ಈಗಾಗಲೇ 5 ಕಕ್ಷೆಗಳನ್ನ ಪೂರ್ಣಗೊಳಿಸಿದ ಸ್ಪೇಸ್ಕ್ರಾಫ್ಟ್
ಜುಲೈ 14ರಂದು ಉಡಾವಣೆಯಾಗಿದ್ದ ಚಂದ್ರಯಾನ- 3
ಚಂದ್ರನ ಪಥಕ್ಕೆ ಬದಲಾವಣೆ ಆಗಲಿದೆ ಬಾಹ್ಯಾಕಾಶ ನೌಕೆ
ಸದ್ಯ ಬಾಹ್ಯಾಕಾಶದಲ್ಲಿ ಪ್ರಯಾಣ ಮಾಡುತ್ತಿರುವ ಸ್ಪೇಸ್ಕ್ರಾಫ್ಟ್ ಇಂದು ಮಹತ್ವದ ಹಂತಕ್ಕೆ ಮಧ್ಯರಾತ್ರಿ ತಲುಪಲಿದೆ. ಅಂದರೆ ಸ್ಪೇಸ್ಕ್ರಾಫ್ಟ್ ಈಗಾಗಲೇ 5 ಕಕ್ಷೆಗಳನ್ನು ಪೂರ್ಣಗೊಳಿಸಿದ್ದು ಟ್ರಾನ್ಸ್ ಲೂನಾರ್ ಇಂಜೆಕ್ಷನ್ (TLI) ಪ್ರಕ್ರಿಯೆಯು ಇಂದು ಮಧ್ಯರಾತ್ರಿ 12 ರಿಂದ 1 ಗಂಟೆಯೊಳಗೆ ಇಸ್ರೋ ಸಂಸ್ಥೆ ಪೂರ್ಣಗೊಳಿಸಲಿದೆ. ಇದರಿಂದ ಸ್ಪೇಸ್ಕ್ರಾಫ್ಟ್ ಚಂದ್ರನ ಪಥ ಸೇರಲಿದೆ.
ಭಾರತದ ಮಹತ್ವಾಕಾಂಕ್ಷಿಯ, ದೇಶದ ಹಿರಿಮೆಯನ್ನು ವಿಶ್ವ ಮಟ್ಟದಲ್ಲಿ ಇನ್ನಷ್ಟು ಪಸರಿಸುವ ಯೋಜನೆ ಚಂದ್ರಯಾನ- 3 ಅನ್ನು ಜುಲೈ 14 ರಂದು ಉಡಾವಣೆ ಮಾಡಲಾಗಿತ್ತು. ಅಂದಿನಿಂದ ಹಂತ, ಹಂತವಾಗಿ ಕಕ್ಷೆಗಳನ್ನು ಬದಲಾಯಿಸುತ್ತ, ಆಗಸದಲ್ಲಿ ಬಾಹ್ಯಾಕಾಶ ನೌಕೆ ಚಲಿಸುತ್ತಲೇ ಇದೆ. ಅದರಂತೆ 5 ಕಕ್ಷೆಗಳನ್ನು ಪೂರ್ಣಗೊಳಿಸರುವ ನೌಕೆಯು ಚಂದ್ರನ ಪಥಕ್ಕೆ ಬದಲಾವಣೆ ಆಗಲಿದೆ. ಇದು ಆಗಸ್ಟ್ 01, ಮಧ್ಯರಾತ್ರಿ 12 ರಿಂದ 1 ಗಂಟೆ ಒಳಗೆ ನಡೆಯಲಿದೆ. ಇದು 20 ರಿಂದ 30 ನಿಮಿಷದೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲ್ಲಿದೆ ಎಂದು ಹೇಳಲಾಗುತ್ತಿದೆ.
ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಪ್ರೊಪಲ್ಷನ್ ಮ್ಯಾಡುಲ್ನಲ್ಲಿ ಇಂಜಿನ್ಗಳು ತಮ್ಮ ಸ್ಪೀಡ್ ಅನ್ನು ಅಧಿಕಗೊಳಿಸಲಿವೆ. ಇದರಿಂದ ಬಾಹ್ಯಾಕಾಶ ನೌಕೆ ನಿರ್ದಿಷ್ಟ ಮಟ್ಟ ತಲುಪಲು ಸಹಕಾರಿಯಾಗಲಿದೆ. ಟಿಎಲ್ಐ ಬರ್ನ್ ಮಾಡುವುದಕ್ಕೆ ಸಮಯ ನಿಗದಿ ಮಾಡಿದ್ದರಿಂದ ಇಂದು ಮಧ್ಯರಾತ್ರಿ ಈ ಪ್ರಕ್ರಿಯೆ ಸ್ಪೇಸ್ಕ್ರಾಫ್ಟ್ನಲ್ಲಿ ನಡೆಯಲಿದೆ.
ಟ್ರಾನ್ಸ್‌ಲೂನಾರ್ ಇಂಜೆಕ್ಷನ್ (TLI) ಫೈರಿಂಗ್ ಅನ್ನು ಆಗಸ್ಟ್ 1 ರಂದು ಮಧ್ಯರಾತ್ರಿ 12 ಅಥವಾ 1 ಗಂಟೆಯ ನಡುವೆ ಯೋಜಿಸಲಾಗಿದೆ. ಈ ಬಗ್ಗೆ ವೀಕ್ಷಣೆ ಮಾಡಲಾಗುತ್ತಿದ್ದು ಮುಂದಿನ ಅಪ್ಡೇಟ್ ಅನ್ನು ಶೀಘ್ರವೇ ತಿಳಿಸಲಾಗುವುದು ಎಂದು ಇಸ್ರೋ ಸಂಸ್ಥೆ ಈ ಹಿಂದೆ ತಿಳಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ