ಲ್ಯಾಡಿಂಗ್ಗೂ 2 ಗಂಟೆ ಮುನ್ನ ಇಸ್ರೋದಿಂದ ನಿರ್ಧಾರ
ಪರಿಸ್ಥಿತಿ ಹತೋಟಿಯಲ್ಲಿದ್ರೆ ಮಾತ್ರ ಇಂದು ಸಾಫ್ಟ್ ಲ್ಯಾಂಡ್
ಲ್ಯಾಂಡಿಂಗ್ ಸಾಧ್ಯವಾಗದಿದ್ರೆ ಇಸ್ರೋ ವಿಜ್ಜಾನಿಗಳ ಪ್ಲಾನ್ ಏನು?
ಗಡಿಯಾರದ ಮುಳ್ಳು ತಿರುಗುತ್ತಿರೋ ಸ್ಪೀಡ್ನಲ್ಲೇ ಭಾರತೀಯರ ಕಾತುರತೆ ಸಹ ಹೆಚ್ಚುತ್ತಿದೆ. ಇಸ್ರೋ ವಿಜ್ಞಾನಿಗಳ ಎದೆಬಡಿತ ಸಹ ಏರುತ್ತಿದೆ. 42 ದಿನಗಳ ಚಂದ್ರಯಾನದ ಸುದೀರ್ಘ ಪ್ರಯಾಣದ ಬಳಿಕ ಇಂದು ಚಂದಿರನಂಗಳ ತಲುಪುವ ಸುಮುಹೂರ್ತ ಸನಿಹವಾಗಿದೆ. ಆದ್ರೆ ಈ ಸನ್ನಿವೇಶಕ್ಕೂ ಮುನ್ನ ದೊಡ್ಡದೊಂದು ಸಾವಲು ಸಹ ಇಸ್ರೋ ವಿಜ್ಞಾನಿಗಳ ಮುಂದಿದೆ. ಕೋಟ್ಯಾನುಕೋಟಿ ಭಾರತೀಯರ ಹೆಮ್ಮೆಯ ಪ್ರತೀಕವಾಗಿ ಶಶಿಯನ್ನ ಸ್ಪರ್ಶಿಸಲು ಸಜ್ಜಾಗಿರೋ ಬಾಹ್ಯಾಕಾಶ ನೌಕೆ.
ಜುಲೈ 12ರಂದು ಭೂಲೋಕದಿಂದ ಚಂದ್ರಲೋಕದ ದಾರಿ ಹಿಡಿದು ಪಯಣ ಆರಂಭಿಸಿದ ಈ ಚಂದ್ರಯಾನ 3 ಒಂದಲ್ಲ, ಎರಡಲ್ಲ ಬರೋಬ್ಬರಿ 41 ದಿನಗಳ ಸುದೀರ್ಘ ಪಯಣವನ್ನ ನಡೆಸಿದೆ. ಸದ್ಯ ಈ ಪ್ರಯಾಣಕ್ಕೆ ಪೂರ್ಣ ವಿರಾಮ ಬೀಳುವ ಸುಮುಹೂರ್ತ ಸನಿಹವಾಗಿದೆ. ಇಂದು ಶಶಿಯ ಸ್ಪರ್ಶಿಸಲು ಸಜ್ಜಾಗಿರೋ ಚಂದ್ರಯಾನ 3ಯನ್ನ ವೀಕ್ಷಿಸಲು ಇಡೀ ವಿಶ್ವವೇ ಕಾತುರತೆಯಿಂದ ಕಾದುಕುಳಿತಿದೆ.
ಲ್ಯಾಂಡಿಂಗ್ ಸಾಧ್ಯವಾಗದಿದ್ರೆ ಇಸ್ರೋದ ಮುಂದಿನ ನಡೆ ಏನು?
ಇಂದು ಸಂಜೆ 6 ಗಂಟೆ ಬಳಿಕ ಶಶಿಯ ಮೇಲೆ ಚಂದ್ರಯಾನ 3 ಬಾಹ್ಯಾಕಾಶ ನೌಕೆಯ ವಿಕ್ರಮ್ ಲ್ಯಾಂಡಿಂಗ್ ಆಗುತ್ತೆ. ಆದ್ರೆ ಈ ಲ್ಯಾಂಡಿಂಗ್ ಅಷ್ಟು ಸುಲಭದ ಮಾತಲ್ಲ. ಲ್ಯಾಂಡಿಂಗ್ ವೇಳೆ ಇಸ್ರೋ ಸ್ವಲ್ಪ ಎಚ್ಚರ ತಪ್ಪಿದ್ರೂ ಸಮಸ್ಯೆ ಎದುರಿಸಬೇಕಾಗುತ್ತೆ. ಅಲ್ಲದೇ ಲ್ಯಾಂಡಿಂಗ್ ವೇಳೆ ಅಂದುಕೊಂಡ ಪರಿಸ್ಥಿತಿ ಇದ್ರೆ ಮಾತ್ರ ಸಾಫ್ಟ್ ಲ್ಯಾಂಡಿಂಗ್ ಸಕ್ಸಸ್ ಆಗುತ್ತೆ. ಒಂದು ವೇಳೆ ಇಂದು ಲ್ಯಾಂಡಿಂಗ್ ಸಾಧ್ಯವಾಗದಿದ್ರೆ ಮುಂದೇನು? ಹೀಗೊಂದು ದೊಡ್ಡ ಸವಾಲು ಇಸ್ರೋ ವಿಜ್ಞಾನಿಗಳ ಮುಂದೆಯೂ ಇದೆ.
ಇಂದು ವಿಕ್ರಮ್ ಲ್ಯಾಂಡಿಂಗ್ ಆಗುವ ವೇಳೆ ಚಂದ್ರನ ಮೇಲ್ಮೈನ ವಾತಾವರಣ ಹಾಗೂ ಲ್ಯಾಂಡರ್ನ ಸ್ಥಿತಿಗತಿಯ ಬಗ್ಗೆ ಇಸ್ರೋ ಪರಿಶೀಲನೆ ನಡೆಸುತ್ತೆ. ಲ್ಯಾಂಡಿಂಗ್ ಸೇಫ್ ಅನ್ನೋ ವಾತಾವರಣ ಇದ್ರೆ ಮಾತ್ರ ಲ್ಯಾಂಡರ್ ಚಂದಿರನಂಗಳವನ್ನ ಸ್ಪರ್ಶಿಸಲು ಸಾಧ್ಯವಾಗುತ್ತೆ. ಇಲ್ಲದೇ ಹೋದರೆ ಲ್ಯಾಂಡಿಂಗ್ ಸಮಯವನ್ನ ಮುಂದೂಡಿಕೆ ಮಾಡಲು ಇಸ್ರೋ ತೀರ್ಮಾನಿಸಿದೆ. ಇಂದು ಸಂಜೆ ವಿಕ್ರಮ್ ಲ್ಯಾಂಡಿಂಗ್ ಆಗುವ 2 ಗಂಟೆಮುನ್ನ ಇಸ್ರೋ ವಿಜ್ಜಾನಿಗಳು ಈ ಬಗ್ಗೆ ನಿರ್ಧಾರವನ್ನ ಕೈಗೊಳ್ಳಲಿದ್ದಾರೆ. ಒಂದು ವೇಳೆ ಪರಿಸ್ಥಿತಿ ಸೂಕ್ತವಲ್ಲದಿದ್ರೆ ಆಗಸ್ಟ್ 27ರಂದು ಲ್ಯಾಂಡಿಂಗ್ ಮಾಡುವ ಪ್ರಕ್ರಿಯೆಯನ್ನ ಮುಂದೂಡಲಾಗುತ್ತೆ.
– ನಿಲೇಶ್ ಎಂ ದೇಸಾಯಿ, ಸ್ಪೇಸ್ ನಿರ್ದೇಶಕ
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು, ಲ್ಯಾಂಡರ್ ಮಾಡ್ಯೂಲ್‌ನ ಆರೋಗ್ಯ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ಆ ಸಮಯದಲ್ಲಿ ಅದನ್ನು ಇಳಿಸುವುದು ಸೂಕ್ತವೇ ಅಥವಾ ಬೇಡವೇ ಎಂಬುದರ ಕುರಿತು ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ವೇಳೆ, ಯಾವುದೇ ಅಂಶವು ಅನುಕೂಲಕರವಾಗಿಲ್ಲ ಎಂದು ತಿಳಿದರೆ, ನಾವು ಆಗಸ್ಟ್ 27 ರಂದು ಮಾಡ್ಯೂಲ್ ಅನ್ನು ಚಂದ್ರನ ಮೇಲೆ ಇಳಿಸುತ್ತೇವೆ. ಯಾವುದೇ ಸಮಸ್ಯೆ ಇಲ್ಲ ಅನ್ನೋದು ಖಚಿವಾದ್ರೆ ನಾವು ಆಗಸ್ಟ್ 23 ರಂದು ಮಾಡ್ಯೂಲ್ ಅನ್ನು ಇಳಿಸಲು ಸಾಧ್ಯವಾಗುತ್ತದೆ.
ದಕ್ಷಿಣ ಆಫ್ರಿಕಾದಿಂದಲೇ ಐತಿಹಾಸಿಕ ಕ್ಷಣಕ್ಕೆ ‘ನಮೋ’ ಸಾಕ್ಷಿ!
15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಗೆ ಪ್ರಧಾನಿ ನರೇಂದ್ರ ಮೋದಿ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಅಲ್ಲಿಂದಲೇ ಚಂದ್ರಯಾನ 3ನ ವಿಕ್ರಮ್ ಲ್ಯಾಂಡಿಂಗ್ ಆಗುವ ಐತಿಹಾಸಿಕ ಕ್ಷಣವನ್ನ ಮೋದಿ ಕಣ್ತುಂಬಿಕೊಳ್ಳಲಿದ್ದಾರೆ. ದೇಶದ ಪ್ರಧಾನಿಯಾಗಿ ಇಡೀ ವಿಶ್ವವೇ ತಿರುಗಿ ನೋಡುತ್ತಿರುವ ಚಂದ್ರಯಾನ 3ಯ ಸಕ್ಸಸ್ ಅನ್ನ ಕಣ್ತುಂಬಿಕೊಳ್ಳಲು ಮೋದಿ ಸಹ ಕಾತುರರಾಗಿದ್ದಾರೆ. ಶಶಿಯನ್ನ ಸ್ಪರ್ಶಿಸಲು ಸಜ್ಜಾಗಿರೋ ವಿಕ್ರಮ್ ಸೇಫ್ ಆಗಿ ಚಂದ್ರನ ಅಂಗಳಕ್ಕೆ ತಲುಪುವುದನ್ನ ಕಾಣಲು ಇಡೀ ವಿಶ್ವವೇ ಎದುರುನೋಡುತ್ತಿದೆ. ಇಸ್ರೋ ವಿಜ್ಞಾನಿಗಳ ಕನಸು, ಕೋಟ್ಯಾನುಕೋಟಿ ಭಾರತೀಯರ ಪ್ರಾರ್ಥನೆ ಫಲಿಸಲು ಕೆಲವೇ ಕೆಲವು ಗಂಟೆಗಳು ಬಾಕಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ