newsfirstkannada.com

ಚಂದ್ರಯಾನ-3 ಯಶಸ್ಸಿಗೆ ಇಡೀ ವಿಶ್ವವೇ ಸಲಾಂ.. ಲೂನಾ-25 ಕಳುಹಿಸಿ ಫೇಲ್ ಆಗಿದ್ದ ರಷ್ಯಾ ಭಾರತದ ಬಗ್ಗೆ ಹೇಳಿದ್ದೇನು..?

Share :

24-08-2023

  ಭಾರತಕ್ಕೆ ಹರಿದು ಬರ್ತಿದೆ ಅಭಿನಂದನೆಗಳ ಮಹಾಪೂರ

  ಭಾರತಕ್ಕೆ ಅಭಿನಂದನೆ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

  ಇಸ್ರೋ ಸಾಧನೆ ಕೊಂಡಾಡಿದ ಬ್ರಿಟನ್​ ಬಾಹ್ಯಾಕಾಶ ಸಂಸ್ಥೆ

ಚಂದ್ರನ ಅಂಗಳದಲ್ಲಿ ವಿಕ್ರಮ ತ್ರಿವಿಕ್ರಮ ಮೆರೆದಿದೆ. ಶಶಿಯ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ವಿಕ್ರಮ್​ ಲ್ಯಾಂಡರ್​​ ಇಡೀ ಜಗತ್ತಿನ ಗಮನ ಸೆಳೆದಿದೆ. ಭಾರತದ ಈ ಐತಿಹಾಸಿಕ ಸಾಧನೆಗೆ ಎಲ್ಲೆಡೆ ಅಭಿನಂದನಯ ಮಹಾಪೂರವೇ ಹರಿದು ಬರ್ತಿದೆ. ಬಲಿಷ್ಟ ರಾಷ್ಟ್ರಗಳು ಸಲಾಂ ಹೊಡೆದಿವೆ.

ಶತಕೋಟಿ ಭಾರತೀಯರ ಪ್ರಾರ್ಥನೆ ಫಲಿಸಿದೆ. ಇಸ್ರೋ ಕಂಡ ಕನಸು ನನಸಾಗಿದೆ. ವಿಕ್ರಮ್​ ಲ್ಯಾಂಡರ್​​ ಚಂದ್ರಮನ ಚುಂಬನ ಮಾಡಿದೆ. ಚಂದ್ರಯಾನ -3 ಬಿಗ್​ ಸಕ್ಸಸ್​ ಕಂಡಿದೆ. ಬಾಹಾಕ್ಯಾಶ ಸಂಶೋಧನೆಯಲ್ಲಿ ಇಸ್ರೋ ಹೊಸ ಚರಿತ್ರೆಯನ್ನೇ ಸೃಷ್ಟಿಸಿದೆ. ಬಲಿಷ್ಠ ರಾಷ್ಟ್ರಗಳೇ ಎಂಟ್ರಿಕೊಡೋಕೆ ಆಗದ ಚಂದಿರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್​ ಆಗಿ ಇತಿಹಾಸ ಸೃಷ್ಟಿಸಿದೆ.

ಭಾರತದ ಐತಿಹಾಸಿಕ ಸಾಧನೆಗೆ ಇಡೀ ವಿಶ್ವವೇ ಸಲಾಂ

ಚಂದಿರನ ದಕ್ಷಿಣ ಧೃವದಲ್ಲಿ ವಿಕ್ರಮ್​​​ ಲ್ಯಾಂಡರ್​​​ ಕಾಲಿಟ್ಟಿದ್ದೇ ತಡ ಇಡೀ ಜಗತ್ತೇ ನಿಬ್ಬೆರಗಾಗಿದೆ. ಭಾರತದ ಈ ಐತಿಹಾಸಿಕ ಸಾಧನೆಗೆ ಭೇಷ್​​ ಎಂದಿದೆ. ಬಲಿಷ್ಟ ರಾಷ್ಟ್ರಗಳು ವಿಕ್ರಮನ ಪಾರಕ್ರಮಕ್ಕೆ ಸೆಲ್ಯೂಟ್​ ಹೊಡೆದಿವೆ. ಭಾರತಕ್ಕೆ ಅಭಿನಂದನೆಗಳ ಮಹಾಪೂರವನ್ನೇ ಹರಿಸ್ತಿವೆ.

ಭಾರತಕ್ಕೆ ಅಭಿನಂದನೆ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್​

ಮೊನ್ನೆಯಷ್ಟೇ ರಷ್ಯಾದ ಚಂದ್ರಯಾನ ವಿಫಲವಾಗಿತ್ತು. ಚಂದಿರನ ದಕ್ಷಿಣ ಧೃವದಲ್ಲಿ ಲ್ಯಾಂಡ್​ ಆಗಲು ಹೋದ ರಷ್ಯಾದ ಲೂನಾ-25 ನೌಕೆ ಪತನಗೊಂಡಿತ್ತು. ಆದ್ರೆ ಬಲಿಷ್ಠ ರಷ್ಯಾ ಕೈಯಲ್ಲೂ ಸಾಧ್ಯವಾಗದ್ದನ್ನ ಭಾರತ ಮಾಡಿ ತೋರಿಸಿದೆ. ಭಾರತದ ಈ ಸಾಧನಗೆ ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಸೆಲ್ಯೂಟ್​​ ಹೊಡೆದಿದ್ದಾರೆ. ಪ್ರಧಾನಿ ಮೋದಿಗೆ ಪುಟಿನ್​ ನಿಮ್ಮ ಈ ಸಾಧನೆಗೆ ನನ್ನ ಹೃದಯಪೂರ್ವ ಅಭಿನಂದನೆಗಳು ಎಂಬ ಸಂದೇಶವನ್ನ ರವಾನಿಸಿದ್ದಾರೆ.

ವಿಕ್ರಮನ ತ್ರಿವಿಕ್ರಮಕ್ಕೆ ಅಭಿನಂದನೆ ಸಲ್ಲಿಸಿದ ನಾಸಾ

ಚಂದ್ರಯಾನ-3 ಯಶಸ್ವಿಗೆ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಮಾರುಹೋಗಿದೆ. ನಾಸಾ ಆಡಳಿತಾಧಿಕಾರಿ ಬಿಲ್ ನಲ್ಸೆನ್ ಟ್ವೀಟ್ ಮಾಡಿ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ನಿಮ್ಮ ಪಾಲುದಾರರಾಗಲು ನಮಗೆ ಸಂತೋಷವಿದೆ ಅಂತಾ ಸಂತಸ ವ್ಯಕ್ತಪಡಿಸಿದ್ದಾರೆ.

ಇಸ್ರೋದ ಈ ಐತಿಹಾಸಿಕ ಸಾಧನೆಯನ್ನ ಬ್ರಿಟನ್​​ ಬಾಹಾಕ್ಯಾಶ ಸಂಸ್ಥೆ ಕೊಂಡಾಡಿದೆ. ಭಾರತದ ಚಂದ್ರಯಾನ – 3 ಇತಿಹಾಸ ನಿರ್ಮಿಸಿದೆ. ಅಭಿನಂದನೆ ಇಸ್ರೋ ಅಂತಾ ಟ್ವೀಟ್​​ ಮಾಡಿ ಸಂತಸ ವ್ಯಪಡಿಸಿದೆ.

ಭಾರತಕ್ಕೆ ಅಭಿನಂದನೆ ಸಲ್ಲಿಸಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ

ಭಾರತದ ಚಂದ್ರಯಾನ-3 ಯಶಸ್ವಿಗೆ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸೈರಿಲ್​ ರಾಮಫೋಸ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯ ಬ್ರಿಕ್ಸ್​​ ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಸೈರಿಲ್​ ರಾಮಫೋಸ ಭಾರತದ ಚಂದ್ರಯಾನ-3 ಸಕ್ಸಸ್​ ದೊಡ್ಡ ಸಾಧನೆ. ಇದು ಬ್ರಿಕ್ಸ್​ ಶೃಂಗಸಭೆಯ ಮಹತ್ವಪೂರ್ಣ ಸಮಯ ಅಂತಾ ಬಣ್ಣಿಸಿದ್ದಾರೆ.

ಚಂದ್ರಯಾನ-3 ಸಕ್ಸಸ್​.. ಜೊಹಾನ್ಸ್​ಬರ್ಗ್​​ನಲ್ಲಿ ಸಂಭ್ರಮಾಚರಣೆ

ಚಂದ್ರಯಾನ- 3 ಸಕ್ಸಸ್​​ ಆಗುತ್ತಿದ್ದಂತೆ ಜೋಹಾನ್ಸ್​ಬರ್ಗ್​​ನಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಜೊಹಾನ್ಸ್​ಬರ್ಗ್​​ನಲ್ಲಿ ನೆರೆದಿದ್ದ ಭಾರತೀಯರು ಪ್ರಧಾನಿ ಮೋದಿಗೆ ಶುಭಾಶಯ ತಿಳಿಸಿದ್ರು. ನಮೋಗೆ ಶೇಕ್​ಹ್ಯಾಂಡ್​ ಕೊಟ್ಟು ಸೆಲ್ಫಿ ತೆಗೆದುಕೊಂಡು ಸಂಸತ ಪಟ್ಟರು.
ಒಟ್ಟಾರೆ ಭಾರತದ ಈ ಐತಿಹಾಸಿಕ ಸಾಧನೆಗೆ ದೇಶ, ವಿದೇಶಗಳಿಂದ ಅಭಿನಂದನೆಯ ಮಹಾಪೂರವೇ ಹರಿದು ಬರ್ತಿದೆ. ಮಾಲ್ಡ್​ವೀಸ್​, ಶ್ರೀಲಂಕಾ ಪ್ರಧಾನಿಗಳೂ ಕೂಡ ಭಾರತಕ್ಕೆ ವಿಶ್​ ಮಾಡಿದ್ದಾರೆ. ಸದ್ಯ ಚಂದ್ರಯಾನ-3 ಸಕ್ಸಸ್ ಆಗಿದ್ದು ಮುಂದೆ ಸೂರ್ಯಯಾನದಲ್ಲೂ ಭಾರತ ತ್ರಿವಿಕ್ರಮ ಮೆರೆಯಲಿ ಅನ್ನೋದೇ ಶತಕೋಟಿ ಭಾರತೀಯರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಯಶಸ್ಸಿಗೆ ಇಡೀ ವಿಶ್ವವೇ ಸಲಾಂ.. ಲೂನಾ-25 ಕಳುಹಿಸಿ ಫೇಲ್ ಆಗಿದ್ದ ರಷ್ಯಾ ಭಾರತದ ಬಗ್ಗೆ ಹೇಳಿದ್ದೇನು..?

https://newsfirstlive.com/wp-content/uploads/2023/08/Chandrayana-3-6.jpg

Load More