Advertisment

ಹೆಮ್ಮೆಯ ಇಸ್ರೋಗೆ ರಾಜ್ಯದ ಬಡಕುಟುಂಬದಿಂದಲೂ ಅಭಿನಂದನೆ; ಇಬ್ಬರು ಮಕ್ಕಳಿಗೆ ವಿಕ್ರಂ, ಪ್ರಗ್ಯಾನ್ ಎಂದು ನಾಮಕರಣ

author-image
Bheemappa
Updated On
ಹೆಮ್ಮೆಯ ಇಸ್ರೋಗೆ ರಾಜ್ಯದ ಬಡಕುಟುಂಬದಿಂದಲೂ ಅಭಿನಂದನೆ; ಇಬ್ಬರು ಮಕ್ಕಳಿಗೆ ವಿಕ್ರಂ, ಪ್ರಗ್ಯಾನ್ ಎಂದು ನಾಮಕರಣ
Advertisment
  • 1 ತಿಂಗಳ ಹಿಂದೆ ಜನಿಸಿದ್ದ 2 ಮುದ್ದಾದ ಮಕ್ಕಳು
  • ಒಂದೇ ಕುಟುಂಬದಲ್ಲಿ ಎರಡು ಮಕ್ಕಳಿಗೆ ಹೆಸರು
  • ವಿಕ್ರಮ್ ಹೆಸರಿನ ಮಗು ಜನಿಸಿದ ದಿನಾಂಕ ಏನು?

ಯಾದಗಿರಿ: ರಾಷ್ಟ್ರದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋಗೆ ಅಭಿನಂದನೆ ಸಲ್ಲಿಸಲು ಕುಟುಂಬಸ್ಥರು ತಮ್ಮ ಮಕ್ಕಳಿಗೆ ವಿಕ್ರಮ್​, ಪ್ರಗ್ಯಾನ್ ಎಂದು ನಾಮಕರಣ ಮಾಡಿದ್ದಾರೆ.

Advertisment

ವಡಗೇರಾ ಪಟ್ಟಣದ ಒಂದೇ ಕುಟುಂಬದ ಬಾಲಪ್ಪ- ನಾಗಮ್ಮ ದಂಪತಿಯ ಮಗುವಿಗೆ ವಿಕ್ರಮ್ ಎಂದು, ನಿಂಗಪ್ಪ-ಶಿವಮ್ಮ ದಂಪತಿ ಪುತ್ರನಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡಿದ್ದಾರೆ. ವಿಕ್ರಮ್ ಜುಲೈ 28 ರಂದು, ಪ್ರಗ್ಯಾನ್ ಆಗಸ್ಟ್ 18ರಂದು ಜನಿಸಿದ್ದರು ಎನ್ನಲಾಗಿದೆ.

[caption id="attachment_15004" align="aligncenter" width="800"]publive-image ಪ್ರಗ್ಯಾನ್ ಮತ್ತು ವಿಕ್ರಮ್ ಹೆಸರಿನ ಮಕ್ಕಳು[/caption]

ಇವರು ಜನಿಸಿದ ಬೆನ್ನಲ್ಲೇ ಇಸ್ರೋ ಸಂಸ್ಥೆ ಚಂದ್ರಯಾನ-3 ಅನ್ನು ಉಡಾವಣೆ ಮಾಡಿ ಚಂದ್ರನ ಅಂಗಳ ತಲುಪುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಕುಟುಂಬದವರು ದೇಶ ಹಾಗೂ ಇಸ್ರೋಗೆ ಅಭಿನಂದಿಸಲು ಮಕ್ಕಳಿಗೆ ಲ್ಯಾಂಡರ್, ರೋವರ್​ಗೆ ಇರುವ ಹೆಸರನ್ನೇ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment