newsfirstkannada.com

ಚಂದಿರನಿಂದ ಭೂಮಿಗೆ ಬಂತು ಮೊದಲ ವೈಜ್ಞಾನಿಕ ಸಂದೇಶ; ಮೊದಲ ಡಾಟಾದಲ್ಲೇ ಬಂದಿದೆ ಬಿಗ್​ ಅಪ್​​ಡೇಟ್ಸ್..!

Share :

28-08-2023

  ಚಂದ್ರಯಾನದಲ್ಲಿ ಇಸ್ರೋ ವಿಜ್ಞಾನಿಗಳಿಗೆ ಮತ್ತೊಂದು ಯಶಸ್ಸು

  ಹೇಗಿದೆ ಗೊತ್ತಾ ಶಶಿಯ ಮೇಲ್ಮೈ ಉಷ್ಣಾಂಶ, ಹವಾಮಾನ?

  ದೇವಾಲಯಗಳ ಭೇಟಿಯ ಟೀಕೆ ಬಗ್ಗೆ ಇಸ್ರೋ ಮುಖ್ಯಸ್ಥರ ಉತ್ತರ

ಚಂದ್ರನ ಮೇಲೆ ಭಾರತ ಮಾಡಿರೋ ಸಾಧನೆಯನ್ನ ಪ್ರತಿಯೊಬ್ಬ ಭಾರತೀಯನೂ ಎದೆತಟ್ಟಿ ಹೇಳಿಕೊಳ್ತಿದ್ದಾನೆ. ಯಾರಿಗೂ ಪರಿಚಯವೇ ಇಲ್ಲದ ಚಂದಿರನ ಭಾಗದ ಅಧ್ಯಯನಕ್ಕೆ ಮುಂದಾಗಿರೋ ಇಸ್ರೋ ನಡೆಯನ್ನ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡ್ತಿದೆ. ಇಂಥ ಹೊತ್ತಲ್ಲಿ ಚಂದ್ರನಿಂದ ಮೊದಲ ವೈಜ್ಞಾನಿಕ ಸಂದೇಶ ಬೆಂಗಳೂರಿನಲ್ಲಿರೋ ಇಸ್ರೋ ಕಚೇರಿಗೆ ತಲುಪಿದೆ.

ಚಂದ್ರ ನಿಜಕ್ಕೂ ಕೌತುಕದ ಖಗೋಳ.. ನಿರಂತರ ಸಂಶೋಧನೆಯ ಮೂಲಕ ಸತತ ಪರಿಶ್ರಮದ ಬಳಿಕ, ಭಾರತ ಬಾಹ್ಯಾಕಾಶದಲ್ಲಿ ಹೊಸ ಹೆಜ್ಜೆ ಇರಿಸಿದೆ. ಅದರಲ್ಲೂ ಯಾವ ದೇಶವೂ ಕೈಹಾಕಿರದ, ಬಾಹ್ಯಾಕಾಶ ಸಾಧನೆಯಲ್ಲಿ ಮುಂದುವರಿದ ರಾಷ್ಟ್ರಗಳಿಗೂ ನಿಗೂಢವಾಗಿ ಉಳಿದಿರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನ ಶುರು ಮಾಡಿದೆ. ಇದೇ ಕಾರಣಕ್ಕೆ ಇಸ್ರೋನತ್ತ ಜಗತ್ತೇ ತಿರುಗಿನೋಡ್ತಿರೋದು.

ಹೇಗಿದೆ ಗೊತ್ತಾ ಶಶಿಯ ಮೇಲ್ಮೈ ಉಷ್ಣಾಂಶ?

14 ದಿನಗಳ ಕಾಲ ಶಶಿಯ ಊರಿನಲ್ಲಿ ಅಧ್ಯಯನದ ಉಳುಮೆ ಶುರು ಮಾಡಿರೋ ವಿಕ್ರಮ್​ ಲ್ಯಾಂಡರ್​ ಹಾಗೂ ಪ್ರಗ್ಯಾನ್​ ರೋವರ್ ಅಂತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಮಾಹಿತಿಗಳನ್ನ ಕಲೆಹಾಕ್ತಿದೆ. ದಕ್ಷಿಣ ಧ್ರುವದಲ್ಲಿ ಪರ್ಯಟನೆ ಶುರು ಮಾಡಿರೋ ಪ್ರಗ್ಯಾನ್ ಚಂದ್ರನ ಒಡಲಲ್ಲಿ ಅವಿತಿರುವ ಅಚ್ಚರಿಯ ಸತ್ಯಗಳನ್ನ ಜಗತ್ತಿನ ಮುಂದಿಡಲು ಶುರು ಮಾಡಿದ್ದಾನೆ. ಇದರ ಮೊದಲ ಭಾಗವಾಗಿ, ಚಂದ್ರನಿಂದ ಮೊದಲ ವೈಜ್ಞಾನಿಕ ಡಾಟಾವುಳ್ಳ ಸಂದೇಶ ಭೂಮಿಗೆ ಬಂದಾಗಿದೆ.

ಚಂದಿರನಿಂದ ಬಂದ ಮೊದಲ ಡಾಟಾ!

 • ಚಂದ್ರನ ಸರ್ಫೇಸ್ ಥರ್ಮೋ ಫಿಸಿಕಲ್ ಎಕ್ಸ್‌ಪರಿಮೆಂಟ್ ಶುರು
 • ಚಂದ್ರನ ಮೇಲ್ಮೈನಲ್ಲಿರೋ ಮಣ್ಣಿನ ತಾಪಮಾನದ ಪರೀಕ್ಷೆ
 • ಚಂದಿರನ ಮಣ್ಣಲ್ಲಿರುವ ಥರ್ಮಲ್ ಬಿಹೇವಿಯರ್​ ಪರಿಶೀಲನೆ
 • ಚಂದ್ರನ ಮೇಲ್ಮೈನಿಂದ 10 ಸೆಂ.ಮೀ. ಆಳ ಪರೀಕ್ಷಾ ಸಾಮರ್ಥ
 • 10 ಸೆಂ.ಮೀ. ಆಳ ಹೋಗುವ ಮೆಕಾನಿಸಂ ರೋವರ್‌ನಲ್ಲಿದೆ
 • 10 ಪ್ರತ್ಯೇಕ ಸೆನ್ಸಾರ್‌ಗಳ ಮೂಲಕ ಚಂದಿರನ ಅಧ್ಯಯನ
 • ತಾಪಮಾನ ವ್ಯತ್ಯಯದ ಗ್ರಾಫ್‌ ರಿಲೀಸ್ ಮಾಡಿದ ಇಸ್ರೋ

ಚಂದಿರನಿಂದ ಬಂದ ಮೊದಲ ಡಾಟಾ!

ಇಸ್ರೋ ರಿಲೀಸ್ ಮಾಡಿರೋ ಡಾಟಾದ ಅನ್ವಯ ಚಂದ್ರನ ಮೇಲ್ಮೈ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು 80 ಮಿಲಿಮೀಟರ್ ಅಥವಾ 8 ಸೆಂಟಿ ಮೀಟರ್​ ಆಳದಲ್ಲಿ -10 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ಇರಲಿದೆ. ಅದೇ ರೀತಿ 6 ಸೆಂಟಿ ಮೀಟರ್​ ಆಳದಲ್ಲಿ ಸುಮಾರು 10 ಡಿಗ್ರಿ ಸೆಲ್ಸಿಯಸ್​ ಆಸುಪಾಸಿನಲ್ಲಿ ಉಷ್ಣಾಂಶ ಇರಲಿದೆ. ಹೀಗೆ ಎಷ್ಟು ಆಳದಲ್ಲಿ ಚಂದ್ರನ ಟೆಂಪರೇಚರ್ ಎಷ್ಟಿರಲಿದೆ ಅನ್ನೋ ಅಧ್ಯಯನದ ಮಾಹಿತಿಯನ್ನ ಪ್ರಗ್ಯಾನ್-ವಿಕ್ರಮ್ ಜೋಡೆತ್ತು ಭೂಮಿಗೆ ಕಳಿಸಿಕೊಟ್ಟಿದೆ. ಇನ್ನು ಗರಿಷ್ಠ ಅಂದ್ರೆ 60 ಡಿಗ್ರಿ ಸೆಲ್ಸಿಯಸ್​ ತಾಪಮಾನ ಇರಲಿದೆ ಅಂತಾ ತಿಳಿಸಿದೆ.

ಇದಿಷ್ಟು ಅಧ್ಯಯನದ ಭಾಗವಾದ್ರೆ, ಇನ್ನೊಂದೆಡೆ ವಿಜ್ಞಾನಿಗಳ ಟೆಂಪಲ್ ರನ್ ಮುಂದುವರಿದಿದೆ. ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಕೇರಳದ ತಿರುವನಂತಪುರಂನಲ್ಲಿನ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವರ ದರ್ಶನದ ಬಳಿಕ ಮಾತನಾಡಿದ ಎಸ್.ಸೋಮನಾಥ್, ತಾವು ವಿಜ್ಞಾನ ಮತ್ತು ಅಧ್ಯಾತ್ಮ ಎರಡರ ಅನ್ವೇಷಕನೂ ಹೌದು ಎಂದಿದ್ದಾರೆ. ಅಲ್ಲದೇ ಬಾಹ್ಯಕ್ಕಾಗಿ ವಿಜ್ಞಾನ, ಅಂತರಂಗಕ್ಕಾಗಿ ದೇವಸ್ಥಾನ ಅಗತ್ಯ ಅನ್ನೋ ಸಂದೇಶ ರವಾನಿಸಿದ್ದಾರೆ.

ನಾನು ಒಬ್ಬ ಅನ್ವೇಷಕ. ನಾನು ಚಂದ್ರನ ಅನ್ವೇಷಣೆ ಮಾಡುತ್ತೇನೆ. ನಾನು ನನ್ನೊಳಗಿನ ಅನ್ವೇಕ್ಷಣೆಯನ್ನೂ ಮಾಡುತ್ತೇನೆ. ವಿಜ್ಞಾನ ಮತ್ತು ಅಧ್ಯಾತ್ಮ ಎರಡನ್ನೂ ಅನ್ವೇಷಣೆ ಮಾಡುವುದು ನನ್ನ ಬದುಕಿನ ಭಾಗವಾಗಿದೆ. ಇದಕ್ಕಾಗಿ ನಾನು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ. ನಾನು ಹಲವಾರು ಅಧ್ಯಾತ್ಮಿಕ ಕೃತಿಗಳನ್ನು ಓದಿದ್ದೇನೆ. ನಮ್ಮ ಅಸ್ತಿತ್ವದ ಅರ್ಥ ಹಾಗೂ ಈ ಬ್ರಹ್ಮಾಂಡದಲ್ಲಿನ ನಮ್ಮ ಪ್ರಯಾಣದ ಅರ್ಥ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹೀಗಾಗಿ ಇದು ನಾವು ಅನ್ವೇಷಿಸಲು, ನಮ್ಮ ಒಳಗಿನ ಹಾಗೂ ಹೊರಗನ್ನು ಕೂಡ ಅರಿಯಲು ನಿರ್ಮಿಸಿದ ಸಂಸ್ಕೃತಿಯ ಭಾಗವಾಗಿದೆ. ಬಾಹ್ಯ ಅನ್ವೇಷಣೆಗಾಗಿ ನಾನು ವಿಜ್ಞಾನವನ್ನು ಅನುಸರಿಸುತ್ತೇನೆ. ನನ್ನೊಳಗಿನ ಅನ್ವೇಷಣೆಗಾಗಿ ದೇವಸ್ಥಾನಗಳಿಗೆ ಬರುತ್ತೇನೆ- ಎಸ್.ಸೋಮನಾಥ್, ಇಸ್ರೋ ಅಧ್ಯಕ್ಷ

ನನ್ನೊಳಗಿನ ಶಕ್ತಿಗೆ ಆಧ್ಯಾತ್ಮ. ನನ್ನ ಹೊರಗಿನ ಶಕ್ತಿಗೆ ವಿಜ್ಞಾನ ಅನುಸರಿಸ್ತೀನಿ ಅಂತಾ ಹೇಳಿದ್ದಾರೆ. ಅಲ್ಲದೇ ದೇಗುಲಗಳ ಭೇಟಿಯ ತಮ್ಮ ಪಯಣ ಮುಂದುವರಿಯೋ ಸೂಚನೆಯನ್ನೂ ನೀಡಿದ್ದಾರೆ. ಇದರ ಜೊತೆಗೆ ಇಸ್ರೋದ ಮೂಲಕ ಮುಂದಿನ ಬಾಹ್ಯಾಕಾಶ ಮಿಷನ್​ಗಳಿಗೂ ಸಿದ್ಧತೆ ಶುರು ಮಾಡಿದ್ದಾರೆ. ಸೋ ಭಾರತದ ಬಾಹ್ಯಾಕಾಶದ ಗೇಮ್ ಶುರುವಾಗಿದೆ. ರೇಸ್​ನಲ್ಲಿ ಎಲ್ಲಾ ದೇಶಗಳಿಂದ ಮುಂಚೂಣಿಯಲ್ಲಿ ಮುನ್ನುಗ್ಗುತ್ತಿರೋ ಇಂಡಿಯಾ ಮತ್ತಷ್ಟು ಮಹಾತ್ವಾಕಾಂಕ್ಷೆಯ ಯೋಜನೆಗಳನ್ನ ಹಾಕಿಕೊಂಡಿದೆ. ಇದೇ ಸೆಪ್ಟೆಂಬರ್​ ಮೊದಲ ವಾರದಲ್ಲಿ ಸೂರ್ಯನತ್ತ ಆದಿತ್ಯ ಎಲ್​1 ಉಡಾವಣೆಗೆ ತಯಾರಿ ನಡೀತಿದೆ. ಮಂಗಳ, ಶುಕ್ರ ಗ್ರಹಕ್ಕೂ ಪಯಣ ಬೆಳೆಸೋ ಯೋಜನೆ ಇಸ್ರೋ ಮುಂದಿದೆ. ಹೀಗಾಗಿ ಶರವೇಗದಲ್ಲಿ ಮುನ್ನುಗ್ತಿರೋ ಭಾರತ ಇನ್ನಷ್ಟು ಸಾಧನೆ ಮಾಡೋ ದಿನಗಳು ದೂರವೇನಿಲ್ಲ..

ವಿಶೇಷ ವರದಿ: ಪ್ರಿಯತೋಷ್ ಅಗ್ನಿಹಂಸ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದಿರನಿಂದ ಭೂಮಿಗೆ ಬಂತು ಮೊದಲ ವೈಜ್ಞಾನಿಕ ಸಂದೇಶ; ಮೊದಲ ಡಾಟಾದಲ್ಲೇ ಬಂದಿದೆ ಬಿಗ್​ ಅಪ್​​ಡೇಟ್ಸ್..!

https://newsfirstlive.com/wp-content/uploads/2023/08/ISRO-2-3.jpg

Load More