newsfirstkannada.com

Chandrayaan-3: ಕೊನೆಗೂ ಸುರಕ್ಷಿತ ಹೆಜ್ಜೆ ಇರಿಸಿದ ವಿಕ್ರಮ; ಯಶಸ್ಸಿಗೆ ಎಲ್ಲೆಡೆ ಪೂಜೆ ಪುನಸ್ಕಾರ

Share :

24-08-2023

    ಚಂದ್ರಯಾನ ಯಶಸ್ಸಿಗೆ ಗವಿಗಂಗಾಧರೇಶ್ವನ ಮೊರೆ!

    ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ವಿಶೇಷ ಪ್ರಾರ್ಥನೆ!

    ಬೆಳಗಾವಿಯಲ್ಲಿ ಕಪಿಲೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ!

ಬೆಂಗಳೂರು: ಹೆಮ್ಮೆಯ ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯಶಸ್ಸಿನ ಮೇರುಗಿರಿ ತಲುಪಿದೆ. ಚಂದ್ರಯಾನ-3 ಮಿಷನ್ ಯಶಸ್ವಿಯಾಗಲಿ ಅಂತ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಕೊಟ್ಟಿದೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ದೇವರಿಗೆ ವಿಧವಿಧದ ಅಭಿಷೇಕ, ವಿಶೇಷ ಪೂಜೆ-ಪುನಸ್ಕಾರಗಳು ಗೆಲುವಿನ ಸಿಹಿ ನೀಡಿದೆ.

‘ತಿಂಗಳ’ ಅಂಗಳದಲ್ಲಿ ಸುರಕ್ಷಿತ ಹೆಜ್ಜೆ ಇರಿಸಿದ ವಿಕ್ರಮ!
ಕೋಟ್ಯಂತರ ಪೂಜೆಯ ಫಲ.. ಚಂದ್ರಯಾನ-3 ಸಫಲ!

ಚಂದ್ರನ ಕಠಿಣ ನೆಲೆ ದಕ್ಷಿಣ ಧ್ರುವದಲ್ಲಿ ವಿಕ್ರಮ ಸುರಕ್ಷಿತವಾಗಿ ಇಳಿದಿದ್ದಾನೆ. ವಿಕ್ರಮನ ಪರಾಕ್ರಮಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಇಸ್ರೋ ವಿಜ್ಞಾನಿಗಳ ಮಹತ್ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಇಸ್ರೋದ ಚಂದ್ರಯಾನ-3 ಯಶಸ್ಸಿಗೆ ಕೋಟ್ಯಂತರ ಭಾರತೀಯರ ಪೂಜೆ, ಪ್ರಾರ್ಥನೆಗಳು ಫಲ ಕೊಟ್ಟಿವೆ. ದೆಹಲಿ, ಬೆಂಗಳೂರು ಸೇರಿದಂತೆ ದೇಗುಲಗಳಲ್ಲಿ ವಿಶೇಷ-ಪೂಜೆ ಪುನಸ್ಕಾರಗಳು ನಡೆದಿವೆ.

ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇಗುಲದಲ್ಲಿ ಇವತ್ತು ವಿಶೇಷ ಪೂಜೆ ನಡೆಸಲಾಗಿತ್ತು. ಇಸ್ರೋದ ಐತಿಹಾಸಿಕ ಕಾರ್ಯ ಯಶಸ್ಸಿಯಾಗಲಿ ಜೊತೆಗೆ ಮಳೆ-ಬೆಳೆಯಿಂದ ನಾಡು ಸುಭೀಕ್ಷವಾಗಿರಲಿ ಅಂತ ವಿಶೇಷ ಪೂಜೆ ನೆರವೇರಿಸಲಾಗಿತ್ತು.

ಚಂದ್ರಯಾನ-3 ಯಶಸ್ಸಿಗೆ ಗವಿಗಂಗಾಧರೇಶ್ವರನಿಗೆ ಪೂಜೆ!

ಬೆಂಗಳೂರಿನ ಮತ್ತೊಂದು ಪ್ರಮುಖ ದೇಗುಲ ಗವಿಗಂಗಾಧರೇಶ್ವರ ದೇಗುಲದಲ್ಲಿ ಇಸ್ರೋ ಪ್ರಯತ್ನ ಫಲ ಕೊಡಲೆಂದು ವಿಶೇಷ ಪೂಜೆ ನಡೆದಿತ್ತು. ಪ್ರಧಾನ ಆರ್ಚಕ ಸೋಮಸುಂದರ ದೀಕ್ಷಿತ್ ನೇತೃತ್ವದಲ್ಲಿ ಹೋಮ-ಹವನ, ನವಗ್ರಹಪೂಜೆ, ಚಂದ್ರ ಹೋಮ ನಡೆದಿತ್ತು.. ಮತ್ತೊಂದೆಡೆ ದೊಡ್ಡ ಗಣೇಶನಿಗೆ ಬೆಣ್ಣೆ ಅಲಂಕಾರ ಮಾಡಿ, ವಿಶೇಷವಾಗಿ ಭಾರತ ಮಾತೆಯ ಪೋಟೋಗೆ ಪೂಜೆ ಮಾಡುವ ಮೂಲಕ ಭಾರತದ ವಿಜ್ಞಾನಿಗಳು ಜೈಕಾರ ಕೂಗುವ ಮೂಲಕ ಭಕ್ತಾಧಿಗಳು ಚಂದ್ರಯಾನ ಯಶಸ್ವಿಗೆ ಪ್ರಾರ್ಥಿಸಿಕೊಂಡಿದ್ದರು.

ಅತ್ತ ಬೆಳಗಾವಿಯ ಶಹಾಪುರದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ಮಂದಿರದಲ್ಲಿ ವಿಶೇಷ ಪ್ರಾರ್ಥನೆ, ರುದ್ರಾಭಿಷೇಕ, ಮಹಾರುದ್ರಾಭಿಷೇಕ ಮಾಡಿ ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ‌ ಶ್ಲೋಕ ಹಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು.

ವಿಕ್ರಮನ ಸುರಕ್ಷಿತ ಲ್ಯಾಂಡಿಂಗ್​​ಗಾಗಿ ಮಕ್ಕಳಿಂದಲೂ ಪ್ರಾರ್ಥನೆ!

ಚಂದ್ರಯಾನ ಯಶಸ್ಸಿಗೆ ದೊಡ್ಡವರಲ್ಲದೇ ಶಾಲಾ ಮಕ್ಕಳು ಕೂಡ ಪ್ರಾರ್ಥಿಸಿದ್ದರು. ಗದಗದ ಶ್ರೀ ತೋಂಟದಾರ್ಯ ಪ್ರಾಥಮಿಕ & ಪ್ರೌಢ ಶಾಲೆಯ ನೂರಾರು ಮಕ್ಕಳು ಚಂದ್ರಯಾನ-3 ಯಶಸ್ವಿಯಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದರು. ಇತ್ತ ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯ ಹನೂರು ಕಾಡಂಚಿನ ಮಕ್ಕಳು ಕೂಡ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇನ್ನು ಹಾಸನ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಮೈಸೂರು, ಯಾದಗಿರಿ, ಕಲಬುರಗಿ ಸೇರಿ ವಿವಿಧೆಡೆ ವಿಶೇಷ ಪೂಜೆ-ಪುನಸ್ಕಾರಗಳು ನಡೆದಿದ್ದವು. ಒಟ್ಟಿನಲ್ಲಿ ಚಂದ್ರಯಾನ-3 ನಿರ್ವಿಘ್ನವಾಗಿ ಗುರಿ ಮುಟ್ಟಿದೆ. ಈ ಮೂಲಕ ಭಾರತ ಇಡೀ ಜಗತ್ತೇ ಹುಬ್ಬೇರುವಂತೆ ಮಾಡಿದೆ. ಕೋಟ್ಯಂತರ ಭಾರತೀಯರ ಪ್ರಾರ್ಥನೆ, ಹಾರೈಕೆ ಫಲ ನೀಡಿದ್ದು ಇಡೀ ದೇಶವೇ ಹೆಮ್ಮೆಯಿಂದ ಬೀಗುತ್ತಿದೆ. ದೇಶಾದ್ಯಂತ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: ಕೊನೆಗೂ ಸುರಕ್ಷಿತ ಹೆಜ್ಜೆ ಇರಿಸಿದ ವಿಕ್ರಮ; ಯಶಸ್ಸಿಗೆ ಎಲ್ಲೆಡೆ ಪೂಜೆ ಪುನಸ್ಕಾರ

https://newsfirstlive.com/wp-content/uploads/2023/08/dk-shivakumar-5.jpg

Load More