ಇಸ್ರೋದಿಂದ ಪ್ರಜ್ಞಾನ್ ರೋವರ್‌ನ ಅದ್ಭುತ ವಿಡಿಯೋ ರಿಲೀಸ್
ಚಂದ್ರನ ದಕ್ಷಿಣ ಧ್ರುವದ ಮೇಲೆ ಪ್ರಜ್ಞಾನ್ ರೋವರ್ ಕಾರ್ಯ ಆರಂಭ
ಪ್ರಜ್ಞಾನ್ ರೋವರ್ ಕೆಳಗಿಳಿಯೋ ವಿಡಿಯೋ ಹಂಚಿಕೊಂಡ ಇಸ್ರೋ
ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆದ ಬಳಿಕ ಪ್ರಜ್ಞಾನ್ ರೋವರ್ ಜೊತೆ ಕಾರ್ಯ ನಿರ್ವಹಿಸುತ್ತಿದೆ. ನಿನ್ನೆಯಷ್ಟೇ ಇಸ್ರೋ ಈ ಬಗ್ಗೆ ಒಂದು ವಿಡಿಯೋವನ್ನು ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಬಾಹ್ಯಾಕಾಶ ಸಂಸ್ಥೆ ಮತ್ತೊಂದು ಬಿಗ್ ಅಪ್ಡೇಟ್ ಅನ್ನು ನೀಡಿದೆ. ಸದ್ಯ ಬಿಡುಗಡೆ ಮಾಡಲಾದ ವಿಡಿಯೋದಲ್ಲಿ ಲ್ಯಾಂಡರ್ನಿಂದ ರೋವರ್ ಅಥವಾ ಪ್ರಜ್ಞಾನ್ ಹೇಗೆ ಇಳಿಯಿತು ಎಂಬುದು ದೃಶ್ಯಗಳಲ್ಲಿ ಕಾಣಬಹುದಾಗಿದೆ.
ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಇಳಿದ ಬಳಿಕ ಇಸ್ರೋ ಸಂಸ್ಥೆ ಯೋಜಿಸಿದಂತೆ ವಿಕ್ರಮ್ನಿಂದ ರೋವರ್ ಪ್ರಜ್ಞಾನ್ ಹೊರಬಂದು ಚಂದ್ರನ ಮೇಲ್ಮೈ ಮೇಲೆ ಇಳಿದಿದೆ. ಈ ಸುಂದರ ದೃಶ್ಯವನ್ನು ಲ್ಯಾಂಡರ್ನಲ್ಲಿರುವ ಇಮೇಜರ್ ಕ್ಯಾಮೆರಾ ಸೆರೆ ಹಿಡಿದಿದೆ. ಬೆಂಗಳೂರಿನಲ್ಲಿನ ಇಸ್ರೋ ಕೇಂದ್ರದ ಸಂಪರ್ಕದಲ್ಲಿರುವ ವಿಕ್ರಮ್, ಪ್ರಜ್ಞಾನ್ನಲ್ಲಿ ಯಾವುದೇ ಯಾಂತ್ರಿಕ ಸಮಸ್ಯೆ ಕಾಣಿಸಿಲ್ಲ. ಸದ್ಯ ಎರಡು ಆರೋಗ್ಯವಾಗಿದ್ದು ಚಂದ್ರನ ಮೇಲ್ಮೈ ಮೇಲೆ ಸಂಚರಿಸುತ್ತಾ ಶೋಧನೆಯಲ್ಲಿ ತೊಡಗಿವೆ ಎಂದು ತಿಳಿದು ಬಂದಿದೆ.
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡ್ ಆದ್ಮೇಲೆ ಪ್ರಜ್ಞಾನ್ ಪ್ರಗ್ಯಾನ್ ರೋವರ್ ಹೊರ ಬಂದ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ. ವಿಕ್ರಮ್ ಲ್ಯಾಂಡರ್ನಿಂದ ರೋವರ್ ಇಳಿಯುವ ದೃಶ್ಯವನ್ನು ಇಸ್ರೋದ ಇಮೇಜರ್ ಕ್ಯಾಮೆರಾ ಸೆರೆ ಹಿಡಿದಿದೆ. #Newsfirstkannada #Newsfirstlive #Chandrayaan3 #ISRO #VikramLander https://t.co/ozmjiw6ctz
— NewsFirst Kannada (@NewsFirstKan) August 25, 2023
ಚಂದ್ರನ ದಕ್ಷಿಣ ಧ್ರುವಕ್ಕೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ ನಂತರ ವಿಕ್ರಮ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಮುಂಚೆ ಸೆರೆ ಹಿಡಿಯಲಾದ ರೋಚಕವಾದ ಕ್ಷಣಗಳನ್ನು ಇಸ್ರೋ ನಿನ್ನೆ ಹಂಚಿಕೊಂಡಿತ್ತು. ಸುಮಾರು 2.17 ನಿಮಿಷಗಳ ವಿಡಿಯೋ ಇದಾಗಿದೆ. ಲ್ಯಾಂಡಿಂಗ್ಗೂ ಮುನ್ನ ವಿಕ್ರಮ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯನ್ನು ಇದರಲ್ಲಿ ಕಾಣಬಹುದಾಗಿದೆ. ಇಂದು ವಿಕ್ರಮ್ ಲ್ಯಾಂಡರ್‌ನ ಒಡಲಿನಿಂದ ಪ್ರಜ್ಞಾನ್ ರೋವರ್ ಹೊರ ಬಂದ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ನೋಡುವುದಕ್ಕೆ ರೋಮಾಂಚನಕಾರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ