newsfirstkannada.com

ನಾಳೆ ಚಂದ್ರನ ಮೇಲೆ ಲ್ಯಾಂಡ್​​ ಆಗಲಿದೆ ‘ವಿಕ್ರಂ’; ಪೂರಕ ವಾತಾವರಣ ಇರದಿದ್ದರೆ ಪೋಸ್ಟ್​ಪೋನ್​ ಆಗುವ ಸಾಧ್ಯತೆ!?

Share :

22-08-2023

  ಭಾರತದ ಐತಿಹಾಸಿಕ ಸಾಧನೆಗೆ ಇನ್ನೊಂದೇ ದಿನ ಬಾಕಿ

  ‘ವಿಕ್ರಂ’ನ​ ಸಾಫ್ಟ್​ ಲ್ಯಾಂಡಿಂಗ್​ಗಾಗಿ ಕಾಯುತ್ತಿದೆ ಭೂಮಿ

  ಸಾಫ್ಟ್​ ಲ್ಯಾಂಡಿಂಗ್​ ಆಗುತ್ತಾ..? ಪೋಸ್ಟ್​ಪೋನ್​ ಆಗುತ್ತಾ?

ಆಗಸ್ಟ್​ -23 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. 40 ದಿನಗಳಿಂದ ಇಡೀ ಭಾರತವೇ ಚಾತಕ ಪಕ್ಷಿಯಂತೆ ಎದುರು ನೋಡುತ್ತ ಕುಳಿತಿದೆ. ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿರುವ ವಿಕ್ರಮ್​ ಲ್ಯಾಂಡರ್​ ಇನ್ನೇನಿದ್ದರೂ ಚಂದ್ರನ ಮೇಲೆ ಕಾಲು ಇಡೋದೊಂದೇ ಬಾಕಿ. ಈ ಐತಿಹಾಸಿಕ ಕ್ಷಣಕ್ಕಾಗಿ ಇಡೀ ವಿಶ್ವವೇ ಭಾರತದತ್ತ ಕಣ್ಣರಳಿಸಿ ನೋಡುತ್ತಿದೆ. ಅದರಲ್ಲೂ ರಷ್ಯಾದ ಲೂನಾ-25 ಚಂದ್ರಯಾನ ವಿಫಲವಾದ ಬಳಿಕ, ಭಾರತದ ಚಂದ್ರಯಾನ-3 ಯೋಜನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಟೆನ್ಷನ್​ ಹೆಚ್ಚಿಸಿದ ಇಸ್ರೋ ವಿಜ್ಞಾನಿಯೊಬ್ಬರ ಅಚ್ಚರಿ ಹೇಳಿಕೆ

ಸದ್ಯ ಚಂದ್ರನ ಮೇಲ್ಮೈನ 25 ಕಿ.ಮೀ. ದೂರದಲ್ಲಿರುವ ವಿಕ್ರಮ್​ ಲ್ಯಾಂಡರ್​ಅನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡ್​ ಮಾಡಿಸಲು ಇಸ್ರೋ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತಿದೆ. ಒಂದು ವೇಳೆ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್​ನ ಲ್ಯಾಂಡಿಂಗ್​ಗೆ ಪೂರಕ ವಾತಾವರಣ ಇರದಿದ್ದರೆ, ಆಗಸ್ಟ್​ 27 ರಂದು ಮರಳಿ ಪ್ರಯತ್ನ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.

ವಿಕ್ರಮ್ ಲ್ಯಾಂಡರ್​ ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ಅದರ ಸ್ಥಿತಿಗತಿ ಪರಿಶೀಲಿಸಲಾಗವುದು. ಈ ವೇಳೆ ಲ್ಯಾಡಿಂಗ್ ಮಾಡಬೇಕೇ ಅಥವಾ ಆ ಕ್ಷಣದಲ್ಲಿ ಸೂಕ್ತವಲ್ಲವೇ ಎಂದು ತೀರ್ಮಾನ ಕೈಗೊಳ್ಳಲಾಗುವುದು. ಅನುಕೂಲಕರ ಪರಿಸ್ಥಿತಿ ಇಲ್ಲದಿದ್ದರೆ ಆಗಸ್ಟ್ 27ಕ್ಕೆ ಮುಂದೂಡಿಕೆ ಮಾಡಿ ಮತ್ತೊಂದು ಪ್ರಯತ್ನ ಮಾಡಲಾಗುವುದು ಎಂದು ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ ತಿಳಿಸಿದ್ದಾರೆ

ವಿಕ್ರಮ್​ ಸೇಫ್​ ಲ್ಯಾಂಡ್​ಗಾಗಿ ದೇಶದೆಲ್ಲೆಡೆ ವಿಶೇಷ ಪ್ರಾರ್ಥನೆ

ಚಂದ್ರಯಾನ-3 ಯಶಸ್ವಿಯಾಗಲೆಂದು ದೇಶದೆಲ್ಲೆಡೆ ವಿಶೇಷ ಪ್ರಾರ್ಥನೆ ಮಾಡಲಾಗುತ್ತಿದೆ. ಅದೇ ರೀತಿ ದಕ್ಷಿಣ ಕಾಶಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲೂ ಶಾಲಾ ವಿದ್ಯಾರ್ಥಿಗಳು ವಿಭಿನ್ನವಾಗಿ ಪ್ರಾರ್ಥಿಸಿದ್ದಾರೆ. ನಂಜನಗೂಡಿನ A9 ಆರ್ಟ್ ಸ್ಟುಡಿಯೋ ಚಿತ್ರಕಲಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿವಿಧ ಶಾಲೆಗಳ‌ ವಿದ್ಯಾರ್ಥಿಗಳು, ವಿಕ್ರಮ್​ ಸೇಫಾ ಲ್ಯಾಂಡ್​ ಆಗಿರುವ ಮಾದರಿ ತ್ರಿ ಡಿ ಎಫೆಕ್ಟ್ ಚಿತ್ರವನ್ನು ಶ್ರೀಕಂಠೇಶ್ವರ ದೇಗುಲದ ಮುಂಭಾಗದಲ್ಲಿ ಬಿಡಿ ಗಮನ ಸೆಳೆದಿದ್ದಾರೆ.

ಒಟ್ಟಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೊಸ ಇತಿಹಾಸ ಸೃಷ್ಟಿಗೆ ಕೌಂಟ್​ಡೌನ್​ ಶುರುವಾಗಿದೆ. ಇಡೀ ವಿಶ್ವವೇ ಆಗಸ್ಟ್​ 23ರ ದಿನವನ್ನು ಎದುರು ನೋಡ್ತಿದೆ. ನಾಳೆ, ವಿಕ್ರಮ್​ ಸಾಫ್ಟ್​ ಲ್ಯಾಂಡ್​ ಆಗಲಿ ಎಂದು ಇಡೀ ದೇಶವೇ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಚಂದ್ರನ ಮೇಲೆ ಲ್ಯಾಂಡ್​​ ಆಗಲಿದೆ ‘ವಿಕ್ರಂ’; ಪೂರಕ ವಾತಾವರಣ ಇರದಿದ್ದರೆ ಪೋಸ್ಟ್​ಪೋನ್​ ಆಗುವ ಸಾಧ್ಯತೆ!?

https://newsfirstlive.com/wp-content/uploads/2023/07/ISRO-3.jpg

Load More