newsfirstkannada.com

ಚಂದ್ರಯಾನ-3: ಚಂದ್ರನ ಸಮೀಪದಲ್ಲಿ ನೌಕೆ.. ಕೇವಲ 4 ದಿನ.. ಆ ಅದ್ಭುತ ಕ್ಷಣಕ್ಕಾಗಿ ಕಾಯುತ್ತಿದೆ ಇಡೀ ಜಗತ್ತು

Share :

19-08-2023

    ಚಂದ್ರನ ಮೇಲ್ಮೈ ಫೋಟೋ ಕಳುಹಿಸಿದ ಲ್ಯಾಂಡರ್​​ ವಿಕ್ರಂ

    ಸ್ಮೂತ್​ ಲ್ಯಾಂಡ್​ ಬಾಕಿ, ಇಸ್ರೋ ಯಶಸ್ವಿಯಾಗೋದು ಖಚಿತ

    ಮಹತ್ವ ಮೈಲಿಗಲ್ಲು ಸ್ಥಾಪಿಸಲಿದೆ ಭಾರತದ ಬಾಹ್ಯಾಕಾಶ ಸಂಸ್ಥೆ

ಆಗಸ್ಟ್‌ 23ರ ಸಂಜೆ ವೇಳೆಗೆ ಚಂದ್ರಯಾನ-3 ನೌಕೆ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ ಎಂದು ಇಸ್ರೋ ಅಧಿಕೃತವಾಗಿ ಹೇಳಿದೆ. ಚಂದ್ರನ ಕಕ್ಷೆಯಲ್ಲಿ ಪ್ರಪೊಲ್ಷನ್ ಮಾಡ್ಯೂಲನ್​ನಿಂದ ವಿಕ್ರಮ್‌ ಲ್ಯಾಂಡರ್‌ ಬೇರ್ಪಟ್ಟಿದ್ದು ವೇಗ ತಗ್ಗಿಸುವ ಪ್ರಕ್ರಿಯೆ (ಡಿಬೂಸ್ಟ್​) ಯಶಸ್ವಿಯಾಗಿದೆ. ಆಗಸ್ಟ್ 20ರಂದು ಮತ್ತೊಮ್ಮೆ ವೇಗವನ್ನು ಕಡಿಮೆಗೊಳಿಸಲಾಗುತ್ತೆ. ಚಂದ್ರನ ಸಮೀಪಕ್ಕೆ ತಲುಪಿರುವ ಲ್ಯಾಂಡರ್​ ಕೆಲ ಚಿತ್ರಗಳನ್ನು ಕೂಡ ಭೂಮಿಗೆ ರವಾನಿಸಿದೆ.

ಚಂದ್ರನ ಮೇಲ್ಮೈನ ಫೋಟೋ

ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆ ಇನ್ನೇನು ಅಂತಿಮ ಘಟ್ಟದಲ್ಲಿದೆ. ಆಗಸ್ಟ್‌ 23ರ ಸಂಜೆಗೆ ವಿಕ್ರಮ್​ ಲ್ಯಾಂಡರ್​ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್​ ಲ್ಯಾಂಡ್ ಆಗಲಿದೆ. ಬಳಿಕ ಲ್ಯಾಂಡರ್​ ವಿಕ್ರಮ್​ ಒಳಗಿನಿಂದ ಪ್ರಗ್ಯಾನ್ ಹೊರ ಬರಲಿದ್ದು ನಂತರ ಚಂದ್ರನ ಮೇಲೆ ತನ್ನ ಕಾರ್ಯಗಳನ್ನು ಶುರು ಮಾಡಲಿದೆ. ಈ ಕ್ಷಣಕ್ಕೆ ಇಡೀ ಜಗತ್ತೇ ಎದುರು ನೋಡುತ್ತಿದ್ದು ಭಾರತ ಮತ್ತೊಂದು ಮಹಾಮೈಲಿಗಲ್ಲು ಸ್ಥಾಪಿಸುವುದಕ್ಕೆ ಇನ್ನೇನು 4 ದಿನಗಳು ಬಾಕಿ ಇವೆ ಅಷ್ಟೇ.

ಲ್ಯಾಂಡರ್​ ರವಾನಿಸಿರುವ ಫೋಟೋಗಳಲ್ಲಿ ಚಂದ್ರನ ಮೇಲ್ಮೈ ಮೇಲೆ ಕುಳಿಗಳಿರೋದು ಮತ್ತಷ್ಟು ಸ್ಪಷ್ಟವಾಗಿ ಕಾಣಿಸುತ್ತಿದೆ. ಇನ್ನು ಇವತ್ತು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಲ್ಯಾಂಡರ್‌ ಮಾಡ್ಯೂಲ್‌ನ ವೇಗವನ್ನ ಕಡಿಮೆ ಮಾಡಿದ್ದಾರೆ. ಆ ಮೂಲಕ ಆಗಸ್ಟ್‌ 23ರಂದು ಸಂಜೆ 5.45ಕ್ಕೆ ಲ್ಯಾಂಡರ್‌ ಸಾಫ್ಟ್ ಲ್ಯಾಂಡಿಂಗ್‌ಗೆ ಇಸ್ರೋ ಸಿದ್ಧತೆ ಮಾಡಿಕೊಳ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3: ಚಂದ್ರನ ಸಮೀಪದಲ್ಲಿ ನೌಕೆ.. ಕೇವಲ 4 ದಿನ.. ಆ ಅದ್ಭುತ ಕ್ಷಣಕ್ಕಾಗಿ ಕಾಯುತ್ತಿದೆ ಇಡೀ ಜಗತ್ತು

https://newsfirstlive.com/wp-content/uploads/2023/08/CHANDRAYANA_3.jpg

Load More