newsfirstkannada.com

ಪ್ರಗ್ಯಾನ್ ಅಸಲಿ ಆಟಕ್ಕೆ ಹತ್ತೇ ದಿನ ಬಾಕಿ; ಚಂದ್ರನ ಅಂಗಳದಲ್ಲಿ ಮುಖಾಮುಖಿ ಆಗುತ್ತಾ ಚೀನಾ, ಭಾರತ?

Share :

29-08-2023

    ಶಶಿಯ ಶಿಖರದಲ್ಲೂ ಭಾರತದ ಮೇಲೆ ಚೀನಾ ಕಣ್ಣು

    ಪ್ರಗ್ಯಾನ್​​ ಜೊತೆ ಚೀನಾದ U2 2 ರೋವರ್ ಸಕ್ರಿಯ

    ಸಂಚಲನ ಸೃಷ್ಟಿಸಿದ ನಂಬಿ ನಾರಾಯಣನ್ ಹೇಳಿಕೆ

ಶಶಿಯ ಅಂಗಳದಲ್ಲಿ ಅಸಲಿ ಆಟ ಆರಂಭಿಸಿರೋ ಭಾರತದ ತ್ರಿವಿಕ್ರಮನಿಗೆ ಇನ್ನು 10 ದಿನಗಳ ಅವಧಿ ಮಾತ್ರ ಬಾಕಿ ಇದೆ. ರಾಮೇಶ್ವರಕ್ಕೆ ಹೋದ್ರೂ ಶನೇಶ್ವರನ ಕಾಟ ತಪ್ಪಲಿಲ್ಲ ಅನ್ನೋ ಹಾಗೆ ಶಶಿಯ ಶಿಖರದಲ್ಲೂ ಭಾರತದ ಮೇಲೆ ಚೀನಾದ ಬೇಹುಗಾರಿಕೆ ನಡೆದಿದೆ. 2019ರಲ್ಲಿ ಚಂದ್ರನ ಮಡಿಲು ಸೇರಿದ್ದ ಚೀನಾದ ರೋವರ್,​ ಭಾರತದ ​ ಮೇಲೆ ತನ್ನ ದೃಷ್ಟಿನೆಟ್ಟಿದೆ.

ಚಂದ್ರಯಾನ 3ರ ಮೂಲಕ ಭವ್ಯ ಭಾರತದ ಹಿರಿಮೆಗೆ ಸಾಧನೆಯ ಗರಿಮೆ ತೊಡಿಸಿದ್ದ ಇಸ್ರೋ ಶಶಿಯ ಸತ್ಯಾನ್ವೇಷಣೆಯನ್ನ ನಡೆಸುತ್ತಿದೆ. ಇಡೀ ಜಗತ್ತನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಚಂದ್ರನಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಹಿಮಕರನ ದಕ್ಷಿಣ ಧ್ರುವಕ್ಕೆ ಪಾದಾರ್ಪಣೆ ಮಾಡಿ ಪರ್ಯಟನೆ ಆರಂಭಿಸಿರುವ ವಿಕ್ರಮ್​ ಲ್ಯಾಂಡರ್​ ಶಶಿಯ ಕೌತುಕಗಳನ್ನ ಕೆದಕುತ್ತಿದೆ. ತ್ರಿವಿಕ್ರಮನಿಗೆ ಜೊತೆಯಾಗಿ ಚಂದ್ರನ ಮೇಲ್ಮೈನಲ್ಲಿ ಸಂಚಾರ ನಡೆಸುತ್ತಿರೋ ಪ್ರಗ್ಯಾನ್​ ರೋವರ್,​ ಹಿಮಕರನ ಒಡಲಿನ ಸತ್ಯಗಳನ್ನ ಇಸ್ರೋ ಮುಂದೆ ಅಚ್ಚೊತ್ತುವ ಕೆಲಸ ಮಾಡ್ತಿದೆ.

ಚಂದ್ರನಂಗಳದಲ್ಲಿ ತ್ರಿ‘ವಿಕ್ರಮ’ನ ದಶ ದಿನದ ದರ್ಬಾರ್​​!

ಹಿಮಕರನ ಮಡಿಲಿನಲ್ಲಿ ಸಂಶೋಧನೆಗಿಳಿದಿರೋ ಪ್ರಗ್ಯಾನ್​ ರೋವರ್​ಗೆ ಇನ್ನು 10 ದಿನಗಳ ಕಾಲಾವಕಾಶ ಮಾತ್ರ ಬಾಕಿ ಇದೆ. ಬಳಿಕ ಚಂದ್ರನಲ್ಲಿ ಕತ್ತಲು ಆವರಿಸೋದ್ರಿಂದ ಸಂಶೋಧನಾ ಕಾರ್ಯಕ್ಕೆ ಬ್ರೇಕ್​ ಬೀಳಲಿದೆ. ವಿಕ್ರಮ್​ ಲ್ಯಾಂಡರ್​ ಹಾಗೂ ಪ್ರಗ್ಯಾನ್​ ರೋವರ್​ ಕಾರ್ಯ ನಿರ್ವಹಿಸಲು ಸೂರ್ಯನ ಬೆಳಕು ಅತಿಮುಖ್ಯವಾಗಿದೆ. ಸೋಲಾರ್​ ಪ್ಲೇಟ್​ಗಳ ಸಹಾಯದಿಂದಲೇ ವಿಕ್ರಮ್​ ಮತ್ತು ಪ್ರಗ್ಯಾನ್​ ಕಾರ್ಯನಿರ್ವಹಿಸೋದ್ರಿಂದ, ಮುಂದಿನ 10 ದಿನಗಳವರೆಗೆ ಮಾತ್ರ ಇದು ಸಾಧ್ಯೆವಾಗಲಿದೆ. ಬಳಿಕ ಚಂದ್ರನಲ್ಲಿ -200 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ತಾಪಮಾನ ಉಂಟಾಗೋದ್ರಿಂದ ವಿಕ್ರಮ್​ ಮತ್ತು ಪ್ರಗ್ಯಾನ್​ ನಿಷ್ಕ್ರೀಯಗೊಳ್ಳಲಿದೆ.

ಶಶಿಯಂಗಳದಲ್ಲಿ ಮುಖಾಮುಖಿಯಾಗುತ್ತಾ ಚೀನಾ-ಭಾರತ?

ಚಂದ್ರಯಾನ ಮೂಲಕ ಈ ಹಿಂದೆಯೇ ಶಶಿಯ ಶಿಖರವೇರಿದ್ದ ನೆರೆಯ ಚೀನಾ ಅಲ್ಲೂ ಅಹ ಭಾರತದ ಮೇಲೆ ಬೇಹುಗಾರಿಕೆ ನಡೆಸಲು ಮುಂದಾಗಿದೆ. ಭಾರತ ಚಂದ್ರಯಾನ 3ರ ಮೂಲಕ ದಕ್ಷಿಣ ಧ್ರುವದಲ್ಲಿ ಭಾರತ ಲ್ಯಾಂಡ್​ ಮಾಡಿರೋ ಪ್ರಗ್ಯಾನ್​ ರೋವರ್​ ಜೊತೆ ಚೀನಾದ U2 2 ರೋವರ್​ ಸಹ ಸಕ್ರೀಯವಾಗಿದೆ. 2019ರ ಜನವರಿಯಲ್ಲಿ ಚಂದ್ರನ ಮೇಲ್ಮೈ ಮೇಲೆ ಚೀನಾದ ಚಾಂಗ್ ಇ ಲ್ಯಾಂಡರ್ ಲ್ಯಾಂಡ್​ ಆಗಿತ್ತು. ಬಳಿಕ ಚಂದ್ರನಲ್ಲಿ ಕತ್ತಲು ಉಂಟಾದಾಗ ಚೀನಾದ U2 2 ರೋವರ್ ಪವರ್​ ಡೌನ್​ ಆಗಿ ನಿಷ್ಕ್ರೀಯಗೊಂಡಿತ್ತು. ಆದರೆ ಚಂದ್ರನಲ್ಲಿ ಸುರ್ಯೋದಯವಾದ ವೇಳೆ ಚೀನಾದ U2 2 ರೋವರ್ ಸಕ್ರೀಯಗೊಳ್ಳುತ್ತಿದೆ. ಚೀನಾದ U2 2 ರೋವರ್ ಹೋಲಿಸಿದರೆ ಭಾರತದ ಪ್ರಗ್ಯಾನ್​ ಬ್ಯಾಟರಿ, ಸೌರಶಕ್ತಿಯಿಂದ ಹೆಚ್ಚು ಸಕ್ರಿಯವಾಗಿರಲಿದೆ. ಇನ್ನೂ ಇಸ್ರೋ ವಿಜ್ಞಾನಿಗಳ ಪ್ರಕಾರ ಭಾರತದ ಪ್ರಗ್ಯಾನ್​ ರೋವರ್ ಹಾಗೂ ಚೀನಾದ U2 2 ರೋವರ್ ನಡುವೆ 1948 ಕಿಲೋಮೀಟರ್​ ಅಂತರವಿದೆ ಎನ್ನಲಾಗಿದೆ. ಹೀಗಾಗಿ ಚೀನಾ ಮತ್ತು ಭಾರತದ ರೋವರ್ ಪರಸ್ಪರ ಭೇಟಿಯಾಗುವ ‌ಸಾಧ್ಯತೆ ಇಲ್ಲ ಅಂತ ಹೇಳಲಾಗ್ತಿದೆ.

‘ಚಂದ್ರಯಾನ 3ರ ಕ್ರೆಡಿಟ್ ಮೋದಿಗೆ ಸಲ್ಲಬೇಕು’
ಸಂಚಲನ ಸೃಷ್ಟಿಸಿದ ನಂಬಿ ನಾರಾಯಣನ್ ಹೇಳಿಕೆ

ಚಂದ್ರಯಾನ 3ರ ಸಕ್ಸಸ್​ನ ಖುಷಿಯಲ್ಲಿ ಇಡೀ ದೇಶವೇ ಮಿಂದೇಳುತ್ತಿರುವ ಹೊತ್ತಲ್ಲಿ ಚಂದ್ರಯಾನದ ಕ್ರೆಡಿಟ್​ಗಾಗಿ ಹೊಸ ಖ್ಯಾತೆಯೊಂದು ಕೇಳಿಬಂದಿದೆ. ಚಂದ್ರಯಾನ-3ರ ಕ್ರೆಡಿಟ್ ಪ್ರಧಾನಿ ಮೋದಿಗೆ ಸಲ್ಲಬೇಕು ಅಂತ ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ನೀಡಿರೋ ಹೇಳಿಕೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಚಂದ್ರಯಾನಕ್ಕೆ ಹಣ ಬಿಡುಗಡೆ ಮಾಡಿರಲಿಲ್ಲ ಅಂತ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ನಂಬಿ ನಾರಾಯಣನ್ ಗುರಿಯಾಗಿದ್ದಾರೆ.

ಚಂದ್ರನ ದಕ್ಷಿಣ ಧ್ರುವದ ಮೇಲೆ ಜಪಾನ್​ ದೃಷ್ಟಿ!

ಭಾರತದ ಚಂದ್ರಯಾನ 3 ಸಕ್ಸಸ್​ ಬಳಿಕ ಜಪಾನ್​ ಸಹ ಶಶಿಯ ಮೇಲೆ ಸವಾರಿ ಮಾಡಲು ಸಜ್ಜಾಗಿದೆ. ಹಿಮಕರನ ದಕ್ಷಿಣ ಧ್ರುವವನ್ನೇ ಟಾರ್ಗೆಟ್​ ಮಾಡಿ ಲ್ಯಾಂಡರ್​ ಇಳಿಸಲು ಜಪಾನ್​ ಪ್ಲಾನ್​ ಮಾಡಿದೆ. ದೇಶದ ಮೊದಲ ಚಂದ್ರಯಾನ ಲ್ಯಾಂಡರ್​ ಹೊತ್ತ ಹೆಚ್​2ಎ ರಾಕೆಟ್​ ಉಡಾವಣೆ ಮಾಡಲು ಸಜ್ಜಾಗಿದೆ. ಇಂದು ಚಂದ್ರಯಾನದ ಹೆಚ್​2ಎ ರಾಕೆಟ್ ಉಡಾವಣೆಗೆ ಸಜ್ಜಾಗಿದ್ದ ಜಪಾನ್​ ಕೊನೆ ಕ್ಷಣದಲ್ಲಿ ತನ್ನ ಹೆಜ್ಜೆಯನ್ನ ಹಿಂದಿಟ್ಟಿದೆ. ಪ್ರತಿಕೂಲ ಹವಾಮಾನದ ಕೊರತೆಯ ಕಾರಣವೊಡ್ಡಿ ಜಪಾನ್​ ಚಂದ್ರಯಾನವನ್ನ ಮುಂದೂಡಿದೆ. ಚಂದ್ರಯಾನ 3ರ ಸಕ್ಸಸ್​ ಭಾರತೀಯರ ಪಾಲಿಗೆ ಹೊಸ ಮೈಲಿಗಲ್ಲನ್ನ ಸೃಷ್ಟಿಸಿದ್ರೆ, ವಿದೇಶ ಪಾಲಿಗೆ ಹೊಸ ಉತ್ಸಾಹವನ್ನ ತುಂಬಿದೆ. ತ್ರಿವಿಕ್ರಮನ ದಶ ದಿನಗಳ ಪರ್ಯಟನೆಯಲ್ಲಿ ಹೊರಬೀಳಲಿರುವ ಅಚ್ಚರಿಯ ಕೌತುಕಗಳ ಕಾಣಲು ಇಡೀ ದೇಶವೇ ಕಾತುರದಿಂದ ಕಾದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಗ್ಯಾನ್ ಅಸಲಿ ಆಟಕ್ಕೆ ಹತ್ತೇ ದಿನ ಬಾಕಿ; ಚಂದ್ರನ ಅಂಗಳದಲ್ಲಿ ಮುಖಾಮುಖಿ ಆಗುತ್ತಾ ಚೀನಾ, ಭಾರತ?

https://newsfirstlive.com/wp-content/uploads/2023/08/chandrayana-5.jpg

Load More