newsfirstkannada.com

5ನೇ ಕಕ್ಷೆಯನ್ನು ಪೂರ್ಣಗೊಳಿಸಿದ ಚಂದ್ರಯಾನ- 3; ಹೊಸ ಫೋಟೋ ರಿಲೀಸ್ ಮಾಡಿದ ISRO ಬಿಗ್ ಅಪ್‌ಡೇಟ್‌

Share :

25-07-2023

    ಆಗಸದಲ್ಲಿ ಇನ್ನು ಪ್ರಯಾಣ ಮಾಡುತ್ತಿರುವ ಸ್ಪೇಸ್​ ಕ್ರಾಫ್ಟ್​

    ಜುಲೈ 14 ರಂದು ಇಸ್ರೋದಿಂದ ಚಂದ್ರಯಾನ- 3 ಉಡಾವಣೆ

    ಚಂದ್ರನ ದಕ್ಷಿಣ ಧ್ರುವದಲ್ಲಿ ಆಗಸ್ಟ್​ 23 ರಂದು ಚಂದ್ರಯಾನ ಲ್ಯಾಂಡ್

ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಜುಲೈ 14 ರಂದು ಭೂಮಿಯಿಂದ ಚಂದ್ರನೆಡೆಗೆ ಚಂದ್ರಯಾನ- 3 ಮಿಷನನ್ನು ಉಡಾವಣೆ ಮಾಡಿತ್ತು. ಈ ಮಿಷನ್​ ಇನ್ನು ಚಂದ್ರನ ಕಡೆಗೆ ಪ್ರಯಾಣ ಮಾಡುತ್ತಿದೆ. ಈ ಬಗ್ಗೆ ಇಸ್ರೋ ಸಂಸ್ಥೆ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮಿಷನ್ ಪ್ರಯಾಣದ ಬಗ್ಗೆ ಅಪ್​ಡೇಟ್ ಅನ್ನು ಶೇರ್ ಮಾಡಿದೆ.

ಭೂಮಿಯಿಂದ ಸ್ಪೇಸ್​ಕ್ರಾಫ್ಟ್​ ತನ್ನ 5ನೇ ಮತ್ತು ಅಂತಿಮ ಕಕ್ಷೆಯನ್ನು ಪೂರ್ಣಗೊಳಿಸಿದೆ. ಇನ್ನೇನಿದ್ದರೂ ಮುಂದಿನ ಹಂತವು ಭೂಮಿಯಿಂದ ಚಂದ್ರನ ಪಥಕ್ಕೆ ಬದಲಾಗುವುದು. ಅಲ್ಲಿ ಚಂದ್ರನ ಗುರುತ್ವಾಕರ್ಷಣೆಯು ಅಂತಿಮವಾಗಿ ಅದನ್ನು ಚಂದ್ರನ ಕಕ್ಷೆಯ ಎಡೆಗೆ ಎಳೆಯುತ್ತದೆ. ನಂತರ ಕೊನೆಯದಾಗಿ ಚಂದ್ರನ ಮೇಲ್ಮೈನಲ್ಲಿ ಬಾಹ್ಯಾಕಾಶ ನೌಕೆ ಲಾಂಡ್ ಆಗುತ್ತದೆ. ಇದಕ್ಕೆ ಇನ್ನಷ್ಟು ದಿನಗಳು ಬೇಕಾಗಲಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಇಸ್ರೋ ತಿಳಿಸಿದೆ.

ಸ್ಪೇಸ್​ಕ್ರಾಫ್ಟ್​ ಯಾವುದೇ ಸಮಸ್ಯೆ ಇಲ್ಲದೇ ಪ್ರಯಾಣ ಮಾಡುತ್ತಿದ್ದು ಬೆಂಗಳೂರಿನಲ್ಲಿನ ISTRAC/ISRO ಮಿಷನ್ ಅನ್ನು ಕಕ್ಷೆಯಿಂದ ಇನ್ನೊಂದು ಕಕ್ಷೆಗೆ (Earth-bound perigee firing) ಸಾಗಿಸುವ ಕಾರ್ಯ ಯಶಸ್ವಿಯಾಗಿ ನಡೆಸಿದೆ. ಸ್ಪೇಸ್​ಕ್ರಾಫ್ಟ್ 1,27,609 ಕಿ.ಮೀ x 236 ಕಿ.ಮೀ ಕಕ್ಷೆ ತಲುಪುವ ನಿರೀಕ್ಷೆಯಲ್ಲಿದೆ. ಮುಂದಿನ ಫೈರಿಂಗ್, ಟ್ರಾನ್ಸ್‌ಲೂನಾರ್ ಇಂಜೆಕ್ಷನ್ (TLI) ಅನ್ನು ಆಗಸ್ಟ್ 1 ರಂದು ಮಧ್ಯರಾತ್ರಿ 12 ಮತ್ತು ಬೆಳಿಗ್ಗೆ 1 ಗಂಟೆಯ ನಡುವೆ ಯೋಜಿಸಲಾಗಿದೆ. ಈ ಬಗ್ಗೆ ವೀಕ್ಷಣೆ ಮಾಡಲಾಗುತ್ತಿದ್ದು ಮುಂದಿನ ಅಪ್​ಡೇಟ್ ಅನ್ನು ಶೀಘ್ರವೇ ತಿಳಿಸಲಾಗುವುದು ಎಂದು ಇಸ್ರೋ ಸಂಸ್ಥೆ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5ನೇ ಕಕ್ಷೆಯನ್ನು ಪೂರ್ಣಗೊಳಿಸಿದ ಚಂದ್ರಯಾನ- 3; ಹೊಸ ಫೋಟೋ ರಿಲೀಸ್ ಮಾಡಿದ ISRO ಬಿಗ್ ಅಪ್‌ಡೇಟ್‌

https://newsfirstlive.com/wp-content/uploads/2023/07/CHANDRAYAANA_3_UPDATE.jpg

Load More