ಮೊದಲ ಬಹುಮಾನ 1 ಲಕ್ಷ ರೂ. 2ನೇ ಬಹುಮಾನ ₹75,000
ಪ್ರತಿಯೊಬ್ಬ ಭಾರತೀಯನು ಕ್ವಿಜ್‌ನಲ್ಲಿ ಭಾಗಿಯಾಗಿ ನಗದು ಗೆಲ್ಲಿ
ಸರಿಯಾದ ಉತ್ತರ ಕೊಟ್ಟ ನೂರಾರು ಜನರಿಗೆ ಕ್ಯಾಶ್ ಪ್ರೈಸ್ ಕಾದಿದೆ
ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ವಿಜ್ ಕಾಂಪಿಟೇಷನ್ ಒಂದನ್ನ ಆಯೋಜಿಸಿದೆ. ಇದರಲ್ಲಿ 300 ಸೆಕೆಂಡ್ ಅಂದ್ರೆ 5 ನಿಮಿಷಗಳಿಗೆ 10 ಪ್ರಶ್ನೆಗೆ ಸರಿಯಾದ ಉತ್ತರ ನೀಡುವವರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಮೊದಲ ಬಹುಮಾನ 1 ಲಕ್ಷ ರೂಪಾಯಿ. 2ನೇ ಬಹುಮಾನ ₹75,000. 3ನೇ ಬಹುಮಾನ ₹50,000. 4ನೇ ಬಹುಮಾನ 100 ವಿಜೇತರಿಗೆ ₹2,000. 5ನೇ ಬಹುಮಾನ 200 ವಿಜೇತರಿಗೆ ₹1,000 ರೂಪಾಯಿ ನಗದು ಬಹುಮಾನ ನೀಡಲಾಗುತ್ತಿದೆ.
ಇಸ್ರೋ ವಿಜ್ಞಾನಿಗಳ ಚಂದ್ರಯಾನ-3 ಸಕ್ಸಸ್‌ನ ಸೆಲೆಬ್ರೇಟ್ ಮಾಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ರಸಪ್ರಶ್ನೆಯನ್ನು ಆಯೋಜಿಸಿದೆ. ಚಂದ್ರಯಾನ-3 ವಿಶೇಷವಾದ ಈ ಮಹಾಕ್ವಿಜ್‌ಗೆ ಭರಪೂರ ಪ್ರತಿಕ್ರಿಯೆ ಸಿಕ್ಕಿದೆ. ಈಗಾಗಲೇ 2 ಲಕ್ಷಕ್ಕೂ ಅಧಿಕ ಜನರು ಮಹಾಕ್ವಿಜ್‌ನಲ್ಲಿ ಭಾಗಿಯಾಗಿ ಥಟ್ ಅಂತ ಉತ್ತರ ಕೊಟ್ಟಿದ್ದಾರೆ.
ಕೇಂದ್ರ ಸರ್ಕಾರ ಈ ಮಹಾಕ್ವಿಜ್ ಆಯೋಜಿಸಿದ್ದು, 5 ನಿಮಿಷದಲ್ಲಿ ಚಂದ್ರಯಾನ-3 ಮಿಷನ್ ಸಂಬಂಧಿತ 10 ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದಿದೆ. ಸರಿಯಾದ ಉತ್ತರ ನೀಡಿದ ಮೊದಲಿಗರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಇಸ್ರೋ ವಿಜ್ಞಾನಿಗಳ ಸಾಧನೆ ಮತ್ತು ಚಂದ್ರಯಾನ-3 ಮಿಷನ್ ಯಶಸ್ಸಿನ ಸಂಭ್ರಮಾಚರಣೆಗೆ ಈ ರಸಪ್ರಶ್ನೆಯ ಯೋಜನೆ ಹಾಕಲಾಗಿದೆ.
ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಇಸ್ರೋದ ಮತ್ತೊಂದು ಪ್ರಯೋಗ ಯಶಸ್ವಿ.. ಏನದು..?
ಅಂದಹಾಗೆ ಪ್ರತಿಯೊಬ್ಬ ಭಾರತೀಯನು ಈ ಮಹಾಕ್ವಿಜ್‌ನಲ್ಲಿ ಭಾಗಿಯಾಗಬಹುದಾಗಿದೆ. ಕೇಂದ್ರ ಸರ್ಕಾರದ https://isroquiz.mygov.in ಈ ವಿಳಾಸಕ್ಕೆ ಭೇಟಿ ಕೊಟ್ಟು ನಿಮ್ಮ ಹೆಸರು, ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಯಾವ ರಾಜ್ಯ, ಊರು ಅನ್ನೋದನ್ನ ನಮೂದಿಸಿ ಕ್ವಿಜ್ ಕಾಂಪಿಟೇಷನ್‌ನಲ್ಲಿ ಭಾಗಿಯಾಗಬಹುದು. ಸರಿಯಾದ ಪ್ರಶ್ನೆಗೆ ಉತ್ತರಿಸುವ ಬಹುಮಾನ ವಿಜೇತರನ್ನ ಕೇಂದ್ರ ಸರ್ಕಾರವೇ ಪ್ರಕಟಿಸಲಿದೆ. ನಂತರ ಆಯ್ಕೆಯಾದವರಿಗೆ ನಗದು ಬಹುಮಾನವನ್ನು ನೀಡಲಾಗುವುದು ಎನ್ನಲಾಗಿದೆ. ದೇಶದ ಯುವ ಸಮುದಾಯದಲ್ಲಿ ಇಸ್ರೋ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿಸಲು ಈ ಸ್ಪರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೋರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ