newsfirstkannada.com

Chandrayaan-3: 4ನೇ ಹಂತದ ಕಕ್ಷೆಗೆ ಏರಿಸುವ ಪ್ರಕ್ರಿಯೆ ಪೂರ್ಣ.. ಈಗ ಚಂದ್ರಯಾನ ನೌಕೆ ಎಷ್ಟು ದೂರದಲ್ಲಿದೆ..?

Share :

21-07-2023

    2023, ಜುಲೈ 14 ರಂದು ಚಂದ್ರಯಾನ-3 ಉಡಾವಣೆ

    ಅ.23 ರಂದು ಚಂದ್ರನ ಅಂಗಳದಲ್ಲಿ ನೌಕೆ ಇಳಿಯಲಿದೆ

    ಜುಲೈ 25 ರಂದು ಇಸ್ರೋದಿಂದ ಮತ್ತೊಂದು ಅಪ್​​ಡೇಟ್​​

ಚಂದ್ರಯಾನ-3 ನೌಕೆಯನ್ನು ನಾಲ್ಕನೇ ಬಾರಿಗೆ ಕಕ್ಷೆಗೆ ಏರಿಸುವ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಇಸ್ರೋ (Indian Space Research Organisation) ವಿಜ್ಞಾನಿಗಳು ತಿಳಿಸಿದ್ದಾರೆ. ಚಂದ್ರನಿದ್ದಲ್ಲಿಗೆ ನೌಕೆಯನ್ನು ಕಳುಹಿಸುವ ಮತ್ತೊಂದು ನಿರ್ಣಾಯಕ ಹಂತ ಮುಕ್ತಾಯಗೊಂಡಿದೆ ಎಂದು ಇಸ್ರೋ ಹೇಳಿದೆ.

ಬೆಂಗಳೂರಿನಲ್ಲಿರುವ ISTRAC (Isro Telemetry, Tracking and Command) ಮೂಲಕ ಕಕ್ಷೆಯನ್ನು ಮೇಲಕ್ಕೇರಿಸುವ ಕಾರ್ಯ ನಡೆದಿದೆ. 17 ನಿಮಿಷಗಳಗಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಮೂಲಕ ನೌಕೆಯನ್ನು 71351 ಕಿ.ಮೀ x 233 ಕಿಲೋ ಮೀಟರ್ ದೂರದ ಕಕ್ಷೆಗೆ ಸೇರಿಸಲಾಗಿದೆ.

ಐದನೇ ಬಾರಿಗೆ ಕಕ್ಷೆಗೆ ಏರಿಸುವ ಪ್ರಕ್ರಿಯೆಯು ಜುಲೈ 25 ರಂದು ಮಧ್ಯಾಹ್ನ 2 ಗಂಟೆಯಿಂದ 3 ಗಂಟೆಯವರೆಗೆ ಆಪರೇಷನ್ ನಡೆಯಲಿದೆ. ಜುಲೈ 14 ರಂದು LVM3-M4 ರಾಕೆಟ್ ಸತೀಶ್ ಧವನ್ ಸ್ಪೇಸ್​ ಸೆಂಟರ್​ನಿಂದ ಚಂದ್ರಯಾನ-3 ನೌಕೆಯನ್ನು ನಭಕ್ಕೆ ಹೊತ್ತೊಯ್ದಿದೆ. ಆಗಸ್ಟ್​​ 23 ರಂದು ಚಂದ್ರನ ಮೇಲೆ ಲ್ಯಾಂಡರ್ ವಿಕ್ರಂ ಹಾಗೂ ರೋವರ್ ಸುರಕ್ಷಿತವಾಗಿ ಇಳಿಯಲಿವೆ. ಸುಮಾರು 600 ಕೋಟಿ ವೆಚ್ಚದಲ್ಲಿ ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಪ್ರಾಜೆಕ್ಟ್​ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: 4ನೇ ಹಂತದ ಕಕ್ಷೆಗೆ ಏರಿಸುವ ಪ್ರಕ್ರಿಯೆ ಪೂರ್ಣ.. ಈಗ ಚಂದ್ರಯಾನ ನೌಕೆ ಎಷ್ಟು ದೂರದಲ್ಲಿದೆ..?

https://newsfirstlive.com/wp-content/uploads/2023/07/ISRO-3.jpg

Load More