ಭಾರತದ ಚಂದ್ರಯಾನ-3ಗೆ ಸ್ಪರ್ಧೆ ಒಡ್ಡಿದ ರಷ್ಯಾ
ರಷ್ಯಾ ಬಾಹ್ಯಾಕಾಶ ಸಂಸ್ಥೆಯ ಲೂನಾ-25 ಲಾಂಚ್
ಸೌತ್ ಪೋಲ್‌ನ ಮೊದಲು ತಲುಪೋದು ಯಾರು?
ಚಂದ್ರಯಾನ-3ನಲ್ಲಿ ಯಶಸ್ಸು ಸಾಧಿಸಲು ಇಸ್ರೋ ಮಹತ್ವದ ಹೆಜ್ಜೆ ಇಟ್ಟಿದೆ. ಚಂದಿರನ ಅಂಗಳ ತಲುಪಲು ಕೆಲ ದಿನಗಳಷ್ಟೇ ಬಾಕಿ ಇದೆ. ಶಶಿಯ ಕಕ್ಷೆಗೆ ನೌಕೆಯನ್ನ ತಲುಪಿಸಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸನ್ನದ್ಧವಾಗಿದೆ. ಈ ಮಧ್ಯೆ ಭಾರತದ ಮಿತ್ರರಾಷ್ಟ್ರ ರಷ್ಯಾ, ಇಸ್ರೋ ಕನಸಿಗೆ ಕೊಳ್ಳಿ ಇಡುವ ಕೆಲಸಕ್ಕೆ ಕೈ ಹಾಕಿದ್ಯಾ ಎಂಬ ಪ್ರಶ್ನೆ ಹುಟ್ಟಿದೆ. ಭಾರತಕ್ಕೂ ಮುನ್ನವೇ ಚಂದಿರನ ಅಂಗಳ ತಲುಪಲು ಹುನ್ನಾರ ನಡೆಸಿದೆ. ಜುಲೈ 14ರಂದು ಇಸ್ರೋದ ಬಹುಕನಸಿನ ಯಾನ ಆರಂಭವಾಗಿತ್ತು. ಭಾರತದ ಚಂದ್ರಯಾನ-3 ನೌಕೆ ಶ್ರೀಹರಿಕೋಟದಿಂದ ನಭಕ್ಕೆ ಚಿಮ್ಮಿತ್ತು. ಬರೋಬ್ಬರಿ 40 ದಿನಗಳ ಪ್ರಯಾಣ ಮುಗಿಸಿ ರೋವರ್ ಚಂದ್ರನ ನೆಲದ ಮೇಲೆ ಆಗಸ್ಟ್ 23ರಂದು ಇಳಿಯಲು ಸಜ್ಜಾಗಿತ್ತು. ಆದ್ರೀಗ ನಮಗಿಂತ ತಡವಾಗಿ ಚಿಮ್ಮಿರೋ ರಷ್ಯಾದ ಬಾಹ್ಯಾಕಾಶ ನೌಕೆ ಇಸ್ರೋದ ಬಹು ನಿರೀಕ್ಷೆಯ ಕಾರ್ಯಕ್ಕೆ ತಣ್ಣೀರೆರಚಲು ಸಜ್ಜಾಗಿದೆ.
ಚಂದ್ರನ ಅಂಗಳಕ್ಕೆ ಚಿಮ್ಮಿದ ರಷ್ಯಾ ಬಾಹ್ಯಾಕಾಶ ನೌಕೆ
ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಇಸ್ರೋಗೆ ಸ್ಪರ್ಧೆ?
47 ವರ್ಷಗಳ ಬಳಿಕ ಚಂದ್ರನ ಅಂಗಳಕ್ಕೆ ರಷ್ಯಾದ ಬಾಹ್ಯಾಕಾಶ ಸಂಸ್ಥೆ ನೌಕೆಯನ್ನ ಉಡಾಯಿಸಿದೆ. 1976ರ ಬಳಿಕ ರಷ್ಯಾ ನೆಲದಿಂದ ಲೂನಾ-25 ಬಾಹ್ಯಾಕಾಶ ನೌಕೆ ಇವತ್ತು ನಭೋಮುಖಿಯಾಗಿದೆ. ಇಸ್ರೋದ ನೌಕೆಗಿಂತ ಕೆಲವು ನಿಮಿಷಗಳ ಮೊದಲೇ ದಕ್ಷಿಣ ಧ್ರುವದಲ್ಲಿ ರಷ್ಯಾದ ಲೂನಾ-25 ನೌಕೆ ಇಳಿಯುವ ಸಾಧ್ಯತೆ ಇದೆ. ಈ ಮೂಲಕ ರಷ್ಯಾ, ಇಸ್ರೋದ ಇತಿಹಾಸವನ್ನು ತನ್ನ ಹೆಸರಿಗೆ ಬರೆದುಕೊಳ್ಳುವ ಸಂಭವವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇವತ್ತು ರಷ್ಯಾ ಬಾಹ್ಯಾಕಾಶ ಸಂಸ್ಥೆ ಲೂನಾ-25 ಲಾಂಚ್ ಆಗಿದೆ. ಸೋಯುಝ್ 2.1 ಎಂಬ ಬಲಿಷ್ಠ ರಾಕೆಟ್‌ನಲ್ಲಿ ಲೂನಾ 25 ನೌಕೆಯನ್ನ ಉಡಾವಣೆ ಮಾಡಿದೆ.
ಚೊಸ್ಟೊಚ್ನಿ ಕೊಸ್ಮೊಡ್ರೋಮ್ ಕೇಂದ್ರದಿಂದ ಉಡಾವಣೆಯಾಗಿದ್ದು, ಲೂನಾ 25ನ ಚಂದ್ರನ ಸೌತ್ ಪೋಲ್‌ನಲ್ಲಿ ಇಳಿಸಲು ರಷ್ಯಾ ಸನ್ನದ್ಧವಾಗಿದೆ. ಈ ಮೂಲಕ ಇಸ್ರೋಗಿಂತ ಮುಂಚೆ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಮಾಡಿ, ಸೌತ್ ಪೋಲ್ ತಲುಪಿದ ಜಗತ್ತಿನ ಮೊದಲ ರಾಷ್ಟ್ರ ರಷ್ಯಾ ಎಂಬ ಹೆಗ್ಗಳಿಕೆ ಬರೆಯಲು ಇಸ್ರೋಗೆ ಸ್ಪರ್ಧೆಯೊಡ್ಡಿದೆ. ಅಷ್ಟಕ್ಕೂ ಇಸ್ರೋಗಿಂತ ಮೊದಲೇ ರಷ್ಯಾ ಬಾಹ್ಯಾಕಾಶ ಸಂಸ್ಥೆಯ ಲೂನಾ-25 ಲ್ಯಾಂಡ್ ಆಗಲು ಕಾರಣವೇನು?
ರಷ್ಯಾ ‘ಮೊದಲ’ ಹೆಜ್ಜೆ ಏಕೆ?
ಒಟ್ಟಾರೆ, ಈ ಮೂಲಕ ರಷ್ಯಾ, ಭಾರತದ ಕನಸಿಗೆ ಕೊಳ್ಳಿ ಇಡುವ ಸೂಚನೆ ಇದೆ. ಈಗಾಗಲೇ ಇಸ್ರೋ ಕೂಡಾ ರಷ್ಯಾ ಬಾಹ್ಯಾಕಾಶ ಸಂಸ್ಥೆಗೆ ಶುಭಾಶಯ ಕೋರಿದೆ. ಭಾರತದ ಮಿತ್ರ ರಾಷ್ಟ್ರ ರಷ್ಯಾ, ಅಮೆರಿಕಾ ಜೊತೆ ಬಾಹ್ಯಾಕಾಶ ಸ್ಪರ್ಧೆಗೆ ಇಳಿದಿತ್ತು. ಇದೀಗ ಭಾರತದ ಜೊತೆ ಕಾಂಪಿಟೇಷನ್ ಮಾಡ್ತಿದೆ ಅಂದ್ರೆ ಇದು ಇಸ್ರೋಗೆ ಹೆಮ್ಮೆಯ ಸಂಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ