newsfirstkannada.com

ವಿಶ್ವಕಪ್​ ಪ್ಲಾನ್​ನಲ್ಲಿ ಬದಲಾವಣೆ.. ಸಂಜುಗೆ ಕೊಕ್​, ಇಶಾನ್​ ಕಿಶನ್​ಗೆ ಸ್ಥಾನ ಕನ್​ಫರ್ಮ್! ಆಯ್ಕೆ ರೇಸ್​ನಲ್ಲಿದ್ದಾನೆ ಮತ್ತೊಬ್ಬ ಮಗಧೀರ

Share :

17-08-2023

    ವಿಂಡೀಸ್​ ವಿರುದ್ಧ ಪ್ಲಾಫ್, ಸಂಜುಗೆ ಡೋರ್​ ಕ್ಲೋಸ್​

    ವಿಶ್ವಕಪ್​ ಆಯ್ಕೆ ರೇಸ್​ಗೆ ಎಂಟ್ರಿ ಕೊಟ್ಟ ತಿಲಕ್​ ವರ್ಮಾ

    ಟೀಮ್​ ಇಂಡಿಯಾದ ವಿಶ್ವಕಪ್​ ಪ್ಲಾನ್​ನಲ್ಲಿ ಬದಲಾವಣೆ

ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​, ಸೆಲೆಕ್ಷನ್​ ಕಮಿಟಿಯ ಬ್ಲ್ಯೂ ಪ್ರಿಂಟ್​ನಲ್ಲಿ ಭಾರೀ ಬದಲಾವಣೆಯಾಗಿದೆ. ಇಷ್ಟು ದಿನ ವಿಶ್ವಕಪ್​ಗೆ ಒಂದು ಪ್ಲಾನ್​ ಇತ್ತು. ಆದರೆ, ಈಗ ಇರೋ ಪ್ಲಾನ್ ಬೇರೆನೆ​. ಅಂದ್ರೆ ಫುಲ್​ ಅಪ್​​ಡೇಟೆಡ್​​. ಮೆಗಾ ಟೂರ್ನಿಯ ಪ್ಲಾನ್​ಗೆ​​ ಸುನಾಮಿಯಂತೆ ಡೇರ್​ ಡೆವಿಲ್​ ತಿಲಕ್​ ವರ್ಮಾ ಎಂಟ್ರಿ ಕೊಟ್ಟಿದ್ದಾರೆ. ತಿಲಕ್​ ಎಂಟ್ರಿ ಕಾನ್ಪಿಡೆನ್ಸ್​ ಲೆವೆಲ್​ ಅನ್ನ ನೆಕ್ಸ್ಟ್​ ಲೆವೆಲ್​ಗೆ ಹೆಚ್ಚಿಸಿದೆ.

ವಿಶ್ವಕಪ್​ಗೆ ಟೀಮ್​ ಇಂಡಿಯಾ ಸೆಲೆಕ್ಷನ್​ ಇನ್ನೂ ಕಗ್ಗಂಟಾಗೆ ಉಳಿದಿದೆ. ಅದ್ರ ನಡುವೆಯೂ ಸೆಲೆಕ್ಷನ್​ ಕಮಿಟಿ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​​ಗೆ ಸ್ವಲ್ಪ ರಿಲೀಫ್​ ಸಿಕ್ಕಿದೆ. ಮೆಗಾ ಟೂರ್ನಿಗೆ ರೆಡಿಯಾಗಿದ್ದ ಹಳೆ ಪ್ಲಾನ್​ ಹೋಗಿ ಇದೀಗ ಹೊಸ ಪ್ಲಾನ್​ ತಯಾರಾಗಿದ್ದು, ಬಿಸಿಸಿಐ ಬಾಸ್​​ಗಳು ಫುಲ್​ ಖುಷ್​ ಆಗಿದ್ದಾರೆ. ತಂಡಕ್ಕೆ ತಲೆದೂರಿದ್ದ ಕನ್​​ಫ್ಯೂಶನ್​​ಗೆ ಪರಿಹಾರ ಸಿಕ್ಕಿದೆ.

ವಿಂಡೀಸ್​ ವಿರುದ್ಧ ಪ್ಲಾಫ್​ ಶೋ, ಸಂಜುಗೆ ಡೋರ್​ ಕ್ಲೋಸ್​.!

ವೆಸ್ಟ್​ ಇಂಡೀಸ್​​ ಪ್ರವಾಸದಲ್ಲಿ ಸಿಕ್ಕ ಚಿನ್ನದಂತಾ ಅವಕಾಶಗಳನ್ನ ಸಂಜು ಸ್ಯಾಮ್ಸನ್​ ಕೈ ಚೆಲ್ಲಿದ್ರು. ಏಕದಿನ ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ನೀರಸ ಪರ್ಫಾಮೆನ್ಸ್​ ನೀಡಿದ್ರೂ ಕೂಡ ಸಂಜು ಸಾಮರ್ಥ್ಯ ಪರೀಕ್ಷೆ ಮಾಡಲು ಟಿ20 ಸರಣಿಯಲ್ಲಿ ಅವಕಾಶ ನೀಡಲಾಯ್ತು. ಆದ್ರೆ, ಅಲ್ಲೂ ಸಂಜು ಸ್ಯಾಮ್ಸನ್​ ನೀಡಿದ್ದು, ಪ್ಲಾಫ್​ ಶೋ.! ಈ ಹೀನಾಯ ಪ್ರದರ್ಶನದ ಪರಿಣಾಮ ವಿಶ್ವಕಪ್​ ಪ್ಲಾನ್​ ನಿಂದ ಸಂಜು ಔಟ್​ ಆಗಿದ್ದಾರೆ.

ಸಂಜುಗೆ ಕೊಕ್​, ಇಶಾನ್​ ಕಿಶನ್​ಗೆ ಸ್ಥಾನ ಕನ್​ಫರ್ಮ್​.!

ಕೆ.ಎಲ್​ ರಾಹುಲ್​ಗೆ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಆಗಿ ಮಣೆ ಹಾಕೋದು ಟೀಮ್​ ಮ್ಯಾನೇಜ್​ಮೆಂಟ್​ನ ಸದ್ಯದ ಪ್ಲಾನ್​. ರಾಹುಲ್​ ಹೊರತುಪಡಿಸಿ ​ಇಷ್ಟು ದಿನ ಸಂಜು ಸ್ಯಾಮ್ಸನ್​, ಇಶಾನ್​ ಕಿಶನ್​ ನಡುವೆ ಬ್ಯಾಕಪ್​ ವಿಕೆಟ್​ ಕೀಪರ್​ ಸ್ಥಾನಕ್ಕೆ ರೇಸ್​ ಏರ್ಪಟ್ಟಿತ್ತು. ಇದೀಗ ಲೈನ್​ ಕ್ಲೀಯರ್​ ಆಗಿದೆ. ಇಂಪ್ರೆಸ್ಸಿವ್​ ಪ್ರರ್ದರ್ಶನ ನೀಡಿರುವ ಇಶಾನ್​ ಕಿಶನ್​ಗೆ ಬ್ಯಾಕ್​ ಅಪ್​ ವಿಕೆಟ್​ ಕೀಪರ್​ ಆಗಿ ಮಣೆ ಹಾಕೋದು ಕನ್​ಫರ್ಮ್​ ಆಗಿದೆ.

ವಿಶ್ವಕಪ್​ ಆಯ್ಕೆ ರೇಸ್​ಗೆ ಎಂಟ್ರಿ ಕೊಟ್ಟ ತಿಲಕ್​ ವರ್ಮಾ.!

ಒಂದು ಕಡೆ ಸಂಜು ಸ್ಯಾಮ್ಸನ್​ ವಿಶ್ವಕಪ್​ ಪ್ಲಾನ್​ನಿಂದ ಹೊರ ಬೀಳ್ತಾ ಇದ್ದಂತೆ, ಯಂಗ್​ಗನ್​ ತಿಲಕ್​ ವರ್ಮಾ ತಂಡದ ಆಯ್ಕೆಯ ರೇಸ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಅವಕಾಶದಲ್ಲೇ ಮಿಂಚಿದ ತಿಲಕ್​ ವರ್ಮಾ, ಅನುಭವಿಗಳೂ ನಾಚುವಂತ ಪರ್ಫಾಮನ್ಸ್​ ನೀಡಿದ್ರು. ವಿಂಡೀಸ್​ ಬೌಲರ್​ಗಳನ್ನ ದಿಟ್ಟವಾಗಿ ಎದುರಿಸಿ ರನ್​ ಹೊಳೆ ಹರಿಸಿದ್ರು. ತಿಲಕ್​ ಆಟಕ್ಕೆ ಟೀಮ್​ ಮ್ಯಾನೇಜ್​ಮೆಂಟ್​ ಫಿದಾ ಆಗಿದ್ದು, ವಿಶ್ವಕಪ್​ ಟಿಕೆಟ್​​ ಸಿಗೋ ಸಾದ್ಯತೆ ದಟ್ಟವಾಗಿದೆ. ​

ತಿಲಕ್​ಗೆ ಸ್ಥಾನ ನೀಡೋದ್ರ ಹಿಂದಿದೆ ಭಾರಿ ಲೆಕ್ಕಾಚಾರ.!

ತಿಲಕ್​ ವರ್ಮಾಗೆ ವಿಶ್ವಕಪ್​ ತಂಡದಲ್ಲಿ ಸ್ಥಾನ ನೀಡೋದ್ರ ಹಿಂದೆ ಭಾರೀ ಲೆಕ್ಕಾಚಾರವಿದೆ. ತಂಡದ ಹಲವು ಸಮಸ್ಯೆಗಳಿಗೆ ತಿಲಕ್​ ಪರಿಹಾರವಾಗಬಲ್ಲರು.

ಸದ್ಯ ಟೀಮ್​ ಇಂಡಿಯಾಗೆ 4ನೇ ಕ್ರಮಾಂಕ ಕಗ್ಗಂಟಾಗಿದ್ದು ಅದಕ್ಕೆ ತಿಲಕ್​ ವರ್ಮಾ ಪರಿಹಾರವಾಗಬಲ್ಲರು. ಇನ್ನು, ತಿಲಕ್ ಪ್ಲೇಯಿಂಗ್​ ಇಲೆವೆನ್​ಗೆ ಎಂಟ್ರಿಯಾದ್ರೆ, ಲೆಫ್ಟ್​ ಹ್ಯಾಂಡ್​ ಕಾಂಬಿನೇಷನ್​ ಸಿಗಲಿದೆ. ಇದ್ರಿಂದ ಟೀಮ್​ ಬ್ಯಾಲೆನ್ಸ್​ ಹೆಚ್ಚಿಸಲಿದೆ. ಇನ್ನು ಪಾರ್ಟ್​​ ಟೈಮ್​ ಬೌಲಿಂಗ್​ ಮಾಡೋ ಸಾಮರ್ಥ್ಯದ ಜೊತೆಗೆ ಅದ್ಭುತವಾದ ಫೀಲ್ಡರ್​ ಕೂಡ ತಂಡಕ್ಕೆ ಸಿಗಲಿದ್ದಾರೆ. ಒತ್ತಡದ ಸಂದರ್ಭದಲ್ಲಿ ಅಗ್ರೆಸ್ಸೀವ್​ ಆಟವಾಡೋ ಸಾಮರ್ಥ್ಯವಿದ್ದು, ಬ್ಯಾಟಿಂಗ್​ನಲ್ಲಿ ​ರಿಷಭ್​ ಪಂತ್​ ಅಲಭ್ಯತೆ ಕಾಡದಂತೆ ಸ್ಥಾನ ತುಂಬಬಲ್ಲರು.

ತಿಲಕ್​ ವರ್ಮಾ ಟೀಮ್​ ಇಂಡಿಯಾದ ವಿಶ್ವಕಪ್​ ಪ್ಲಾನ್​ಗೆ ಎಂಟ್ರಿ ಕೊಟ್ರೆ, ತಂಡದ ಬಲ ಹೆಚ್ಚೋದ್ರಲ್ಲಿ ನೋ ಡೌಟ್​.! ಆದ್ರೆ, ಒಂದು ವೇಳೆ ಕೆ.ಎಲ್​ ರಾಹುಲ್​ ಹಾಗೂ ಶ್ರೇಯಸ್​ ಅಯ್ಯರ್​ ಇಬ್ಬರೂ ಕಮ್​​ಬ್ಯಾಕ್​ ಮಾಡಿದ್ರೆ, ತಿಲಕ್​ಗೆ ಸ್ಥಾನ ಸಿಗುತ್ತಾ.? ತಂಡದಲ್ಲಿ ಸ್ಥಾನ ಸಿಕ್ರೂ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಅವಕಾಶ ಸಿಗುತ್ತಾ.? ಅನ್ನೋದೆ ಸದ್ಯದ ಕುತೂಹಲವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ ಪ್ಲಾನ್​ನಲ್ಲಿ ಬದಲಾವಣೆ.. ಸಂಜುಗೆ ಕೊಕ್​, ಇಶಾನ್​ ಕಿಶನ್​ಗೆ ಸ್ಥಾನ ಕನ್​ಫರ್ಮ್! ಆಯ್ಕೆ ರೇಸ್​ನಲ್ಲಿದ್ದಾನೆ ಮತ್ತೊಬ್ಬ ಮಗಧೀರ

https://newsfirstlive.com/wp-content/uploads/2023/08/Ishan-Kishan.jpg

Load More