newsfirstkannada.com

ಇಂದು ಚಂದ್ರನನ್ನು ಚುಂಬಿಸಲಿದ್ದಾನೆ ವಿಕ್ರಂ.. ಸಾಫ್ಟ್​ ಲ್ಯಾಂಡಿಂಗ್​ ಯಶಸ್ವಿಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ

Share :

23-08-2023

    ಮಂಡ್ಯದ ವಿದ್ಯಾಗಣಪತಿಗೆ ಭಜರಂಗಸೇನೆ ಪೂಜೆ

    ಸೇಫ್​​ ಲ್ಯಾಂಡಿಂಗ್​ಗಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

    ಚಂದ್ರಯಾನ -3 ಸಕ್ಸಸ್​​ಗಾಗಿ ರಾಯರ ಮೊರೆ ಹೋದ ಬಿಜೆಪಿ

ಚಂದ್ರ ಚುಂಬನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ವಿಕ್ರಮ್​ ಲ್ಯಾಂಡರ್​​ ಚಂದ್ರನ ಮೇಲೆ ಸ್ಫಾಫ್ಟ್​ ಲ್ಯಾಂಡಿಂಗ್​ ಆಗಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ದೇಶವೇ ಕಾತುರದಿಂದ ಕಾಯ್ತಿದೆ. ವಿಶೇಷ ಅಂದ್ರೆ ವಿಕ್ರಮ್​​ ಲ್ಯಾಂಡರ್​​ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್​​ ಆಗುವಂತೆ ರಾಜ್ಯ, ದೇಶ, ವಿದೇಶದಲ್ಲೂ ಪೂಜೆ ಪುನಸ್ಕಾರ ನೆರವೇರಿಸಲಾಗ್ತಿದೆ.

ಚಂದ್ರಯಾನ 3. ಇದು ಇಸ್ರೋದ ಮಹಾತ್ವಾಕಾಂಕ್ಷಿ ಯೋಜನೆ. ಯಾರ ಕೈಲೂ ಸಾಧ್ಯವಾಗದ ಸಾಹಸಕ್ಕೆ ಭಾರತ ಕೈಹಾಕಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ತ್ರಿವಿಕ್ರಮ ಮೆರೆಯಲು ಇಸ್ರೋ ಮುಂದಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಚಂದ್ರಯಾನ 3 ನೌಕೆಯ ಲ್ಯಾಂಡರ್,​ ಚಂದಿರನ ಅಂಗಳದಲ್ಲಿ ಲ್ಯಾಂಡ್​ ಆಗಲಿದೆ. ಭಾರತ ಇತಿಹಾಸ ಸೃಷ್ಟಿಸೋಕೆ ಕೌಂಟ್​ಡೌನ್​ ಶುರುವಾಗಿದೆ.

ವಿಕ್ರಮನ ಸಾಫ್ಟ್​​ ಲ್ಯಾಂಡಿಂಗ್​​ಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ

ಕಳೆದ ಬಾರಿ ಕೊನೆಯ ಕ್ಷಣದಲ್ಲಿ ಚಂದ್ರಯಾನ – 2 ವಿಫಲವಾಗಿತ್ತು. ಇನ್ನೇನು ಚಂದಿರನ ಮೇಲೆ ವಿಕ್ರಮ್​ ಲ್ಯಾಂಡರ್​ ಲ್ಯಾಂಡ್​​ ಆಯ್ತು ಅನ್ನುವಷ್ಟರಲ್ಲಿ ಸಂಪರ್ಕ ಕಡಿತಗೊಂಡಿತ್ತು. ಶತಕೋಟಿ ಭಾರತೀರ ಆಸೆ ನುಚ್ಚು ನೂರಾಗಿತ್ತು. ಈ ಬಾರಿ ಇಂಥ ಅವಘಡ ಮರುಕಳಿಸದಂತೆ ಕೋಟಿ ಕೋಟಿ ಭಾರತೀಯರು ದೇವರ ಮೊರೆ ಹೋಗಿದ್ದಾರೆ.​​ ಸಾಫ್ಟ್​ ಲ್ಯಾಂಡಿಂಗ್​​ ಯಶಸ್ವಿಯಾಗಲೆಂದು ರಾಜ್ಯಾದ್ಯಂತ ಪ್ರಾರ್ಥನೆ ಸಲ್ಲಿಸಲಾಗ್ತಿದೆ. ದೇಶ, ವಿದೇಶದಲ್ಲೂ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಕಲಬುರಗಿಯಲ್ಲಿ ಸನ್ನತಿ ಚಂದ್ರಲಾಂಬೆ ಸನ್ನಿಧಿಯಲ್ಲಿ ಪೂಜೆ

ಚಂದ್ರಯಾನ -3 ಸಕ್ಸಸ್ ಆಗಲೆಂದು, ವಿಕ್ರಮ್​ ಲ್ಯಾಂಡರ್​ ಸಾಫ್ಟ್​​ ಲ್ಯಾಂಡಿಂಗ್​​ ಯಶಸ್ವಿಯಾಗಲೆಂದು ಕಲಬುರಗಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಗಿದೆ. ಸನ್ನತಿ ಚಂದ್ರಲಾಂಬೆ ಸನ್ನಿಧಿಯಲ್ಲಿ ಸತತ ಮೂರು ಗಂಟೆಗಳ ಕಾಲ ಶ್ರೀ ಸೂಕ್ತ ಪಾರಾಯಣ ಮಾಡಿ ಅರ್ಚಕರು ಪ್ರಾರ್ಥನೆ ಸಲ್ಲಿಸಿದ್ರು.

ಚಂದ್ರಯಾನ-3 ಯಶಸ್ವಿಗಾಗಿ ಕೋಲಾರದಲ್ಲಿ ವಿಶೇಷ ಪ್ರಾರ್ಥನೆ

ಕೋಲಾರದಲ್ಲಿ ಚಂದ್ರಯಾನ – 3 ಯಶಸ್ವಿಗಾಗಿ ಸಂಸದ ಮುನಿಸ್ವಾಮಿ ಹಾಗೂ ಕಾರ್ಯಕರ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ರು. ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.

ಮಂಡ್ಯದ ವಿದ್ಯಾಗಣಪತಿಗೆ ಭಜರಂಗಸೇನೆ ಪೂಜೆ

ಮಂಡ್ಯದ ವಿದ್ಯಾಗಣಪತಿ ಸನ್ನಿಧಿಯಲ್ಲೂ ಚಂದ್ರಯಾನ-3 ಸಕ್ಸಸ್​​ಗಾಗಿ ಭಜರಂಗಸೇನೆ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ರು. ವಿಕ್ರಮ್ ಲ್ಯಾಂಡರ್ ಯಾವುದೇ ತೊಂದರೆ ಇಲ್ಲದೆ ಲ್ಯಾಂಡ್ ಆಗಲಿ ಅಂತಾ ಪ್ರಾರ್ಥಿಸಿದ್ರು.

ಪಂಚಮುಖಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಸರ್ವಸಿದ್ಧಿ ಯಾಗ

ಇನ್ನು, ಮೈಸೂರಿನಲ್ಲೂ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರ್ವಸಿದ್ಧಿ ಯಾಗವನ್ನು ನಡೆಸಲಾಯ್ತು. ವಿಕ್ರಮ್ ಲ್ಯಾಂಡರ್ ಯಶಸ್ವಿಗಿ ಗುರಿ ತಲುಪಲೆಂದು ಮೈಸೂರು ನಾಗರೀಕರ ತಂಡದವರು ವಿಶೇಷ ಹೋಮ‌ ಹವನ ನೇರವೇರಿಸಿದ್ರು.

ಇನ್ನು ಸಾಫ್ಟ್​ ಲ್ಯಾಂಡಿಂಗ್​ ಸಕ್ಸಸ್​ ಆಗಲೆಂದು ರಾಮನಗರದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹಜರತ್ ಪೀರೇನ್ ಶಾ ವಲಿ ದರ್ಗಾಕ್ಕೆ ಭೇಟಿ ನೀಡಿ, ಮುಸ್ಲಿಂ ಬಾಂಧವರ ಜತೆ ಪ್ರಾರ್ಥನೆ ಸಲ್ಲಿಸಿದ್ರು.

ಶಿವಮೊಗ್ಗದಲ್ಲೂ ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ

ಚಂದಿರನ ಮೇಲೆ ವಿಕ್ರಮನ ಲ್ಯಾಂಡಿಂಗ್​ ಯಶಸ್ವಿಯಾಗಲೆಂದು ಸಾಗರದ ದರ್ಗಾವೊಂದರಲ್ಲೂ ಮುಸಲ್ಮಾನರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು.

ಚಂದ್ರಯಾನ – 3 ಸಕ್ಸಸ್​​ಗಾಗಿ ರಾಯರ ಮೊರೆ ಹೋದ ಬಿಜೆಪಿ

ಚಂದ್ರಯಾನ 3 ಯಶಸ್ವಿಯಾಗಲು ಮೈಸೂರು ಬಿಜೆಪಿ ಸದಸ್ಯರು ಮಂತ್ರಾಲಯದ ರಾಯರ ಮೊರೆ ಹೋಗಿದ್ದಾರೆ. ಇಂದು ಮಂತ್ರಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಉತ್ತರ ಪ್ರದೇಶದ ದರ್ಗಾದಲ್ಲೂ ವಿಶೇಷ ಪ್ರಾರ್ಥನೆ

ಕೇವಲ ಕರ್ನಾಟಕ ಮಾತ್ರವಲ್ಲ, ಉತ್ತರಪ್ರದೇಶದ ಲಕ್ನೋದ ಮಸೀದಿಯೊಂದರಲ್ಲಿ ಮುಸ್ಲಿಂ ಬಾಂಧವರು ಚಂದ್ರಯಾನ ಯಶಸ್ಸಿಗೆ ನಮಾಜ್​ ಮಾಡಿ ಪಾರ್ಥಿಸಿದ್ದಾರೆ.

ಚಂದ್ರಯಾನ ಯಶಸ್ವಿಗಾಗಿ ಉತ್ತರಾಖಂಡದಲ್ಲಿ ಗಂಗಾ ಆರತಿ

ಇನ್ನು ಚಂದ್ರಯಾನ-3 ಯಶಸ್ವಿಯಾಗಿ ಉತ್ತರಾಖಂಡದ ರಿಷಿಕೇಶದ ಪರಮಾರ್ಥ ನಿಕೇತನ ಘಾಟ್‌ನಲ್ಲಿ ಗಂಗಾ ಆರತಿ ಮಾಡಲಾಯ್ತು.. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು.. ಆರತಿ ಬೆಳಗಿ ಚಂದ್ರನಯಾನ ಯಶಸ್ವಿಯಾಗಲಿ ಅಂತ ಭಕ್ತರು ಗಂಗಾ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ರು.

ಲಂಡನ್​​ನಲ್ಲೂ ಭಾರತೀಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ

ಇದಿಷ್ಟೇ ಅಲ್ಲ.. ಇಸ್ರೋ ಮಹಾತ್ವಾಕಾಂಕ್ಷೆಯ ಯೋಜನೆ ಸಕ್ಸಸ್​​ ಆಗಬೇಕೆಂದು ವಿದೇಶದಲ್ಲೂ ಭಾರತೀಯರು ದೇವರ ಮೊರೆ ಹೋಗಿದ್ದಾರೆ. ಲಂಡನ್​​ನಲ್ಲಿ ಭಾರತೀಯ ವಿದ್ಯಾರ್ಥಿಯರು ಶ್ರೀ ಆದ್ಯ ಶಕ್ತಿ ಮಾತಾಜಿ ದೇಗುದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನು ಪುಟ್ಟ ಬಾಲಕಿಯೊಬ್ಬಳೂ ಚಂದ್ರಯಾನ-3 ಸಕ್ಸಸ್​​ ಆಗಬೇಕೆಂದು ಚಂದಮಾಮನಿಗೆ ರಿಕ್ವೆಸ್ಟ್​ ಮಾಡಿದ್ದಾಳೆ. ಡಿಯರ್​ ಮೂನ್​.. ಪ್ಲೀಸ್​ ಬೀ ಕೈಂಡ್​ ಟು ಅವರ್​ ಚಂದ್ರಯಾನ್​ – 3.. ವಿಕ್ರಮ್​ ಲ್ಯಾಂಡರ್​​ಗೆ ಒಂದೇ ಒಂದು ಸ್ಕ್ರಾಚ್​ ಆಗದಂತೆ ನೋಡಿಕೊ ಅಂತಾ ​ಹೇಳಿದ್ದಾಳೆ.

ಒಟ್ಟಾರೆ ಕೋಟ್ಯಾಂತರ ಭಾರತೀಯರು ಚಂದ್ರನಲ್ಲಿ ವಿಕ್ರಂ ಲ್ಯಾಂಡರ್‌ನ ಸೇಫ್ ಲ್ಯಾಂಡಿಂಗ್‌ಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕೋಟ್ಯಂತರ ಭಾರತೀಯರ ಎದೆಯಲ್ಲಿ ಈಗಾಗಲೇ ಢವ ಢವ ಶುರುವಾಗಿದೆ. 2019ರ ಸೆಪ್ಟೆಂಬರ್ 6ರಂದು ಉಂಟಾಗಿದ್ದ ಆಘಾತ ಮತ್ತೆ ಮರುಕಳಿಸದೇ ಇರಲಿ ಅನ್ನೋದೇ ಶತಕೋಟಿ ಭಾರತೀಯರ ಆಶಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಚಂದ್ರನನ್ನು ಚುಂಬಿಸಲಿದ್ದಾನೆ ವಿಕ್ರಂ.. ಸಾಫ್ಟ್​ ಲ್ಯಾಂಡಿಂಗ್​ ಯಶಸ್ವಿಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ

https://newsfirstlive.com/wp-content/uploads/2023/08/Chandrayaan-3-3.jpg

Load More