newsfirstkannada.com

Next Stop Is Moon: ಭೂ-ಕಕ್ಷೆಯಿಂದ ಹೊರಟು ಚಂದ್ರನ ಪಥ ಪ್ರವೇಶಿಸಿದ ನೌಕೆ.. ಸಕ್ಸಸ್​​ಗೆ ಕೆಲವೇ ದಿನಗಳ ಬಾಕಿ..!

Share :

01-08-2023

    ಆಗಸ್ಟ್ 5 ರಂದು ಹೊಸ ಅಪ್​​ಡೇಟ್ ಕೊಡಲಿದೆ ಇಸ್ರೋ..!

    ಭೂ-ಕಕ್ಷೆಯಲ್ಲಿ 5 ರೌಂಡ್ ಹೊಡೆದು ಚಂದ್ರನತ್ತ ಹೊರಟ ನೌಕೆ

    ಟ್ರಾನ್ಸ್​​ಲುನಾರ್​ ಆರ್ಬಿಟ್​ಗೆ ಸೇರಿಸುವ ಪ್ರಕ್ರಿಯೆ ಸಕ್ಸಸ್​, ಇನ್ನೇನಿದ್ದರೂ..

ಭಾರತದ ವಿಜ್ಞಾನಿಗಳು ಜುಲೈ 14 ರಂದು ಕಳುಹಿಸಿರುವ ಚಂದ್ರಯಾನ-3 ನೌಕೆಯ ‘ಚಂದ್ರನಿದ್ದಲ್ಲಿಗೆ ಪ್ರಯಾಣಿಸುವ ಗುರಿ’ ಮತ್ತಷ್ಟು ಸನಿಹ ಆಗಿದೆ. ಕಳೆದ ( ಆಗಸ್ಟ್​ 1) ಮಧ್ಯರಾತ್ರಿಯಿಂದ ನೌಕೆಯು ಭೂಕಕ್ಷೆ ಬಿಟ್ಟು ಚಂದ್ರನಿದ್ದಲ್ಲಿಗೆ ಹೊರಟಿದೆ.

ಇಷ್ಟುದಿನ ಭೂಕಕ್ಷೆಯಲ್ಲಿ ತಿರುಗುತ್ತಿದ್ದ ಚಂದ್ರಯಾನ ನೌಕೆಯನ್ನು ಮಧ್ಯರಾತ್ರಿ ಟ್ರಾನ್ಸ್​​ಲುನಾರ್​ ಆರ್ಬಿಟ್​​ಗೆ ಸೇರಿಸುವ ಪ್ರಕ್ರಿಯೆಯನ್ನು ವಿಜ್ಞಾನಿಗಳು ಪೂರ್ಣಗೊಳಿಸಿದ್ದಾರೆ. ಈ ಮೂಲಕ ನೌಕೆಯು ಚಂದ್ರನಿದ್ದಲ್ಲಿಗೆ ಪ್ರಯಾಣಿಸುವ 3.8 ಲಕ್ಷ ಕಿಲೋ ಮೀಟರ್ ದೂರದ ಪ್ರಯಾಣವನ್ನು ಆರಂಭಿಸಿದೆ ಎಂದು ಇಸ್ರೋ ತಿಳಿಸಿದೆ.

ಆಗಸ್ಟ್ 23 ರಂದು ಲ್ಯಾಂಡಿಂಗ್

ಚಂದ್ರಯಾನ-3 ಮಷಿನ್ ಭೂಕಕ್ಷೆಯಲ್ಲಿ ಸುತ್ತುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಐದು ಬಾರಿ ಭೂಕಕ್ಷೆಯನ್ನು ಸುತ್ತಿ, ಇದೀಗ ಚಂದ್ರನಿದ್ದಲ್ಲಿಗೆ ಪ್ರಯಾಣಿಸಿದೆ. ಟ್ರಾನ್ಸ್​ಲುನಾರ್​ ಆರ್ಬಿಟ್​ಗೆ ಸೇರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಪ್ರೊಪಲ್ಷನ್​ ಮ್ಯಾಡುಲ್​ನಲ್ಲಿ ಇಂಜಿನ್​ಗಳು ತಮ್ಮ ಸ್ಪೀಡ್​ ಅನ್ನು ಅಧಿಕಗೊಳಿಸಲಿವೆ. ಇದರಿಂದ ಬಾಹ್ಯಾಕಾಶ ನೌಕೆ ನಿರ್ದಿಷ್ಟ ಮಟ್ಟ ತಲುಪಲು ಸಹಕಾರಿಯಾಗಲಿದೆ

ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್​ 5 ರಂದು ಇಸ್ರೋ ವಿಜ್ಞಾನಿಗಳು ಮತ್ತೊಂದು ಬಿಗ್ ಅಪ್​ಡೇಟ್ ಕೊಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್​ 23 ರಂದು ಲ್ಯಾಂಡರ್ ವಿಕ್ರಂ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್​ ಲ್ಯಾಂಡ್ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Next Stop Is Moon: ಭೂ-ಕಕ್ಷೆಯಿಂದ ಹೊರಟು ಚಂದ್ರನ ಪಥ ಪ್ರವೇಶಿಸಿದ ನೌಕೆ.. ಸಕ್ಸಸ್​​ಗೆ ಕೆಲವೇ ದಿನಗಳ ಬಾಕಿ..!

https://newsfirstlive.com/wp-content/uploads/2023/08/CHANDRAYANA-1.jpg

Load More