ಯಶಸ್ವಿಯಾಗಿ ಉಡಾವಣೆಯಾದ ಇಸ್ರೋದ ಚಂದ್ರಯಾನ-3
ಬಾನೆತ್ತರದಲ್ಲಿ ಕಾಣಿಸಿಕೊಂಡ ಅವಿಸ್ಮರಣೀಯ ದೃಶ್ಯ ಇದು
ವಿಮಾನದ ಕಿಟಕಿಯಿಂದ ಲಿಫ್ಟ್‌ಆಫ್ ಕ್ಯಾಮೆರಾದಲ್ಲಿ ಸೆರೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ-3 ಐತಿಹಾಸಿಕ ಪುಟಗಳಲ್ಲಿ ದಾಖಲಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಿನ್ನೆ ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ನೌಕೆಯನ್ನು LVM-3 ಮಿಷನ್ ಮೂಲಕ ಯಶಸ್ವಿ ಉಡಾವಣೆ ಮಾಡಲಾಗಿದೆ. ಇದರಿಂದ ಭಾರತದ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮೈಲುಗಲ್ಲು ಸ್ಥಾಪನೆ ಮಾಡಿದಂತೆ ಆಗಿದೆ. ಚಂದ್ರಯಾನ-3 ಅನ್ನು ಇಡೀ ಭಾರತೀಯರೆಲ್ಲ ನೋಡಿ ಖುಷಿಪಟ್ಟಿದ್ದಾರೆ.
ಉಡಾವಣೆಯಾದ 16 ನಿಮಿಷಗಳಲ್ಲೇ ರಾಕೆಟ್ನಿಂದ ಪ್ರತ್ಯೇಕಗೊಂಡ ಚಂದ್ರಯಾನ ನೌಕೆ, ಭೂಕಕ್ಷೆಯನ್ನು ಸುಲಭವಾಗಿ ಸೇರಿತು. ಈ ಮೂಲಕ ಚಂದ್ರನ ಮೇಲೆ ನೌಕೆ ಇಳಿಸುವ ಭಾರತದ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ. ಇನ್ನು ಚಂದ್ರಯಾನ-3 ಕೌಂಟ್‌ಡೌನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಚೆನ್ನೈನಿಂದ ಢಾಕಾಗೆ ಹಾರುತ್ತಿದ್ದ ವಿಮಾನದ ಕಿಟಕಿಯಿಂದ ಲಿಫ್ಟ್‌ಆಫ್ ಕ್ಯಾಮೆರಾದಲ್ಲಿ ಚಂದ್ರಯಾನ-3 ರಾಕೆಟ್ ಸೆರೆಯಾಗಿದೆ. ಈ ವಿಡಿಯೋವನ್ನು ಇಸ್ರೋ ಮೆಟೀರಿಯಲ್ಸ್ ನಿರ್ದೇಶಕ ಮತ್ತು ರಾಕೆಟ್ ತಯಾರಿಕಾ ತಜ್ಞ ಡಾ.ಪಿ.ವಿ.ವೆಂಕಟಕೃಷ್ಣನ್ ಅವರು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ವಿಮಾನದಿಂದ ಚಂದ್ರಯಾನ 3 ಉಡಾವಣೆ. ಚೆನ್ನೈನಿಂದ ಢಾಕಾಕ್ಕೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ಪೈಲಟ್ ಈ ಐತಿಹಾಸಿಕ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಲಕ್ಷಗಟ್ಟಲೇ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.
ಸದ್ಯ ಈ ನೌಕೆಯು ಭೂಕಕ್ಷೆಯಲ್ಲಿದ್ದು ಭೂಮಿಯ ಸುತ್ತ ತಿರುಗುತ್ತಿದೆ. ಇದು ಸುಮಾರು 5 ರಿಂದ 6 ಬಾರಿ ಭೂಮಿಯ ಸುತ್ತ ತಿರುಗಲಿದೆ. ಅಂದರೆ ಭೂಮಿಗೆ 170 ಕಿಲೋ ಮೀಟರ್ ದೂರದಿಂದ ತಿರುಗಲು ಶುರುವಾಗಿ ಬರೋಬ್ಬರಿ 36500 ಕಿಲೋ ಮೀಟರ್ ದೂರದವರೆಗೂ ಸುತ್ತಲಿದೆ. ಸುದೀರ್ಘ 40 ದಿನಗಳ ಬಳಿಕ ನೌಕೆಯು ಚಂದ್ರನ ಮೇಲೆ ಇಳಿಯವ ನಿರೀಕ್ಷೆಯನ್ನು ವಿಜ್ಞಾನಿಗಳು ಇಟ್ಟುಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಆಗಸ್ಟ್ 23 ರಂದು ಸಂಜೆ 5.47ಕ್ಕೆ ಚಂದ್ರನ ಅಂಗಳದಲ್ಲಿ ಈ ನೌಕೆಯನ್ನು ಇಳಿಸಲಾಗುತ್ತದೆ. ಲ್ಯಾಂಡರ್ ಸಾಫ್ಟ್ ಆಗಿ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ, ಅದರೊಳಗೆ ಇರುವ ರೋವರ್ ಹೊರಗೆ ಬರಲಿದೆ. ಅದಾದ ನಂತರ ಚಂದ್ರನ ಮೇಲೆ ಅಧ್ಯಯನಗಳು ಶುರುವಾಗಲಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ-3 ಐತಿಹಾಸಿಕ ಪುಟಗಳಲ್ಲಿ ದಾಖಲಾಗಿದೆ. ಭಾರತದ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಮೈಲುಗಲ್ಲು ಸ್ಥಾಪನೆ ಮಾಡಿದಂತೆ ಆಗಿದೆ. ಇದೀಗ ಚಂದ್ರಯಾನ-3 ಬಾನೆತ್ತರಕ್ಕೆ ಹಾರುತ್ತಿದ್ದ ವೇಳೆ ಚೆನ್ನೈನಿಂದ ಢಾಕಾಕ್ಕೆ ಟೇಕ್ ಆಫ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಈ ಸುಂದರವಾದ ದೃಶ್ಯವನ್ನು… pic.twitter.com/40dY2sRm1m
— NewsFirst Kannada (@NewsFirstKan) July 15, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ