newsfirstkannada.com

Chandrayaan-3 : ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಭಾರತ -ಚಂದ್ರಯಾನ-3 ಉಡಾವಣೆಗೆ ಡೇಟ್​ ಫಿಕ್ಸ್​..!

Share :

29-06-2023

    ಕಳೆದ ಬಾರಿ ವಿಫಲ, ಈ ಬಾರಿ ಸಫಲವಾಗೋ ನಿರೀಕ್ಷೆ

    ಸತೀಶ್ ಧವನ್ ಸ್ಪೇಸ್ ಸೆಂಟರ್​ನಿಂದ ಉಡ್ಡಯನ

    ಇಸ್ರೋ ವಿಜ್ಞಾನಿಗಳ ಮಹತ್ವದ ಪ್ರಾಜೆಕ್ಟ್ ಚಂದ್ರಯಾನ-3

ಚಂದ್ರಯಾನ-3 (Chandrayaan-3) ಮಿಷನ್ ಲಾಂಚ್​​ಗೆ ರೆಡಿಯಿದ್ದು, ಜುಲೈ 12 ರಿಂದ 19 ರೊಳಗೆ ಆಂಧ್ರಪ್ರದೇಶದ ಶ್ರೀಹರಿಕೋಟ ಸತೀಶ್ ಧವನ್ ಸ್ಪೇಸ್ ಸೆಂಟರ್​ನಿಂದ ಉಡ್ಡಯನ ಮಾಡಲಾಗುತ್ತದೆ ಎಂದು ಇಸ್ರೋ ಮುಖ್ಯಸ್ಥ ಎಸ್​​.ಸೋಮ್ನಾಥ್ ತಿಳಿಸಿದ್ದಾರೆ.

‘ಚಂದ್ರಯಾನ’ಗೆ ಬೇಕಾಗಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಟ್ರಯಲ್ ಪರೀಕ್ಷೆಗಳು ಕೂಡ ಪೂರ್ಣಗೊಂಡಿದ್ದು, ಯಶಸ್ವಿಯಾಗಿವೆ. ಜುಲೈ 13 ರಂದು ಉಡಾವಣೆ ಮಾಡಬೇಕು ಅನ್ನೋದು ನಮ್ಮ ಗುರಿ. ಆದರೆ ಅಧಿಕೃತ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ. ಸದ್ಯದಲ್ಲೇ ಅಧಿಕೃತ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಚಂದ್ರಯಾನ -3 ಮಿಷನ್​ ಅನ್ನು Geosynchronous Launch Vehicle Mark-III ಮೂಲಕ ಚಂದ್ರನಿದ್ದಲ್ಲಿಗೆ ಕಳುಹಿಸಲಾಗುತ್ತದೆ. ಇದು ಇಂಡಿಯಾದ ಅತ್ಯಂತ ತೂಕದ ರಾಕೆಟ್ ಆಗಿದೆ. ಚಂದ್ರಯಾನ-3 ಸಕ್ಸಸ್​​ಗಾಗಿ ಇಡೀ ದೇಶವೇ ಕಾದು ಕೂತಿದೆ. ಕಳೆದ ಬಾರಿ ಚಂದ್ರಯಾನ ವಿಫಲವಾಗಿತ್ತು. ಆದರೆ ಈ ಬಾರಿ ಉಡಾವಣೆಗೂ ಮುನ್ನ ಹಲವು ಪರೀಕ್ಷೆ ನಡೆಯಲಿವೆ. ಎಲ್ಲಾ ಪರೀಕ್ಷೆ ಯಶಸ್ವಿ ನಂತರವೇ ಉಡಾವಣೆ ಮಾಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3 : ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಭಾರತ -ಚಂದ್ರಯಾನ-3 ಉಡಾವಣೆಗೆ ಡೇಟ್​ ಫಿಕ್ಸ್​..!

https://newsfirstlive.com/wp-content/uploads/2023/06/CHANDRAYAN.jpg

Load More