newsfirstkannada.com

Chandrayaan-3: ಮುಂದಿನ 14 ದಿನಗಳು ಇಸ್ರೋಗೆ ತುಂಬಾನೇ ಮುಖ್ಯ​​; ಕಾರಣವೇನು..?

Share :

24-08-2023

    ವಿಕ್ರಮ್ ಲ್ಯಾಂಡರ್​ ಚಂದಿರನ ದಕ್ಷಿಣದಲ್ಲಿ ಲ್ಯಾಂಡಿಂಗ್

    ಭಾರತ ಈಗ ವಿಶ್ವದ ಅಗ್ರಗಣ್ಯ ದೇಶಗಳಲ್ಲೊಂದಾಗಿದೆ

    ಈ 14 ದಿನಗಳು ಯಾಕೆ ಇಸ್ರೋಗೆ ಮಹತ್ವವಾದುದು?

ಚಂದ್ರಯಾನ 3 ಯಶಸ್ವಿಯಾಗಿದೆ. ಶಶಿಯ ಅಂಗಳದಲ್ಲಿ ವಿಕ್ರಮ ರಣವಿಕ್ರಮ ಮೆರೆದಿದ್ದಾನೆ. ಆದ್ರೆ ಚಂದ್ರನ ಅಧ್ಯಯನ ಮಾಡಲು ಬೆಳಕಿನ ಅವಶ್ಯಕತೆ ಹೆಚ್ಚಿದೆ. ಈ ಬೆಳಕಿನ ಅವಶ್ಯಕತೆಗಾಗಿಯೇ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲೆ ಸೂರ್ಯೋದಯದ ವೇಳೆ ನೌಕೆ ಕಳಿಸಿದ್ದಾರೆ. ಇನ್ನು ರೋವರ್ ಅಧ್ಯಯನ ನಡೆಸಲು ಮುಂದಿನ 14 ದಿನಗಳು ಬಹುಮುಖ್ಯ ಪಾತ್ರ ವಹಿಸಲಿವೆ. ಈ 14 ದಿನಗಳಿಗಷ್ಟೇ ಅಧ್ಯಯನ ಸೀಮಿತ ಮಾಡಿರೋದ್ಯಾಕೆ ಅನ್ನೋದಕ್ಕೆ ವೈಜ್ಞಾನಿಕ ಕಾರಣಗಳಿವೆ.

ಚಂದ್ರಯಾನ 3 ಚಂದ್ರಮನ ಅಂಗಳದಲ್ಲಿ ಲ್ಯಾಂಡ್ ಆಗಿದೆ. ವಿಕ್ರಮ್ ಲ್ಯಾಂಡರ್​ ಚಂದಿರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗೋ ಮೂಲಕ ತ್ರಿವಿಕ್ರಮ ಸಾಧಿಸಿದೆ. ಈ ಮೂಲಕ ಇಸ್ರೋ ವಿಜ್ಞಾನಿಗಳ ಸಾಧನೆ ಇಡೀ ವಿಶ್ವವೇ ಭಾರತದತ್ತ ತಲೆ ಎತ್ತಿ ನೋಡುವಂತೆ ಮಾಡಿದೆ. ಇಷ್ಟೆಲ್ಲ ಕೋಟಿ, ಕೋಟಿ ಖರ್ಚು ಮಾಡಿ ಚಂದ್ರಯಾನ 3 ನೌಕೆಯನ್ನು ಚಂದ್ರನ ಮೇಲೆ ಲ್ಯಾಂಡ್​ ಮಾಡೋ ಮೂಲಕ ಭಾರತ ಈಗ ವಿಶ್ವದ ಅಗ್ರಗಣ್ಯ ದೇಶಗಳಲ್ಲೊಂದಾಗಿದೆ. ಆದ್ರೆ ಈ ಚಂದ್ರಯಾನ ನೌಕೆ ಈಗಲೇ ಯಾಕೆ ಲ್ಯಾಂಡಿಂಗ್ ಮಾಡಲಾಗಿದೆ. ಕಾದು ಕಾದು ಇದೇ ಸಮಯದಲ್ಲೇ ವಿಕ್ರಮನನ್ನು ಸೋಮನ ಮೇಲೆ ಇಳಿಸಲಾಗಿದೆ. ಈ 14 ದಿನಗಳು ಯಾಕೆ ಇಸ್ರೋಗೆ ಮಹತ್ವವಾದುದು ಅನ್ನೋದೇ ಸದ್ಯ ಇಂಟ್ರೆಸ್ಟಿಂಗ್​.

‘ವಿಕ್ರಮ’ನ ಕೆಲಸವಾಯ್ತು.. ಇನ್ನೇನಿದ್ರೂ ‘ಪ್ರಜ್ಞಾನ’​ನ ವಿಜ್ಞಾನ

ಚಂದ್ರಯಾನ 3 ನೌಕೆ ಚಂದ್ರನ ಅಂಗಳದಲ್ಲಿ ಲ್ಯಾಂಡ್​ ಆಗಿದೆ. ವಿಕ್ರಮ ಲ್ಯಾಂಡಿಂಗ್ ಎಂಬ ತ್ರಿವಿಕ್ರಮ ಮೆರೆದಿದ್ದು ಇನ್ನೇನಿದ್ರೂ ಪ್ರಜ್ಞಾನ್ ರೋವರ್​ ಮಾಡುವ ವಿಜ್ಞಾನವೇ ಮಹತ್ವದ್ದಾಗಿದೆ. ಚಂದಿರನ ಮೇಲೆ 14 ದಿನಗಳ ಕಾಲ ರೋವರ್​ ಮಿಷನ್‌ ಕೈಗೊಳ್ಳಲಿದ್ದು ಸಂಶೋಧನೆ ನಡೆಸಲಿದೆ. ಆದ್ರೆ ಇಲ್ಲಿ ಮಹತ್ವವದ ವಿಚಾರವೇನಂದ್ರೆ ಚಂದ್ರನಲ್ಲಿ ಸೂರ್ಯೋದಯವನ್ನೇ ಕಾದು ವಿಕ್ರಮನನ್ನ ಲ್ಯಾಂಡಿಂಗ್ ಮಾಡಲಾಗಿದೆ. ಸಂಶೋಧನೆ ನಡೆಸಲು ಚಂದ್ರನ ಮೇಲೆ ಬೆಳಕು ಇರಲ್ವಾ? ವಿಕ್ರಮ್​​ ಅಥವಾ ರೋವರ್ ಬಳಿ ಯಾವುದೇ ಬೆಳಕಿನ ವ್ಯವಸ್ಥೆ ಇರಲ್ವ ಅನ್ನೋ ಪ್ರಶ್ನೆ ಸಹಜ. ಇದಕ್ಕೆಲ್ಲ ಉತ್ತರ ಆ 14 ದಿನಗಳು. ಒಂದು ಲೂನಾರ್​ ದಿನ ಅರ್ಥಾತ್​ ಚಂದ್ರನ ಮೇಲೆ 1 ದಿನ ಅಂದ್ರೆ ಭೂಮಿಯಲ್ಲಿ 29.5 ದಿನಗಳು ಆಗಿರುತ್ತವೆ.

ಅದೇ ಚಂದ್ರನ ಅರ್ಧ ದಿನ ಅಂದ್ರೆ ಭೂಮಿಯ 14 ದಿನಗಳು. ಭೂಮಿಯಲ್ಲಿ ಸೂರ್ಯ ಅರ್ಧದಿನ ಮಾತ್ರ ಇದ್ದು ಇನ್ನರ್ಧ ದಿನ ಕತ್ತಲಿರುತ್ತದೆ. ಅದೇ ರೀತಿ ಚಂದ್ರನ ಮೇಲೆ ಉದಯಿಸುವ ಸೂರ್ಯನ ಬೆಳಕು ಅಲ್ಲಿ ಅರ್ಧ ದಿನ ಅಂದ್ರೆ ಭೂಮಿಯ 14 ದಿನಗಳ ಕಾಲ ಇರುತ್ತೆ. ನಂತರ ಕತ್ತಲಾವರಿಸಿದರೆ ಮುಂದಿನ ಚಂದ್ರನ ಅರ್ಧ ದಿನ ಅಥವಾ ಭೂಮಿಯ 14 ದಿನಗಳ ಕಾಲ ಸೂರ್ಯನ ಬೆಳಕು ಇರಲ್ಲ. ಕತ್ತಲಾದ ಸಂದರ್ಭದಲ್ಲಿ ತಾಪಮಾನ ತೀವ್ರ ಕುಸಿತ ಉಂಟಾಗುತ್ತೆ. ಇದರಿಂದ ವಿಕ್ರಮ್ ಲ್ಯಾಂಡರ್​ ಹಾಗೂ ಪ್ರಜ್ಞಾನ್​ ರೋವರ್​ನ ಸೋಲಾರ್‌ ಪ್ಯಾನಲ್‌ಗಳು ಕೆಲಸ ಮಾಡಲ್ಲ. ಹೀಗಾಗಿ 14 ದಿನಗಳಲ್ಲೇ ಅಧ್ಯಯನವನ್ನ ಮುಗಿಸಬೇಕಾಗುತ್ತೆ. ಇದಕ್ಕಾಗಿ ಲ್ಯಾಂಡರ್‌ ಇಳಿಯುವ ಜಾಗದಲ್ಲಿ ಆಗ ತಾನೇ ಸೂರ್ಯೋದಯವಾಗಿದ್ದರೆ ಪೂರ್ಣ 14 ದಿನಗಳ ಕಾಲ ಅಧ್ಯಯನಕ್ಕೆ ಅವಕಾಶ ಸಿಗುತ್ತೆ.

ಎಲ್ಲ ರೀತಿಯಲ್ಲೂ ಇಸ್ರೋ ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಚಂದ್ರನಲ್ಲಿ ಸೂರ್ಯೋದಯವಾಗುತ್ತದೆ ಅಂತ ಸಂಶೋಧನೆ ಮಾಡಿದ್ದು ಈ ವೇಳೆಯೇ ಚಂದ್ರನಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಆಗಬೇಕೆಂದು ನಿರ್ಧರಿಸಿಯೇ ಚಂದ್ರಯಾನ 3 ಕೈಗೊಂಡಿದ್ದಾರೆ. ಇಂದಿನಿಂದ ಭೂಮಿಯ 14 ದಿನಗಳ ಕಾಲ ಅಂದ್ರೆ ಚಂದ್ರನಲ್ಲಿ ಅರ್ಧ ದಿನ ಸೂರ್ಯೋದಯ ಇರಲಿದೆ. ಹೀಗಾಗಿ ಇಂದೇ ವಿಕ್ರಮನನ್ನು ಲ್ಯಾಂಡ್ ಮಾಡಿಸಿದ್ದಾರೆ. ಸದ್ಯ ವಿಕ್ರಮ್​ ತ್ರಿವಿಕ್ರಮ ಮೆರೆದಿದ್ದು ಇನ್ನೇನಿದ್ರೂ ಪ್ರಜ್ಞಾನ್ ವಿಜ್ಞಾನದ ಕಣಜ ಇಸ್ರೋಗೆ ಕಳಿಸಬೇಕಿದೆ. ಈ ಮೂಲಕ ಭಾರತ ಚಂದ್ರಯಾನ ಮಾಡಿದ ಅಗ್ರಗಣ್ಯ ದೇಶಗಳಲ್ಲೊಂದಾಗಿ ರಣವಿಕ್ರಮ ಮೆರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: ಮುಂದಿನ 14 ದಿನಗಳು ಇಸ್ರೋಗೆ ತುಂಬಾನೇ ಮುಖ್ಯ​​; ಕಾರಣವೇನು..?

https://newsfirstlive.com/wp-content/uploads/2023/08/chandrayanna-7.jpg

Load More