newsfirstkannada.com

BREAKING: HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ.. ಕೆಲವೇ ಕ್ಷಣಗಳಲ್ಲಿ ಇಸ್ರೋಗೆ ಭೇಟಿ

Share :

26-08-2023

    ಇಸ್ರೋ ಕೇಂದ್ರದ ಮುಂದೆ ಭಾರೀ ಪೊಲೀಸ್ ಬಿಗಿ ಭದ್ರತೆ

    7 ಗಂಟೆಗೆ ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಲಿರೋ PM

    ಪ್ರಧಾನಿ ಭೇಟಿಗೆ ಇಸ್ರೋ ಕೇಂದ್ರದೊಳಗೆ ಸಕಲ ಸಿದ್ಧತೆ

ಬೆಂಗಳೂರು: ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ರ ಲ್ಯಾಂಡರ್​ ವಿಕ್ರಮ ಅನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್​ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿಯವರು ದಕ್ಷಿಣ ಆಫ್ರಿಕಾದಿಂದ ನೇರ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

​ಪ್ರಧಾನಿ ಮೋದಿಯವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಇಸ್ರೋ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಚಂದ್ರಯಾನ-3 ರ ಲ್ಯಾಂಡರ್​ ವಿಕ್ರಮ ಚಂದ್ರನ ದಕ್ಷಣ ಧ್ರುವದ ಮೇಲೆ ಲ್ಯಾಂಡ್ ಆಗುವ ವೇಳೆ ಪ್ರಧಾನಿಯವರು ವಿದೇಶ ಪ್ರವಾಸದಲ್ಲಿರು. ಹೀಗಾಗಿ ದಕ್ಷಿಣ ಆಫ್ರಿಕಾದಿಂದಲೇ ವಿಕ್ರಮ ಲ್ಯಾಂಡ್ ಆಗುವ ಕ್ಷಣಗಳನ್ನು ಕಣ್ಣು ತುಂಬಿಕೊಂಡಿದ್ದರು. ಅಲ್ಲದೇ ಇದು ಸಕ್ಸಸ್ ಆಗುತ್ತಿದ್ದಂತೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಪೋನ್ ಕರೆ ಮಾಡಿ ಅಭಿನಂದನೆ ತಿಳಿಸಿದ್ದರು.

ಇನ್ನು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದೇನೆ ಎಂದು ಸ್ವತಹ ಪ್ರಧಾನಿ ಮೋದಿಯವರೇ ಎಕ್ಸ್​ನಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡಿದ್ದಾರೆ. ಭಾರತದ ಹೆಮ್ಮೆಯ ಚಂದ್ರಯಾನ-3ರ ಸಕ್ಸಸ್ ಯಾವ ರೀತಿ ಇತ್ತು. ಅದನ್ನು ಹೇಗೆ ಸಾಧ್ಯವಾಯಿತು ಎಂದು ಇಸ್ರೋ ವಿಜ್ಞಾನಿಗಳ ಜೊತೆ ಸಮಲೋಚನೆ ನಡೆಸಿ ಅವರನ್ನು ಅಭಿನಂದಿಸಲಾಗುವುದು. ಇದು ಬಾಹ್ಯಾಕಾಶದಲ್ಲಿ ಭಾರತದ ಮಹತ್ತರ ಸಾಧನೆ ಎಂದು ಮೋದಿಯವರು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಈಗಾಗಲೇ HAL ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಪ್ರಧಾನಿ ಮೋದಿಯವರು ಅಲ್ಲಿಂದ ಪೀಣ್ಯದಲ್ಲಿರುವ ಇಸ್ರೋ ಸಂಸ್ಥೆಗೆ ತೆರಳಲಿದ್ದಾರೆ. ಇದಕ್ಕಾಗಿ ವಿಮಾನನಿಲ್ದಾಣದ ಗೇಟ್​ ನಂಬರ್​ 30ರ ಬಳಿ ಬಿಗಿ ಪೊಲೀಸ್ ಬಂದೋಬಸ್ತ್​ ಒದಗಿಸಲಾಗಿದೆ. ಅಲ್ಲದೇ ಮೋದಿ ತೆರಳುವ ನಗರದ ಮಾರ್ಗಗಳಲ್ಲಿ ಕೂಡ ಪೊಲೀಸರು ಭದ್ರತೆಯನ್ನು ನೀಡಿದ್ದಾರೆ.

ಇಷ್ಟೇ ಅಲ್ಲದೇ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಸಾಕಷ್ಟು ಜನರು ವಿಮಾನ ನಿಲ್ದಾಣದ ಹೊರಗಡೆ ರಾಷ್ಟ್ರಧ್ವಜ ಹಿಡಿದುಕೊಂಡು ಕಾದು ನಿಂತಿದ್ದಾರೆ. ಮಹಿಳೆಯರು, ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದು ಘೋಷಣೆ ಕೂಡ ಕೂಗುತ್ತಿದ್ದಾರೆ.

ಪ್ರಧಾನಿ ಮೋದಿ ಆಗಮಿಸುತ್ತಿದ್ದರಿಂದ ಇಸ್ರೋ ವಿಜ್ಞಾನಿಗಳು, ಸಿಬ್ಬಂದಿ ವರ್ಗ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಒಂದು ಗಂಟೆ ಕಾಲ ಇಸ್ರೋ ಕೇಂದ್ರದಲ್ಲಿರುವ ಅವರು ಅಧ್ಯಕ್ಷ ಎಸ್ ಸೋಮನಾಥ್ ಸೇರಿದಂತೆ ಹಿರಿಯ ವಿಜ್ಞಾನಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಚಂದ್ರಯಾನ- 3 ಸಕ್ಸಸ್​ಗೆ ಶುಭ ಕೋರಲಿದ್ದಾರೆ.

ಪ್ರಧಾನಿಗಳು ಇಸ್ರೋಗೆ ಭೇಟಿ ಹಿನ್ನೆಲೆಯಲ್ಲಿ ಇಸ್ರೋ ಕೇಂದ್ರದ ಸುತ್ತಲೂ ಭಾರೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಇಸ್ರೋ ಕೇಂದ್ರದ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನಗಳ ಓಡಾಟವನ್ನು ನಿಷೇಧ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ.. ಕೆಲವೇ ಕ್ಷಣಗಳಲ್ಲಿ ಇಸ್ರೋಗೆ ಭೇಟಿ

https://newsfirstlive.com/wp-content/uploads/2023/08/MODI-4-1.jpg

Load More