newsfirstkannada.com

ಚಂದ್ರಯಾನ-3 ನೌಕೆ ಈಗ ಎಲ್ಲಿದೆ..? ಅದು ಯಾವಾಗ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗುತ್ತೆ ಗೊತ್ತಾ..? ಇಸ್ರೋದ ಲೇಟೆಸ್ಟ್​ ಮಾಹಿತಿ..!

Share :

15-07-2023

    LVM3 ರಾಕೆಟ್​ನ ಮೂರು ಹಂತದ ಎಲ್ಲಾ ಕೆಲಸಗಳು ಸಕ್ಸಸ್

    ಕಕ್ಷೆಯಿಂದ ನೌಕೆಯನ್ನು ಮೇಲಕ್ಕೇರಿಸುವ ಪ್ರಯತ್ನದಲ್ಲಿ ಇಸ್ರೋ

    ಇಸ್ರೋ ವಿಜ್ಞಾನಿಗಳ ಸಾಧನೆಗೆ ಗಣ್ಯರಿಂದ ಶ್ಲಾಘನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ-3 ಐತಿಹಾಸಿಕ ಪುಟಗಳಲ್ಲಿ ದಾಖಲಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಿನ್ನೆ ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ನೌಕೆಯನ್ನು LVM-3 ಮಿಷನ್ ಮೂಲಕ ಯಶಸ್ವಿ ಉಡಾವಣೆ ಮಾಡಲಾಗಿದೆ.

ಉಡಾವಣೆಯಾದ 16 ನಿಮಿಷಗಳಲ್ಲೇ ರಾಕೆಟ್​​ನಿಂದ ಪ್ರತ್ಯೇಕಗೊಂಡ ಚಂದ್ರಯಾನ ನೌಕೆ, ಭೂಕಕ್ಷೆಯನ್ನು ಸುಲಭವಾಗಿ ಸೇರಿತು. ಈ ಮೂಲಕ ಚಂದ್ರನ ಮೇಲೆ ನೌಕೆ ಇಳಿಸುವ ಭಾರತದ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ.

ಸದ್ಯ ಈ ನೌಕೆಯು ಭೂಕಕ್ಷೆಯಲ್ಲಿದ್ದು ಭೂಮಿಯ ಸುತ್ತ ತಿರುಗುತ್ತಿದೆ. ಇದು ಸುಮಾರು 5 ರಿಂದ 6 ಬಾರಿ ಭೂಮಿಯ ಸುತ್ತ ತಿರುಗಲಿದೆ. ಅಂದರೆ ಭೂಮಿಗೆ 170 ಕಿಲೋ ಮೀಟರ್ ದೂರದಿಂದ ತಿರುಗಲು ಶುರುವಾಗಿ ಬರೋಬ್ಬರಿ 36500 ಕಿಲೋ ಮೀಟರ್​ ದೂರದವರೆಗೂ ಸುತ್ತಲಿದೆ. ಸುದೀರ್ಘ 40 ದಿನಗಳ ಬಳಿಕ ನೌಕೆಯು ಚಂದ್ರನ ಮೇಲೆ ಇಳಿಯವ ನಿರೀಕ್ಷೆಯನ್ನು ವಿಜ್ಞಾನಿಗಳು ಇಟ್ಟುಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್​ 23 ರಂದು ಸಂಜೆ 5.47ಕ್ಕೆ ಚಂದ್ರನ ಅಂಗಳದಲ್ಲಿ ಈ ನೌಕೆಯನ್ನು ಇಳಿಸಲಾಗುತ್ತದೆ. ಲ್ಯಾಂಡರ್​ ಸಾಫ್ಟ್​​ ಆಗಿ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ, ಅದರೊಳಗೆ ಇರುವ ರೋವರ್​ ಹೊರಗೆ ಬರಲಿದೆ. ಅದಾದ ನಂತರ ಚಂದ್ರನ ಮೇಲೆ ಅಧ್ಯಯನಗಳು ಶುರುವಾಗಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ನೌಕೆ ಈಗ ಎಲ್ಲಿದೆ..? ಅದು ಯಾವಾಗ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗುತ್ತೆ ಗೊತ್ತಾ..? ಇಸ್ರೋದ ಲೇಟೆಸ್ಟ್​ ಮಾಹಿತಿ..!

https://newsfirstlive.com/wp-content/uploads/2023/07/CHANDRAYAANA-2-1.jpg

Load More