newsfirstkannada.com

ಜೈ ಹೋ ಇಸ್ರೋ.. ಮುಗಿಲು ಮುಟ್ಟಿದ ಸಂಭ್ರಮಾಚರಣೆ.. ಅಂದು ಗೇಲಿ ಮಾಡಿದ್ದವರೆಲ್ಲಾ ಇಂದು ಗಪ್‌ಚುಪ್‌!

Share :

23-08-2023

  ಚಂದ್ರನ ಅಂಗಳದಲ್ಲಿ ಮಹತ್ವದ ಹೆಜ್ಜೆ ಇಟ್ಟ ವಿಕ್ರಮ್​ ಲ್ಯಾಂಡರ್

  ವಿಕ್ರಮ್​​ ಲ್ಯಾಂಡಿಂಗ್ ಕ್ಷಣವನ್ನು ಕಣ್ತುಂಬಿಕೊಂಡ ಇಡೀ ವಿಶ್ವ

  ಇಡೀ ಜಗತ್ತಿನ ಗಮನ ಸೆಳೆದ ಚಂದ್ರಯಾನ 3 ಸೇಫ್‌ ಲ್ಯಾಂಡಿಂಗ್

ಶತಕೋಟಿ ಭಾರತೀಯರ ಪ್ರಾರ್ಥನೆ ಕೊನೆಗೂ ಫಲಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಆಗಿದ್ದು ಇಡೀ ದೇಶಾದ್ಯಂತ ಸಂಭ್ರಮಾಚರಣೆ ಶುರುವಾಗಿದೆ. ಬೆಂಗಳೂರು ಇಸ್ರೋ ಕೇಂದ್ರ ಕಚೇರಿಯಲ್ಲಿ ವಿಜ್ಞಾನಿಗಳು ವಿಕ್ರಂ ಲ್ಯಾಂಡರ್ ಸೇಫ್ ಲ್ಯಾಂಡ್‌ ಚಪ್ಪಾಳೆ ತಟ್ಟಿ ಹಬ್ಬ ಆಚರಿಸಿದ್ದಾರೆ.

ಕೇವಲ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಚಂದ್ರಯಾನ-3 ಯಶಸ್ಸಿನ ಬಗ್ಗೆಯೇ ಚರ್ಚೆಯಾಗುತ್ತಿದೆ. ಈ ಯಶಸ್ಸಿನ ಮಧ್ಯೆ ಚಂದ್ರಯಾನ 2 ಬಗ್ಗೆ ಗೇಲಿ ಮಾಡಿದ್ದ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ಇದೀಗ ಭಾರತದ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿ ಎಂದು ಅಭಿನಂದಿಸಿದ್ದಾರೆ.

ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಭಾರತದ ಚಂದ್ರಯಾನ 3 ನೌಕೆಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್  ಪ್ರಧಾನಿಯಾಗಿದ್ದಾಗ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಫವಾದ್, ಚಂದ್ರಯಾನ- 2ರ ಲ್ಯಾಂಡಿಂಗ್ ಯೋಜನೆ ವಿಫಲವಾದಾಗ ಭಾರತವನ್ನು ಹೀಯಾಳಿಸಿದ್ದರು. ಈಗ ಅದೇ ವ್ಯಕ್ತಿ ಈಗ ಚಂದ್ರಯಾನ-3 ಲ್ಯಾಂಡಿಂಗ್ ಕ್ಷಣವನ್ನು ನೇರ ಪ್ರಸಾರ ಮಾಡುವಂತೆ ಒತ್ತಾಯಿಸಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ಭಾರತದ ಚಂದ್ರಯಾನ 2 ಬಗ್ಗೆ ವ್ಯಂಗ್ಯವಾಗಿ ಮಾತಾಡಿದ್ದರು. ಇದೀಗ ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಸೇಫ್ ಲ್ಯಾಂಡಿಂಗ್ ಅನ್ನು ಪಾಕ್ ಮಾಧ್ಯಮಗಳು ನೇರಪ್ರಸಾರ ಮಾಡಬೇಕು. ಮನುಕುಲಕ್ಕೆ, ವಿಶೇಷವಾಗಿ ಭಾರತದ ಜನರು, ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಸಮುದಾಯಕ್ಕೆ ಐತಿಹಾಸಿಕ ಕ್ಷಣ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಸದ್ಯ ಇಸ್ರೋ ವಿಜ್ಞಾನಿಗಳು ಮಾತ್ರವಲ್ಲ, ಭಾರತದಾದ್ಯಂತ ಸಂಭ್ರಮ ಮನೆಮಾಡುವಂತೆ ಮಾಡಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಯಷ್ಟೇ ಅಲ್ಲ, ಜಗತ್ತಿನಲ್ಲೆಡೆ ಭಾರತದ ಹೆಸರನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈ ಹೋ ಇಸ್ರೋ.. ಮುಗಿಲು ಮುಟ್ಟಿದ ಸಂಭ್ರಮಾಚರಣೆ.. ಅಂದು ಗೇಲಿ ಮಾಡಿದ್ದವರೆಲ್ಲಾ ಇಂದು ಗಪ್‌ಚುಪ್‌!

https://newsfirstlive.com/wp-content/uploads/2023/08/chandrayana-3-15.jpg

Load More