newsfirstkannada.com

ಚಂದ್ರನ ಮೇಲೆ ಎದುರಾಗಿತ್ತು ‘ಗುಂಡಿ’ ಗಂಡಾಂತರ; ಸ್ವಲ್ಪದರಲ್ಲೇ ಪ್ರಗ್ಯಾನ್ ರೋವರ್ ಬಚಾವ್ ಆಗಿದ್ದು ಹೇಗೆ?

Share :

Published August 28, 2023 at 8:32pm

    ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಪ್ರಗ್ಯಾನ್

    ಚಂದ ಮಾಮನ ಅಂಗಳದಲ್ಲಿ ಪತ್ತೆಯಾಯ್ತು ಬೃಹತ್​​ ಕುಳಿ

    ಈ ಬಗ್ಗೆ ಇಸ್ರೋ ಕೊಟ್ಟ ಮಹತ್ವದ ಮಾಹಿತಿ ಏನು ಗೊತ್ತಾ?

ಆಗಸ್ಟ್ 23 ಸಂಜೆ 6 ಗಂಟೆ 4 ನಿಮಿಷ.. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡ್ ಆಗುತ್ತಿದ್ದಂತೆ ಕೋಟ್ಯಾಂತರ ಭಾರತೀಯರು ನಿಟ್ಟುಸಿರು ಬಿಟ್ಟಿದ್ದರು. ಇಸ್ರೋ ವಿಜ್ಞಾನಿಗಳ ಜೊತೆ ವಿಕ್ರಮ್ ಲ್ಯಾಂಡರ್ ಲ್ಯಾಂಡ್‌ ಆದ ಅಪರೂಪದ ದೃಶ್ಯ ಕಂಡು ಸಂಭ್ರಮಾಚರಣೆ ಮಾಡಿದ್ದರು. ಆ ಸಂದರ್ಭದಲ್ಲಿ ವಿಕ್ರಮ್‌ ಲ್ಯಾಂಡರ್ ಹೇಗೆ ಚಂದ್ರನ ಮೇಲೆ ಲ್ಯಾಂಡ್ ಆಯ್ತು. ವಿಕ್ರಮ್‌ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಹೊರ ಬಂದಿದ್ದು ಹೇಗೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. 5 ದಿನಗಳ ಬಳಿಕ ಇಸ್ರೋ ವಿಜ್ಞಾನಿಗಳು ಪ್ರಗ್ಯಾನ್ ರೋವರ್ ಕುರಿತಾದ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್‌ನಿಂದ ಕೆಳಗಿಳಿದ ಪ್ರಗ್ಯಾನ್ ರೋವರ್ ಬಹಳ ದೊಡ್ಡ ಗಂಡಾಂತರದಿಂದ ಪಾರಾಗಿದೆ. ಅಂದ್ರೆ, ಲ್ಯಾಂಡರ್‌ನಿಂದ ಹೊರ ಬರುತ್ತಿದ್ದಂತೆ ಪ್ರಗ್ಯಾನ್ ರೋವರ್‌ಗೆ 4 ಮೀಟರ್ ಸುತ್ತಳತೆಯ ಕುಳಿ ಅಥವಾ ಗುಂಡಿಯೇ ಎದುರಾಗಿದೆ. ಪ್ರಗ್ಯಾನ್ ರೋವರ್‌ಗೆ ಎದುರಾದ ಆ ಕುಳಿಯ ಫೋಟೋವನ್ನು ಇಸ್ರೋ ಸಾಮಾಜಿಕ ಜಾಲತಾಣ Xನಲ್ಲಿ ಶೇರ್ ಮಾಡಿಕೊಂಡಿದೆ. ಒಂದು ವೇಳೆ 4 ಮೀಟರ್ ಕುಳಿಯಲ್ಲಿ ಪ್ರಗ್ಯಾನ್ ರೋವರ್ ಇಳಿದಿದ್ದರೆ ಇಸ್ರೋ ಪ್ಲಾನ್ ಸಕ್ಸಸ್ ಆಗುತ್ತಿರಲಿಲ್ಲ. ಕೊನೆಗೂ ಪ್ರಗ್ಯಾನ್ ರೋವರ್ ತನಗೆ ಎದುರಾದ ಗುಂಡಿ ಗಂಡಾಂತರದಿಂದ ಪಾರಾಗಿದೆ.

ಇದನ್ನು ಓದಿ: ವಿಕ್ರಮನಿಂದ ಒಂದೊಂದೇ ಮಾಹಿತಿಗಳ ಶೋಧ, ಅಚ್ಚರಿಯ ಸತ್ಯಗಳು.. ISRO

ಚಂದ್ರನ ಮೇಲ್ಮೈ ಮೇಲೆ ಇಳಿದ ಪ್ರಗ್ಯಾನ್ ರೋವರ್‌ ಹಾಗೇ 3 ಮೀಟರ್ ಮುಂದೆ ಸಾಗಿದೆ. ಆಗ 4 ಮೀಟರ್ ವ್ಯಾಸದ ಕುಳಿಯೊಂದು ಪತ್ತೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವರದಿ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಇಸ್ರೋ ಆಗಸ್ಟ್ 27, 2023 ರಂದು, ರೋವರ್ ತನ್ನ ಸ್ಥಳದಿಂದ 3 ಮೀಟರ್ ಮುಂದೆ 4 ಮೀಟರ್ ವ್ಯಾಸದ ಕುಳಿಯನ್ನು ಕಂಡಿತು. ರೋವರ್‌ಗೆ ಮಾರ್ಗವನ್ನು ಬದಲಿಸಲು ಆದೇಶಿಸಲಾಯಿತು. ಅದು ಈಗ ಸುರಕ್ಷಿತವಾಗಿ ಹೊಸ ಹಾದಿಯಲ್ಲಿ ಸಾಗುತ್ತಿದೆ.

ಚಂದ್ರನ ಮೇಲೆ ಗುಂಡಿ ಪತ್ತೆಯಾದ ಬಳಿಕ ಇಸ್ರೋ ತಂಡವು ರೋವರ್‌ಗೆ ಅದರ ಮಾರ್ಗವನ್ನು ಬದಲಿಸಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ದಾರಿಯಲ್ಲಿ ಸಾಗಲು ಆದೇಶಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರನ ಮೇಲೆ ಎದುರಾಗಿತ್ತು ‘ಗುಂಡಿ’ ಗಂಡಾಂತರ; ಸ್ವಲ್ಪದರಲ್ಲೇ ಪ್ರಗ್ಯಾನ್ ರೋವರ್ ಬಚಾವ್ ಆಗಿದ್ದು ಹೇಗೆ?

https://newsfirstlive.com/wp-content/uploads/2023/08/chandrayana-2-1.jpg

Load More