಲು ಕ್ಷಣಗಣನೆ ಶುರುವಾಗಿದೆ.

ಚಂದ್ರಯಾನ- 3 ಕೇವಲ ಭಾರತ ಮಾತ್ರವಲ್ಲದೇ ಇಡೀ ಜಗತ್ತೇ ಕುತೂಹಲ, ನೀರಿಕ್ಷೆಗಳಿಂದ ಎದುರು ನೋಡುತ್ತಿರುವ ಯೋಜನೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಗಗನನೌಕೆ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 2:30ಕ್ಕೆ ಚಂದ್ರನನ್ನು ಅಧ್ಯಯನ ಮಾಡಲು ಚಂದ್ರಯಾನ- 3 ರಾಕೆಟ್​ ನಭಕ್ಕೆ ಚಿಮ್ಮಲಿದೆ. 2019ರಲ್ಲಿ ಚಂದ್ರಯಾನ- 2 ವೈಫಲ್ಯದಿಂದ ಪಾಠ ಕಲಿತಿರುವ ಇಸ್ರೋದ ವಿಜ್ಞಾನಿಗಳು ನಭೋ ಮಂಡಲದಲ್ಲಿ ಹೊಸ ಮೈಲಿಗಲ್ಲು ಬರೆಯಲು ಸಿದ್ಧರಾಗಿದ್ದಾರೆ.

ಚಂದ್ರಯಾನ 3ನಲ್ಲಿ ಯಶಸ್ಸು ಸಾಧಿಸಲು ಇಸ್ರೋ ಸಜ್ಜು

ಚಂದ್ರಯಾನ- 2 ಫೇಲ್ಯೂರ್ ಆದ ಬಳಿಕ ಇದೀಗ ಚಂದ್ರಯಾನ- 3ನಲ್ಲಿ ಯಶಸ್ಸು ಸಾಧಿಸಲು ಇಸ್ರೋ ಸಜ್ಜಾಗಿದೆ. ಇಸ್ರೋ ವಿಜ್ಞಾನಿಗಳ ಬಹುನಿರೀಕ್ಷಿತ ಪ್ರಾಜೆಕ್ಟ್ ಚಂದ್ರಯಾನ- 3 ಇಂದು ಆಗಸಕ್ಕೆ ನೆಗೆಯಲಿದೆ. ಮಧ್ಯಾಹ್ನ 2:30ಕ್ಕೆ ಮಾಡ್ಯೂಲ್​ಗಳನ್ನ ಹೊತ್ತು ರಾಕೆಟ್ ನಭಕ್ಕೆ ಹಾರಲಿದೆ. ಚಂದ್ರನ ಅಂಗಳಕ್ಕೆ ತಲುಪುವ ಗುರಿಯೊಂದಿಗೆ ಆಂಧ್ರಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಲಾಂಚಿಂಗ್ ವೆಹಿಕಲ್ ಗಗನದತ್ತ ಸವಾರಿ ಮಾಡಲಿದೆ.

ಚಂದ್ರಯಾನ-3ಗೆ ಕ್ಷಣಗಣನೆ

 • ಬರೋಬ್ಬರಿ ₹600 ಕೋಟಿ ಮೊತ್ತದ ಪ್ರಾಜೆಕ್ಟ್ ಇದಾಗಿದೆ
 • ಜಿಎಸ್ಎಲ್ ವಿ-ಎಂಕೆ3 ಲಾಂಚಿಂಗ್ ವೆಹಿಕಲ್ ಬಳಕೆ
 • ಮಿಷನ್​ನ ತೂಕ 3,900 ಕೆ.ಜಿ, 3 ಕಮ್ಯುನಿಕೇಷನ್ಸ್ ಘಟಕ
 • ಪ್ರೊಪುಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಮಷಿನ್
 • ಪ್ರೊಪುಲ್ಷನ್ ಅಂತರಿಕ್ಷ ನೌಕೆಯು ನಭದತ್ತ ಚಿಮ್ಮಲು ಸಹಾಯ
 • ಚಂದ್ರನ ಮೇಲ್ಮೈ ಭಾಗದಲ್ಲಿ ಇಳಿಯುವ ಮಷಿನ್ ಲ್ಯಾಂಡರ್
 • ಕೊನೆಯದಾಗಿ ಚಂದ್ರನ ಸ್ಪರ್ಶ ಮಾಡೋದೇ ಈ ರೋವರ್
 • ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್
 • ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆ
 • ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್​

ಚಂದ್ರಯಾನ 2 ರ ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ-3 ಯಶಸ್ಸಿಗೆ ಇಸ್ರೋ ಭಾರೀ ಶ್ರಮವಹಿಸಿದೆ. ಇಂದು ಮಧ್ಯಾಹ್ನ 2:30ಕ್ಕೆ ಚಂದ್ರಯಾನ-3 ಅನ್ನು ಎಲ್‌ವಿಎಂ-3 ಮೂಲಕ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಚಂದ್ರಯಾನ-3 ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗವಾಗಿದೆ.

4 ಕಿಮೀ ಉದ್ದ, 2 ಕಿ.ಮೀ ಅಗಲದ ಪ್ರದೇಶದಲ್ಲಿ ನೌಕೆ ಲ್ಯಾಂಡ್

ಚಂದ್ರಯಾನ-3 ಗಗನನೌಕೆಯನ್ನು ಇಳಿಸಲು ಚಂದ್ರನ ಮೇಲ್ಮೈನಲ್ಲಿ ಜಾಗ ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಳಿಯ 4 ಕಿಮೀ ಉದ್ದ ಹಾಗೂ 2 ಕಿಮೀ ಅಗಲದ ಪ್ರದೇಶದಲ್ಲಿ ಗಗನನೌಕೆಯನ್ನು ಇಳಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ತಿಳಿಸಿದ್ದಾರೆ.

ಇದನ್ನು ಓದಿ: ದಕ್ಷಿಣ ಭಾರತದ ಮಾಧ್ಯಮ ಇತಿಹಾಸದಲ್ಲೇ ನ್ಯೂಸ್​ ಫಸ್ಟ್ ಹೊಸ ಕ್ರಾಂತಿ

ಚಂದ್ರಯಾನ-3 ಅಧ್ಯಯನ

 • ಚಂದ್ರಯಾನ-1 ಮತ್ತು 2ರಲ್ಲಿ ಇದ್ದಂತೆ ಚಂದ್ರಯಾನ-3ರಲ್ಲಿ ಆರ್ಬಿಟರ್‌ ಇಲ್ಲ
 • ಲ್ಯಾಂಡರ್‌, ರೋವರ್‌ ಹೊತ್ತ ಗಗನನೌಕೆ ಆಗಸ್ಟ್‌ 23ಕ್ಕೆ ಚಂದ್ರನ ಕಕ್ಷೆಗೆ
 • ನಂತರ 15 ದಿನಗಳಲ್ಲಿ ಚಂದ್ರಯಾನ-3 ನೌಕೆ ಚಂದ್ರನಲ್ಲಿ ಇಳಿಯಲಿದೆ
 • ಲ್ಯಾಂಡರ್, ರೋವರ್ ಚಂದ್ರನ ಮೇಲ್ಮೈ ಕಾರ್ಯ, ಡೇಟಾ ಸಂಗ್ರಹ
 • ಲ್ಯಾಂಡರ್‌ನಿಂದ ರೋವರ್ ಬೇರ್ಪಟ್ಟು ಪ್ರಯೋಗ, ಡೇಟಾ ಸಂಗ್ರಹ
 • ಶಿಲಾ ಪದರದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್‌ ರಿಗೊಲಿತ್‌
 • ಲೂನಾರ್‌ ಸೆಸಿಮಿಸಿಟಿಯಿಂದ ಭೂಕಂಪನ, ಪ್ಲಾಸ್ಮಾ ಅಧ್ಯಯನ
 • ನೌಕೆ ಇಳಿದ ಪ್ರದೇಶದ ಧಾತುರೂಪದ ಸಂಯೋಜನೆ ಅಧ್ಯಯನ

ಕಳೆದ ಬಾರಿ ಮಾಡಿದ ತಪ್ಪುಗಳಿಂದ ತಿದ್ದುಕೊಂಡಿರುವ ಇಸ್ರೋ ವಿಜ್ಞಾನಿಗಳು, ‘ಈ ಬಾರಿ ಗೆಲುವು ನಮ್ಮದೇ ಎನ್ನುತ್ತಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ಸರಿಯಾಗಿ ಚಂದ್ರಯಾನ-3 ಮಿಷನ್‌ ನಭದತ್ತ ಚಿಮ್ಮಲಿದ್ದು ಕ್ಷಣಗಣನೆ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: ಐತಿಹಾಸಿಕ ಕ್ಷಣಕ್ಕೆ ಕಾದು ಕೂತ ಭಾರತ.. ಬಾನಂಗಳದ ಚಂದಿರನತ್ತ ನಮ್ಮ ಚಿತ್ತ.. ಆಲ್​ ದಿ ಬೆಸ್ಟ್ ಇಸ್ರೋ

https://newsfirstlive.com/wp-content/uploads/2023/07/CHANDRAYAANA_3.jpg

Load More