‘ಚಂದ್ರಯಾನ-3’ ಪ್ರಾಜೆಕ್ಟ್ನಲ್ಲಿ ಇಸ್ರೋಗೆ ಇವತ್ತು ಮಹತ್ವದ ಕೆಲಸ
ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಲ್ಯಾಂಡರ್ ವಿಕ್ರಂ ಬೇರ್ಪಡಿಸಲಿದ್ದಾರೆ
ಬೇರ್ಪಡಿಸುವ ಕಾರ್ಯ ಯಶಸ್ವಿಯಾದ್ರೆ ಇಸ್ರೋದಿಂದ ಮತ್ತೊಂದು ಮೈಲಿಗಲ್ಲು
ಚಂದ್ರಯಾನ 3 ನೌಕೆ ಚಂದ್ರನ ಐದನೇ ಹಾಗೂ ಕೊನೆಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ಮಾತ್ರವಲ್ಲದೇ ಇಂದು ಚಂದ್ರನ ಸುತ್ತ ಸುತ್ತುತ್ತಿರುವ ನೌಕೆಯಿಂದ ಲ್ಯಾಂಡರ್ ಮತ್ತು ರೋವರ್ ಪ್ರತ್ಯೇಕವಾಗಲಿದೆ. ಬಳಿಕ ಎರಡೂ ಪ್ರತ್ಯೇಕ ಪ್ರಯಾಣ ನಡೆಸಲಿವೆ. ಈ ಮೂಲಕ ಆಗಸ್ಟ್ 23ರಂದು ಚಂದ್ರನ ಕಕ್ಷೆಯ ಮೇಲೆ ಇಳಿಯಲು ದಿನಗಣನೆ ಆರಂಭವಾಗಿದೆ.
ಚಂದ್ರಯಾನ-3 ಕಡಿಮೆ ವೇಗದಲ್ಲಿ ನೌಕೆಯನ್ನು ಕೊಂಡೊಯ್ಯುವ ಮೂಲಕ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ. ನೌಕೆಯಿಂದ ಲ್ಯಾಂಡರ್ ಅನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿಕ್ಕಿದ್ದು, ಚಂದನಿಗೆ ಮತ್ತಷ್ಟು ಹತ್ತಿರವಾಗಲಿದೆ. ಅಂದಹಾಗೆಯೇ, ಸದ್ಯ 100×30 ಕಿ.ಮೀ ವೃತ್ತದಲ್ಲಿ ಆರ್ಬಿಟ್ ಸುತ್ತಲಿದೆ. ಹೀಗೆ ಸುತ್ತುತ್ತಾ ಚಂದ್ರನಿಗೆ ಮತ್ತಷ್ಟು ಹತ್ತಿರವಾಗಲಿದೆ. ಅಂದರೆ ಆರ್ಬಿಟ್ 100×30 ಕಿ.ಮೀ ಅಂತರಕ್ಕೆ ತಲುಪಲಿದೆ. ಆರು ದಿನಗಳ ನಂತರ ಚಂದ್ರನ ಬಳಿ ಯಶಸ್ವಿಯಾಗಿ ಲ್ಯಾಂಡ್ ಆಗಲಿದೆ.
ಕಳೆದ ಜುಲೈ 14ರಂದು ಉಡಾವಣೆಯಾಗಿದ್ದ ಚಂದ್ರಯಾನ-3 ತನ್ನ ಯಶಸ್ವಿ ಪ್ರಯಾಣವನ್ನು ಮುಂದುವರಿಸಿದೆ. ಆಗಸ್ಟ್ 5ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಚಂದ್ರಯಾನ 3 ಇಂದು ಚಂದ್ರನ 5ನೇ ಹಾಗೂ ಅಂತಿಮ ಕಕ್ಷೆಯನ್ನು ಪ್ರವೇಶಿಸಿದೆ. ನಾಳೆ ಲ್ಯಾಂಡಲ್ ಮಾಡ್ಯೂಲ್‌ನಿಂದ ಪ್ರೊಪಲ್ಟನ್ ಮಾಡ್ಯೂಲ್ ಅನ್ನು ಪ್ರತ್ಯೇಕಿಸಲಾಗುತ್ತಿದೆ. ಎಲ್ಲಾ ಅಂದುಕೊಂಡತೆ ಆದರೆ ಇದೇ ಆಗಸ್ಟ್ 23ರಂದು ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ಅಂದು ಚಂದ್ರನ ಮೇಲ್ಮಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಯೋಜನೆ ತಯಾರಾಗಿದೆ.
ಆಗಸ್ಟ್ 23ರಂದು ಚಂದ್ರಯಾನ-3ನಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಿದ್ರೆ ಇಸ್ರೋ ಹೊಸದೊಂದು ಇತಿಹಾಸ ಬರೆಯಲಿದೆ. ಅಮೆರಿಕಾ, ರಷ್ಯಾ, ಚೀನಾದ ಈ ಸಾಧನೆ ಮಾಡಿದ 4ನೇ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ